Category Archives: ವಿಕಾಸ

ಅಂತ್ಯಸಂಸ್ಕಾರ

ಪೊಲೀಷ್‌ ಭಾಷೆಯ ನೊಬಲ್‌ ಪ್ರಶಸ್ತಿ ಪುರಸ್ಕೃತ ಕವಯಿತ್ರಿ ವಿಸ್ಲಾವಾ ಸಿಂಬೋರ್‌ಸ್ಕಾಳ ವಿಶಿಷ್ಟ ಶೈಲಿಯ ಕವಿತೆ ಇದು. ವ್ಯಕ್ತಿಯೊಬ್ಬ ಸತ್ತ ದಿನ ಅವನ ಸಾವನ್ನು ನಿರ್ಭಾವುಕವಾಗಿ `ಆಡಿಕೊಳ್ಳುವು’ದನ್ನು ಕವಯಿತ್ರಿ ಅದ್ಭುತವಾಗಿ ಹಿಡಿದಿಟ್ಟಿದ್ದಾರೆ. ಅದನ್ನು ಅಷ್ಟೇ ಅದ್ಭುತವಾಗಿ ಕನ್ನಡಕ್ಕೆ ತಂದಿಡಲು ವಿಕಾಸ ನೇಗಿಲೋಣಿ ಪ್ರಯತ್ನಪಟ್ಟಿದ್ದಾರೆ!

ನನ್ನ ಕೃಷ್ಣನ ಕಂಡೀರೇ

ಇದು ವಿಕಾಸ ನೇಗಿಲೋಣಿ ಬರಹ: ನಾನು ಬೆಳಿಗ್ಗೆ ಊಟಕ್ಕಿಂತ ಮೊದಲು ನೋಡುತ್ತಿದ್ದುದು ಕೃಷ್ಣನನ್ನೇ. ಆ ಕೃಷ್ಣ ಆಗ ಕೌಪೀನಧಾರಿಯಾಗಿರುತ್ತಿದ್ದ, ಚಿನ್ನದ ಜನಿವಾರ ಇರುತ್ತಿತ್ತು, ಸೊಂಟದಲ್ಲಿ ಮಕ್ಕಳಿಗೆ ಹಾಕಿದಂಥ ನೇವಳ ಇರುತ್ತಿತ್ತಾದ್ದರೂ ಅದು ನಮಗೆ ನಿಮಗೆ ಸಿಗದ ಚಿನ್ನದ ತೊಡುಗೆ. ಒಂದು ಕೈಯಲಿ ಕಡಗೋಲು, ಅತ್ತ ಅಮ್ಮ ಮೊಸರು ಕಡೆಯಲು ಕಡಗೋಲು ಹುಡುಕುತ್ತಿದ್ದರೆ ಅದನ್ನು ಬೆಳಬೆಳಗ್ಗೆ ಕೃಷ್ಣ ಕದ್ದು ಇಟ್ಟುಕೊಂಡಿದ್ದಾನೋ ಎಂದು ಭಾಸವಾಗುವಂತೆ. ಅದಕ್ಕಾಗಿಯೇ ಇರಿಸಿಕೊಂಡಂತೆ ಕಣ್ಣಲ್ಲಿ ಒಂದು ತುಂಟತನ, ಕಳ್ಳನಂತೆ ತುಟಿಯ ಕೊಂಕಲ್ಲೊಂದು ಕಿರುನಗು.

ಯಕ್ಷರಿಗೊಂದು ಪ್ರಶ್ನೆ

ಇದು ವಿಕಾಸ ನೇಗಿಲೋಣಿ ಬರಹ. ಪಿಚ್ಚರ್‌ನಲ್ಲಿ ಯಕ್ಷಗಾನವೇ ಎಂದು ಹುಬ್ಬೇರಿಸಬೇಡಿ. ಯಲ್ಲಾಪುರ, ಸಿದ್ಧಾಪುರ, ತೀರ್ಥಹಳ್ಳಿ, ಸಾಗರ, ಕಾಸರಗೋಡು, ಕುಂದಾಪುರದಂಥ ಊರಿನ ಹಂಗಾಮಿ ಯುವಕರನ್ನು ನಾಸ್ಟಾಲ್ಜಿಯಾದಂತೆ ಕಾಡುವ ಯಕ್ಷಗಾನವನ್ನು ವಿಕಾಸ್‌ ಅದ್ಭುತವಾಗಿ ಮೆಲುಕು ಹಾಕಿದ್ದಾರೆ. ಅವರು ಇತ್ತೀಚೆಗೆ ಬರೆದ ಒಳ್ಳೆಯ ಬರಹಗಳಲ್ಲಿ ಇದೂ ಒಂದು. ಓದಿ ನೋಡಿ.

ಸಿನಿಮಾ ಉಂಡುಟ್ಟವನ ಕತೆ

ಇದು ವಿಕಾಸ ನೇಗಿಲೋಣಿ ಬರಹ. ವಾರಕ್ಕೊಂದು ಕನ್ನಡ ಸಿನಿಮಾ ನೋಡಿ ಆಗುವ ಸುಸ್ತಿನ ನಡುವೆ ಮೆಚ್ಚಿನ ಸಿನಿಮಾವೊಂದನ್ನು ಅವರು ಇಲ್ಲಿ ನೆನಪು ಮಾಡಿಕೊಂಡಿದ್ದಾರೆ. 1988ರಲ್ಲಿ ಬಿಡುಗಡೆಯಾದ ಸಿನಿಮಾ ಪ್ಯಾರಾಡಿಸೋ ಕುರಿತು ಅವರ ಸವಿಸವಿ ನೆನಪುಗಳು ಇಲ್ಲಿವೆ. ಓದಿ.

