ಗಣೇಶ್‌ ಮನೆ ಅರಮನೆ!

ರಮನೆಗೆ ಮೊದಲು ಸಿಗುವ ಮನೆ ಕತೆಯಿದು. ತ್ಯಾಗರಾಜ ನಗರದಲ್ಲಿರುವ ನಾಗಸಂದ್ರ ಸರ್ಕಲ್‌ ಪಕ್ಕದಲ್ಲೊಂದು ಗಲ್ಲಿ. ಅದು ಮಾಡೆಲ್‌ಹೌಸ್‌ ಸ್ಟ್ರೀಟ್‌. ಅಲ್ಲಿ ಮನೆ ಎಂದು ಹೇಳಿಕೊಳ್ಳಬಹುದಾದ ರೂಮು ಅಥವಾ ರೂಮು ಎಂದು ಕರೆದುಬಿಡಬಹುದಾದ ಮನೆ. ಆ ಪುಟ್ಟ ಮನೆಗೊಂದು ಟೆರೇಸು.

ನಾಲ್ಕು ವರ್ಷಗಳ ಹಿಂದಿನ ರಾತ್ರಿಗಳಲ್ಲಿ ಆ ಟೆರೇಸಿನ ಮೇಲೆ ಕುಳಿತು ಇನ್ನೂ ಹುಟ್ಟಿಕೊಳ್ಳಬೇಕಾಗಿದ್ದ ತಾರೆ ಗಣೇಶ್‌ ಮತ್ತು ಹುಟ್ಟಿಕೊಳ್ಳಬೇಕಾಗಿದ್ದ ನಿರ್ದೇಶಕ ನಾಗಶೇಖರ್‌ ಹರಟೆ ಹೊಡೆಯುತ್ತಿದ್ದರು. ಮೈಗೊಂದು ಟವೆಲ್‌ ಸುತ್ತಿಕೊಂಡು ಆಕಾಶದಲ್ಲಿ ತಾರೆಗಳನ್ನು ನೋಡುತ್ತಾ ಬದಲಾಗದ ತಮ್ಮ ತಾರಾಬಲದ ಕುರಿತು ಗೊಂದಲಗೊಳ್ಳುತ್ತಾ ಸಿನಿಮಾಗಳ ಕುರಿತು ಮಾತಾಡುತ್ತಿದ್ದರು. ಸಣ್ಣದೊಂದು ಸಿನಿಮಾದಲ್ಲಿ ಮಾಡಿದ ಸಣ್ಣದೊಂದು ಪಾತ್ರಕ್ಕೆ ಬಂದಿದ್ದ ಹಣದಲ್ಲೇ ತಿಂಗಳು ಮುಗಿಸುವ ಆಲೋಚನೆಯ ನಡುವೆ ದಿನಾ ರಾತ್ರಿ ತಾರೆ ಟೆರೇಸ್‌ ಪರ್‌!

