ಮೊನ್ನೆ ಸಂಜೆ `ಮಾತಾಡ್ ಮಾತಾಡು ಮಲ್ಲಿಗೆ’ ಚಿತ್ರ ನೋಡಿ ಐನಾಕ್ಸ್‌ನಿಂದ ಹೊರಕ್ಕೆ
ಬಂದು ಮೆಟ್ಟಿಲು ಇಳಿಯುತ್ತಿದ್ದರೆ ನಾಗತಿಹಳ್ಳಿ ಚಂದ್ರಶೇಖರ್ ಬರೆದ ಕತೆಗಳೆಲ್ಲ ನೆನಪಾಗುತ್ತಿದ್ದವು. `ಮಲೆನಾಡಿನ ಹುಡುಗಿ ಮತ್ತು ಬಯಲು ಸೀಮೆಯ ಹುಡುಗ’ ಎಂಬ ಅವರ ಕತೆಯನ್ನು ಎಷ್ಟೆಲ್ಲ ಇಷ್ಟಪಟ್ಟಿದ್ದೆ. ಹದಿನೈದು ವರ್ಷಗಳ ಹಿಂದೆ, ಪ್ರೀತಿಯ ಅಮೂರ್ತತೆಯನ್ನು ಅರ್ಥಮಾಡಿಕೊಳ್ಳಲಾಗದೇ ಒದ್ದಾಡುತ್ತ, ಸಹಪಾಠಿ ಹುಡುಗಿಯರನ್ನು ಮನಸ್ಸಿನಲ್ಲೇ ಗುಟ್ಟಾಗಿ ಪ್ರೀತಿಸಿಬಿಡುತ್ತ ಹೈಸ್ಕೂಲಿಗೆ ಹೋಗುತ್ತಿದ್ದ ದಿನಗಳಲ್ಲಿ ಓದಿದ ಕತೆಯದು. ಆ ಕತೆಯನ್ನು ಗುಂಡ್ಕಲ್ಲಿನ ಹೆಂಚಿನ ಮನೆಯ ಮಹಡಿಯಲ್ಲಿ ಕುಳಿತು ಓದಿದ ಆ ಸಂಜೆ ಹೊರಗಡೆ ಜೋರಾಗಿ ಮಳೆ ಸುರಿಯುತ್ತಿತ್ತು! ಮಳೆಯ ಹಿನ್ನೆಲೆಯಲ್ಲಿ, ಮುಗ್ಗು ವಾಸನೆಯ ನಡುವೆ ಅಂಥದ್ದೊಂದು ಪ್ರೇಮಕತೆ ಓದಿದ ನೆನಪು ಈಗಲೂ ನಿಚ್ಚಳವಾಗಿದೆ. Read More »
-
ಪುಟಗಳು
ವಿಭಾಗಗಳು
-
ಇತ್ತೀಚಿನ ಬರೆಹ
-
ಪ್ರತಿಕ್ರಿಯೆ
raaghu on ನನ್ನ ಕೃಷ್ಣ… ರೂಪ on ಮಲ್ಲೇಶ್ವರಂ… nanda on ನನ್ನ ಕೃಷ್ಣ… pbanagi on ಏನ್ ಹುಡುಗ… chiraviraha on ದಾದಾಗಿರಿಯ… -
ಲೆಕ್ಕಿಗ
- 15,068 hits
May 2008 M T W T F S S « Feb 1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 -
ಹಕ್ಕುಗಳು
© ಪರಮೇಶ್ವರ ಗುಂಡ್ಕಲ್ 2007 -
Top Posts
ಇದೊಂದು ಪುಟ್ಟ ಕತೆ. ಇರ್ವಿನ್ ಶಾರ ಕತೆಯೊಂದನ್ನು ಓದುತ್ತಿರುವಾಗ ಈ ಕತೆ ರೂಪುಗೊಂಡಿತು. ಇದು ಆ ಕತೆಯ ರೂಪಾಂತರ ಎನ್ನಬಹುದು. ಅಥವಾ ಆ ಕತೆಗೊಂದು ಪುಟ್ಟ ಪ್ರತಿಕ್ರಿಯೆ ಎನ್ನಬಹುದು. ಜಗಳವಾಡುತ್ತಲೇ ಸುಖವಾಗಿರುವ ಬೆಂಗಳೂರಿನ ಸಮಸ್ತ ಗಂಡ ಹೆಂಡತಿಯರನ್ನು ನೆನಪು ಮಾಡಿಕೊಳ್ಳುತ್ತಾ, ಮಲ್ಲೇಶ್ವರಂ ಸುಂದರಿಯರ ಕುರಿತು ಅಸೂಯೆ ಪಡುತ್ತಾ ಇದನ್ನು ಓದಿಕೊಳ್ಳಬಹುದು.