Category Archives: ವಿಕಾಸ

ವಿಶ್ಲೇಷಣೆ: ಅಳುತ ಅಳುತ ಬಾಳು ನೀನು!

ವಿಕಾಸ ನೇಗಿಲೋಣಿ ಬರಹ:
ಒಂದು ಸಿನಿಮಾದಲ್ಲಿ ನಾಯಕಿ ಅಳುತ್ತಾಳೆ ಮತ್ತು ಹಾಡುತ್ತಾಳೆ: ಅತ್ತೆ ಮನೆಯಲಿ ಅತ್ತು ಕರೆದರೆ ಅಮ್ಮ ಬರುವಳೇ. ಅಮ್ಮ ಬರುತ್ತಾಳೋ ಇಲ್ಲವೋ ಗೊತ್ತಿಲ್ಲ, ಪ್ರೇಕ್ಷಕರಂತೂ ಬರುತ್ತಾರೆ! ಕನ್ನಡದ ನಿರ್ದೇಶಕರು, ನಿರ್ಮಾಪಕರ ಬಾಯಲ್ಲಿ ಆಗಾಗ ಕೇಳಿಬರುವ `ಸೆಂಟಿಮೆಂಟ್‌ ಸಬ್ಜೆಕ್ಟ್‌’ನ ಕತೆ ಇದು. ಸುಲಭವಾಗಿ ಹೇಳಬೇಕೆಂದರೆ ಅವು ಕಣ್ಣೀರಿನ ಸಿನಿಮಾಗಳು. ತವರಿನ ಸುಕುಮಾರಿ ಗಂಡನ ಮನೆಯಲ್ಲಿ ಅಬ್ಬೇಪಾರಿಯಾಗುವುದು ಇಲ್ಲೆಲ್ಲಾ ಸಾಮಾನ್ಯ. ಹೆಣ್ಣು ಕಣ್ಣೀರು ಹಾಕಿದರೆ ಮನೆಗೆ ಶ್ರೇಯಸ್ಕರವಲ್ಲ ಎಂದು ಹೇಳುವುದು ಶುದ್ದ ಸಾಂಸಾರಿಕ, ಹೆಣ್ಣು ಕಣ್ಣೀರು ಹಾಕಿದರೆ ಸಿನಿಮಾಕ್ಕೆ [...]

ನುಡಿಚಿತ್ರ:ಒಂದು ಬೀದಿಯ ಪ್ರಸಂಗ

ಇದು ವಿಕಾಸ ನೇಗಿಲೋಣಿ ಬರಹ. ಇವರು `ಪಿಚ್ಚರ್‌’ ತಂಡಕ್ಕೆ ಹೊಸ ಸೇರ್ಪಡೆ. ಈ ಬರಹವನ್ನು ಲಲಿತ ಪ್ರಬಂಧ, ಶಬ್ದಚಿತ್ರ, ಲಹರಿ ಹೀಗೆಲ್ಲ ಕರೆಯಬಹುದಾದರೂ ಇದು ನುಡಿಚಿತ್ರ ಎಂದು ಸ್ವತಃ ವಿಕಾಸ್‌ ಅನುಮಾನಪಟ್ಟಿದ್ದಾರೆ. ಕತೆಗಾರ, ಕವಿ ಇತ್ಯಾದಿ ಆರೋಪಗಳನ್ನೂ ಹೊಂದಿರುವ ಇವರು ಉದಯವಾಣಿಯಲ್ಲಿ ಪತ್ರಕರ್ತರು. ಇತ್ತೀಚೆಗಷ್ಟೇ ಮದುವೆಯಾಗಿರುವುದರಿಂದ `ಪುತ್ರಕರ್ತ’ರಾಗುವ ಅರ್ಹತೆಯೂ ಅವರಿಗೆ ಬಂದಿದೆ. ಅಂದಹಾಗೆ ಇದು ಮದುವೆಯಾಗುವ ಮೊದಲೇ ಬರೆದ ಬರಹ. ಹಾಗಾಗಿ ನಿರಾಳವಾಗಿ ಓದಬಹುದು.ನೆನಪಿರಲಿ: ಕಾರ್ಲ್‌ ಮಾರ್ಕ್ಸ್‌ ಅದ್ಭುತವಾದ ಪ್ರೇಮ ಕವಿತೆಗಳನ್ನು ಬರೆಯುತ್ತಿದ್ದ. ಒಂದು ದಿನ ಆತ [...]