ಓದನ್ನು ಮುಂದುವರೆಸಿ

Advertisements

1 ಟಿಪ್ಪಣಿ

Filed under ಬಾಲ್ಕನಿ

ಗಾಳಿಪಟ:ಮಾತಿನ ಪಟ ಪ್ರೀತಿಯ ಪುಟ

ಮುಗಿಲಪೇಟೆಯಿಂದ ಬಣ್ಣಬಣ್ಣದ ಕಾಗದ ತಂದಿದ್ದಾರೆ. ಮಳೆಕಾಡಿನ ಕಡ್ಡಿಗಳಿಂದ ಹಂದರ ರಚಿಸಿ ಭಾವನೆಗಳ ಅಂಟಿನಿಂದ ಅಂಟಿಸಿದ್ದಾರೆ. ತುಸು ಹೆಚ್ಚೇ ಎನಿಸುವಂತೆ ಸಂಭಾಷಣೆಗಳ ಬಾಲಂಗೋಚಿಯನ್ನು ಜೋಡಿಸಿ, ಜನಪ್ರಿಯ ಸಿನಿಮಾಗಳ ಮಿನುಗುವ ಬೇಗಡೆಯಿಂದ ಅಲಂಕರಿಸಿ ನಿರ್ದೇಶಕ ಯೋಗರಾಜ್‌ ಭಟ್‌ `ಗಾಳಿಪಟ’ ಹಾರಿಸಿದ್ದಾರೆ!ಗಾಳಿಪಟ ಇಲ್ಲಿ ಪತ್ರವಾಗುತ್ತದೆ. ಪಾತ್ರವಾಗುತ್ತದೆ. ರೂಪಕವಾಗುತ್ತದೆ. ಹಸಿರೇ ತುಂಬಿಕೊಂಡಿರುವ, ಕೆಸರಿಲ್ಲದ, ಮುಗಿಲುಪೇಟೆಯೆಂಬ ಹೊಸಪೇಟೆಯನ್ನು ಸೃಷ್ಟಿಸುವ ನಿರ್ದೇಶಕರು ಸೂತ್ರ ಕಿತ್ತುಹೋದ ಗಾಳಿಪಟದಂತಾಗಿರುವ ಮೂರು ಹುಡುಗರನ್ನು ಈ ಊರಿಗೆ ತರುತ್ತಾರೆ. ಅದರಲ್ಲೊಬ್ಬ ವಾಚಾಳಿ. ಮತ್ತೊಬ್ಬ ಭಗ್ನಪ್ರೇಮಿ. ಇನ್ನೊಬ್ಬ ಸಂಕೋಚದ ಮುದ್ದೆ. ಇದಕ್ಕೆ ತದ್ವಿರುದ್ಧವಾಗಿರುವ ಸ್ವಭಾವದ ಮೂವರು ಹುಡುಗಿಯರೊಂದಿಗೆ ಇವರ ಮುಖಾಮುಖಿ. ಪ್ರೇಮ ಪ್ರಕರಣ. ಇದು ಕತೆ.

ಓದನ್ನು ಮುಂದುವರೆಸಿ

ನಿಮ್ಮ ಟಿಪ್ಪಣಿ ಬರೆಯಿರಿ

Filed under ಸಿನಿಮಾ

ಸಿನಿಮಾ:ಗಜ ರಾಜ್ಯೋತ್ಸವ!

ಭಾವನೆಗಳ ನಂಟಿನ ಜೊತೆ ಪ್ರೀತಿಯ ಅಂಟು. ಹಾಸ್ಯದ ಜೊತೆ ಸ್ವಲ್ಪ ಅಪಹಾಸ್ಯ. ಯುರೋಪ್‌ನ ಬೆಟ್ಟ ಗುಡ್ಡಗಳಲ್ಲಿ ಹಾಡು, ಕುಣಿತ. ಬ್ಯಾಂಕಾಕ್‌ನಲ್ಲೊಂದು ಐಟಮ್‌ ನಂಬರ್‌. ನಡುನಡುವೆ ದುಷ್ಟ ಮರ್ದನ ಮತ್ತು ರುಂಡ ಛೇದನ!

ದರ್ಶನ್‌ ಸಿನಿಮಾಗಳಿಗೆ ಸಹಜ ಎನಿಸುವ ಈ ಸೂತ್ರದೊಳಗೇ `ಗಜ’ ಕತೆ ತೆರೆದುಕೊಳ್ಳುತ್ತದೆ, ಬೆಳೆಯುತ್ತದೆ ಮತ್ತು ಮುಗಿಯುತ್ತದೆ. ಸಾಮಾನ್ಯ ಹುಡುಗನೊಬ್ಬ ಹುಡುಗಿಯೊಬ್ಬಳ ಪ್ರಪಂಚ ಪ್ರವೇಶಿಸಿ, ಆ ಜಗತ್ತಿನಲ್ಲಿ ನಡೆಯುವ ಜಗಳದಲ್ಲಿ ಭೀಕರವಾಗಿ ಹೊಡೆದಾಡಿ, ಗ್ಲಾಸು ಪುಡಿಪುಡಿ ಮಾಡಿ, ಕಾರುಗಳನ್ನು ಆಕಾಶಕ್ಕೆ ಹಾರಿಸಿ, ಸಂಹಾರ ಇತ್ಯಾದಿ ಚಟುವಟಿಕೆಗಳನ್ನು ಸಾಂಗವಾಗಿ ನಡೆಸಿ ಕೊನೆಗೂ ಗೆಲ್ಲುವ ಕತೆಯಿದು. ಪ್ರೀತಿ ಇಲ್ಲಿ ಆಟಕ್ಕುಂಟು. ಲೆಕ್ಕಕ್ಕಿಲ್ಲ. ದ್ವೇಷ ಲೆಕ್ಕಕ್ಕುಂಟು. ಆಟಕ್ಕೂ ಉಂಟು. ಹೀಗೆ ಇದು ಅಪ್ಪಟ ದರ್ಶನ್‌ ಸಿನಿಮಾ!

