ಹೆಸರು ಕೃಷ್ಣ. ಸ್ನೇಹಿತರ ವಲಯದಲ್ಲಿ ಕಿಟ್ಟಿ. ದಾಖಲಾತಿಗಳಲ್ಲಿ ಎಸ್ ಕೃಷ್ಣ. ಗಾಂಧೀನಗರದಲ್ಲಿ ಕ್ಯಾಮರಾಮನ್ ಕೃಷ್ಣ. ಸಿನಿಮಾ ಪ್ರಿಯರಿಗೆಲ್ಲ ಮುಂಗಾರುಮಳೆ ಕೃಷ್ಣ!
ಇವರು ಬಂದಿದ್ದು ಬೆಂಗಳೂರಿನ ನೆಲಮಂಗಲದ ಸಮೀಪದಿಂದ. ಅಪ್ಪ ಸರಕಾರಿ ಉದ್ಯೋಗಿ. ಅಮ್ಮ ಗೃಹಿಣಿ. ಮಗ ಎಂಜಿನೀಯರೋ ಡಾಕ್ಟರೋ ಆದರೆ ಚೆನ್ನಾಗಿರುತ್ತದೆ ಎಂದು ಭಾವಿಸುತ್ತಿದ್ದ ಮಧ್ಯಮ ವರ್ಗದ ಕುಟುಂಬ. ಮಗನನ್ನು ಪಿಯೂಸಿಯಲ್ಲಿ ವಿಜ್ಞಾನ ವಿಭಾಗಕ್ಕೆ ಸೇರಿಸುವಾಗ ಬಹುಶಃ ಅಪ್ಪ ಅಮ್ಮನ ಕಣ್ಣ ಮುಂದೆ ಇದ್ದಿದ್ದು ಕಂಪ್ಯೂಟರ್ ಸೈನ್ಸು ಅಥವಾ ಇಲೆಕ್ಟ್ರಾನಿಕ್ಸ್‌ನಲ್ಲಿ ಎಂಜಿನೀಯರಿಂಗ್. Read More »
ಡಾ.ರಾಜ್‌ಕುಮಾರ್ ಇಲ್ಲದೇ ಒಂದು ವರ್ಷ. 365 ದಿನಗಳ ನಂತರವೂ ವರನಟನ ಸಾವು ನಮ್ಮ ಮನಸ್ಸಿನಲ್ಲಿನ್ನೂ ಜೀವಂತವಾಗಿದೆ. `ಓಂ’ ಚಿತ್ರದ ನಿರ್ದೇಶನದ ಸಂದರ್ಭದಲ್ಲಿ ರಾಜ್‌ಕುಮಾರ್ ಜೊತೆ ನಿಕಟ ಸಂಪರ್ಕ ಇಟ್ಟುಕೊಂಡಿದ್ದವರು ನಟ, ನಿರ್ದೇಶಕ ಉಪೇಂದ್ರ. ತಮ್ಮ ಮನೆಯ ಟೆರೇಸಿನ ಮೇಲೆ ಕುಳಿತು ಆ ದಿನಗಳನ್ನು ಉಪ್ಪಿ ನೆನಪು ಮಾಡಿಕೊಂಡರು. ಆಗ ಹೆಕ್ಕಿಕೊಂಡ ಸಂಗತಿಗಳನ್ನು ಇಲ್ಲಿ ದಾಖಲಿಸಲಾಗಿದೆ.
ಹೀರೋ ಆಗುತ್ತೇನೆ ಎಂದು ನಿರ್ದೇಶಕ ಪ್ರೇಮ್ ಹೊರಟಾಗ ಬೇಡ ಎಂದವರೇ ಹಲವರು. ಹೀಗಿದ್ದರೂ ಪ್ರೇಮ್ ಹೀರೋ ಆಗಿದ್ದಾರೆ. `ಪ್ರೀತಿ ಏಕೆ ಭೂಮಿ ಮೇಲಿದೆ?’ ಚಿತ್ರೀಕರಣ ಅರ್ಧದಷ್ಟು ಮುಗಿದಿದೆ. ಈ ನಡುವೆ ರಕ್ಷಿತಾ ಜೊತೆ ಮದುವೆಯಾಗಿದೆ. `ಪ್ರೀತಿ’ಯ ಹಾಡುಗಳು ಬಿಡುಗಡೆಯಾಗಿರುವ ಸಂದರ್ಭದಲ್ಲಿ ಪ್ರೇಮ್ ಮೊನ್ನೆ ಪತ್ರಕರ್ತರ ಜೊತೆ ಮಾತಾಡಿದರು. ಅದರ ವರದಿ ಇಲ್ಲಿದೆ.