ಓದನ್ನು ಮುಂದುವರೆಸಿ

ನಿಮ್ಮ ಟಿಪ್ಪಣಿ ಬರೆಯಿರಿ

Filed under ಸಿನಿಮಾ

ಸಿನಿಮಾ: ಮತ್ತದೇ ಪ್ರೀತಿ, ಅದೇ ಬೆಳದಿಂಗಳು!

 `ಬೆಳದಿಂಗಳಾಗಿ ಬಾ’  ಸಿನಿಮಾದಲ್ಲಿ ಬೆಳದಿಂಗಳಿಲ್ಲ. ಆದರೆ ಬೆಳದಿಂಗಳಂಥ ಹುಡುಗಿಯಿದ್ದಾಳೆ. ಬಾ ಎಂದು ಯಾರೂ ಕರೆಯುವುದಿಲ್ಲ. ಆದರೂ ಅಮವಾಸ್ಯೆಯಂಥ ಡಾನ್‌ಗಳು ಪದೇ ಪದೇ ಹಾಜರಾಗುತ್ತಾರೆ. ಪ್ರೀತಿಯನ್ನು ಪ್ರೀತಿಯಿಂದಲೇ ಗೆಲ್ಲಲು ಹೊರಟವನ ಕತೆ ಅಂದುಕೊಂಡಂತೆಯೇ ಆರಂಭವಾಗಿ ಅಂದುಕೊಂಡಂತೆಯೇ ಮುಗಿಯುತ್ತದೆ. ಆದರೆ ನಡುವಿನ ಹಾದಿಯಲ್ಲಿ ಮುನ್ಸೂಚನಾ ಫಲಕಗಳಿಲ್ಲದೇ ಸಿಗುವ ಅಚ್ಚರಿಯ ತಿರುವುಗಳಿವೆ. ಈ ಅಚ್ಚರಿಗಳೇ ಸಿನಿಮಾದ ನಿಜವಾದ ಅಚ್ಚರಿ!

ಓದನ್ನು ಮುಂದುವರೆಸಿ

ನಿಮ್ಮ ಟಿಪ್ಪಣಿ ಬರೆಯಿರಿ

Filed under ಸಿನಿಮಾ

ದಾದಾಗಿರಿಯ ದಿನಚರಿ

ಪುಸ್ತಕ ಓದುವಾಗ ನಮ್ಮ ತಲೆಯಲ್ಲಿ ನಮ್ಮದೇ ಜಗತ್ತಿನಿಂದ ಹುಟ್ಟಿಕೊಂಡ ಚಿತ್ರಗಳು ಮೂಡುತ್ತಿರುತ್ತವೆ. ಕೊತ್ವಾಲ ಅಂತ ರೌಡಿ ಇದ್ದ ಎಂದರೆ ನಮ್ಮ ತಲೆಯಲ್ಲಿ ನಮ್ಮ ಭಾವಕ್ಕೆ, ನಮ್ಮ ಗ್ರಹಿಕೆಗೆ ತಕ್ಕುದಾದ ಕೊತ್ವಾಲ ಕಾಣತೊಡಗುತ್ತಾನೆ. ಸಿನಿಮಾ ಆಗುವಾಗ ನಮ್ಮ ಎದುರು ಸ್ಪಷ್ಟ ಚಿತ್ರ ಕಾಣಿಸತೊಡಗುತ್ತದೆ. ಅದು ನಮ್ಮ ಕಲ್ಪನೆಯ ಚಿತ್ರಕ್ಕಿಂತ ಬೇರೆ ಆಗಿರುವ ಸಾಧ್ಯತೆಯೇ ಹೆಚ್ಚು. ಹೀಗಾಗಿಯೇ ಪುಸ್ತಕವೊಂದನ್ನು ಓದಿ ಅದನ್ನು ಆಧರಿಸಿದ ಸಿನಿಮಾ ನೋಡುವಾಗ ನಮಗೆ ಗೊಂದಲವಾಗುತ್ತದೆ. `ದಾದಾಗಿರಿಯ ದಿನಗಳು’ ಪುಸ್ತಕವನ್ನು ಬಹುವಾಗಿ ಮೆಚ್ಚಿಕೊಂಡಿದ್ದ ನನಗೆ `ಆ ದಿನಗಳು’ ಚಿತ್ರವನ್ನು ನೋಡುವಾಗ ಹಲವು ಸಲ ಇಂಥ ಗೊಂದಲ ಕಾಡಿತು. ಇದರ ನಡುವೆಯೂ ಚಿತ್ರ ಮನಸ್ಸು ತಟ್ಟಿತು. ಚಿತ್ರದ ಕುರಿತು ಅನಿಸಿದ ಸಂಗತಿಗಳನ್ನು ಇಲ್ಲಿ ದಾಖಲಿಸಿದ್ದೇನೆ. ಓದನ್ನು ಮುಂದುವರೆಸಿ

6 ಟಿಪ್ಪಣಿಗಳು

Filed under ಬಾಲ್ಕನಿ

ಕನಸುಗಳ ಕಥಾಸಂಕಲನ

ಡ್ರೀಮ್ಸ್‌! ಹೆಸರೇ ಹೇಳುವಂತೆ ಕನಸುಗಳ ಕತೆಯಿರುವ ಸಿನಿಮಾ. ನಿರೂಪಕನ(ನಿರ್ದೇಶಕನ) ಬದುಕಿನ ಬೇರೆ ಬೇರೆ ಅವಸ್ಥೆಗಳಲ್ಲಿ ಕಂಡ ಕನಸುಗಳ ಕಥಾ ಸಂಕಲನ ಇದು. ಒಂದೊಂದು ಕನಸಿನದು ಒಂದೊಂದು ಕತೆ. ಆ ಕನಸಿಗೂ ಅನಂತರ ಹೇಳುವ ಕನಸಿಗೂ ಅರ್ಥಾತ್‌ ಸಂಬಂಧವಿಲ್ಲ. ಆದರೂ ಸಂಬಂಧ ಇದೆ! ಏಕೆಂದರೆ ಈ ಕನಸುಗಳನ್ನೆಲ್ಲಾ ಒಬ್ಬನೇ ಕಾಣುತ್ತಿದ್ದಾನೆ. ಆತನಲ್ಲಿ ಅವಸ್ಥಾಂತರಗಳು ಸಂಭವಿಸುತ್ತಿವೆ. ಹೀಗೆ ಎಂಟು ಕನಸುಗಳು ಬೇರೆ ಬೇರೆಯಾಗಿದ್ದೂ ಒಂದೇ ಕನಸಾಗುವ, ಕತೆಯಾಗುವ ವಿಸ್ಮಯವನ್ನು ನಿರ್ದೇಶಕ ಅಕಿರಾ ಕುರಸೋವಾ `ಡ್ರೀಮ್ಸ್‌’ ಸಿನಿಮಾದಲ್ಲಿ ಸೃಷ್ಟಿಸುತ್ತಾರೆ. ಓದನ್ನು ಮುಂದುವರೆಸಿ

2 ಟಿಪ್ಪಣಿಗಳು

Filed under ಬಾಲ್ಕನಿ

ಅಂತ್ಯಸಂಸ್ಕಾರ

ಪೊಲೀಷ್‌ ಭಾಷೆಯ ನೊಬಲ್‌ ಪ್ರಶಸ್ತಿ ಪುರಸ್ಕೃತ ಕವಯಿತ್ರಿ ವಿಸ್ಲಾವಾ ಸಿಂಬೋರ್‌ಸ್ಕಾಳ ವಿಶಿಷ್ಟ ಶೈಲಿಯ ಕವಿತೆ ಇದು. ವ್ಯಕ್ತಿಯೊಬ್ಬ ಸತ್ತ ದಿನ ಅವನ ಸಾವನ್ನು ನಿರ್ಭಾವುಕವಾಗಿ `ಆಡಿಕೊಳ್ಳುವು’ದನ್ನು ಕವಯಿತ್ರಿ ಅದ್ಭುತವಾಗಿ ಹಿಡಿದಿಟ್ಟಿದ್ದಾರೆ. ಅದನ್ನು ಅಷ್ಟೇ ಅದ್ಭುತವಾಗಿ ಕನ್ನಡಕ್ಕೆ ತಂದಿಡಲು ವಿಕಾಸ ನೇಗಿಲೋಣಿ ಪ್ರಯತ್ನಪಟ್ಟಿದ್ದಾರೆ! ಓದನ್ನು ಮುಂದುವರೆಸಿ

6 ಟಿಪ್ಪಣಿಗಳು

Filed under ವಿಕಾಸ