ಮಳೆಗೆ ಹೊರಗೆ

ಇದು ವಿಕಾಸ ನೇಗಿಲೋಣಿ ಬರೆದ ಕವಿತೆ. ಇತ್ತೀಚೆಗೆ `ಮುಂಗಾರು ಮಳೆ’ ಚಿತ್ರ ಚೆನ್ನಾಗಿ ಓಡುತ್ತಿರುವುದರಿಂದ, ವಿಕಾಸ್‌ ಸಿನಿಮಾ ಪತ್ರಕರ್ತರಾಗಿರುವುದರಿಂದ, ಈ ಕವಿತೆ ಅದರ ದುಷ್ಪರಿಣಾಮ ಇರಬಹುದು ಎಂದು ಸಹಜವಾಗಿಯೇ ಅನಿಸುತ್ತದೆ. ಆದರೆ, ಅಂಥದ್ದೇನೂ ಇಲ್ಲವೆಂದೂ, ಇದು ಇನ್ಯಾವುದರದೋ ದುಷ್ಪರಿಣಾಮ ಎಂದು ಸ್ವತಃ ವಿಕಾಸ್‌ ಒಪ್ಪಿಕೊಂಡಿದ್ದಾರೆ! ಬೆಂಗಳೂರು ಮಳೆಯನ್ನು ನೋಡುತ್ತ ಮಲೆನಾಡಿನ ಮಳೆಯನ್ನು ನೆನಪಿಸಿಕೊಳ್ಳುತ್ತ ಇದನ್ನು ಬರೆದಂತಿದೆ. ಹೇಗೂ ಮಳೆ ಸುರಿಯುತ್ತಿದೆ. ಬೆಚ್ಚಗೆ ಓದಿಕೊಳ್ಳಿ.

ಕಳೆದುದು ಸಿಕ್ಕಿದೆ

ವಿಕಾಸ ನೇಗಿಲೋಣಿ ಇತ್ತೀಚೆಗೆ ಬರೆದ ಕವಿತೆ ಇದು. ಬಹಳ ದಿನಗಳ ಕಾಲ ಕವಿತೆ, ಕತೆ ಇತ್ಯಾದಿಗಳನ್ನೇನೂ ಬರೆಯದೇ ಮದುವೆಯಾಗಿ ಮನೆಯಲ್ಲಿ ಹಾಯಾಗಿ ಇದ್ದುಬಿಟ್ಟಿದ್ದ ವಿಕಾಸ್‌ ಈ ನಡುವಿನ ಬೇಸರದಲ್ಲೋ ಖುಷಿಯಲ್ಲೋ ಇದನ್ನು ಬರೆದಿದ್ದಾರೆ. ಓದಿ ನೋಡಿ.

ವಿಶ್ಲೇಷಣೆ: ಬಟ್ಟೆ ಕಡಿಮೆ, ಹೆಚ್ಚು ದುಡಿಮೆ!

ವಿಕಾಸ ನೇಗಿಲೋಣಿ ಬರಹ:ಈಸಬೇಕು ಇದ್ದು ಜೈಸಬೇಕು. ನಿಜ, ಕನ್ನಡದ ಹೀರೋಯಿನ್‌ಗಳೂ ಕೆಲವೊಮ್ಮೆ ಈಜುಡುಗೆ ತೊಡಬೇಕು, ಬರದಿದ್ದರೂ ಈಸಬೇಕು. ನಾಯಕಿಯರ ಮೈತುಂಬ ಬಟ್ಟೆ ಕೆಲವು ನಿರ್ಮಾಪಕರ ಸಾಮಾಜಿಕ ಸಮಸ್ಯೆ. ಅವರ ಪ್ರಕಾರ ಬಟ್ಟೆ ಕಿರಿದಾದರೆ ಅನುಮಾನವಿಲ್ಲ, ಸಿನಿಮಾ ಹಿಟ್ಟೇ, ಬಟ್ಟೆ ನಂಬಿದರೆ ನಿರ್ಮಾಪಕ ತಾ ಕೆಟ್ಟೆ!

ಕವಿತೆ:ನನ್ನಲ್ಲಿಗೆ ಸಂಜೆ ಬಂದಿತ್ತು

ವಿಕಾಸ ನೇಗಿಲೋಣಿ ಬರಹ: 
ನಿನ್ನೆ ರಾತ್ರಿ ನಿಮ್ಮ ಸಂಜೆಗಳುನನ್ನ ಮನೆಗೆ ಬಂದಿದ್ದವು
 ಆಗ ನಿಮ್ಮ ಸಂಜೆಗಳು ಸಂಜೆಯಾಗಿಯೇ ಬಂದಿರಲಿಲ್ಲ.
ಅವು ನಾಚಿ ಕೆಂಪಾಗಿರಲಿಲ್ಲ
ಬಿಸಿ ಕಳಚಿ ತಂಪಾಗಿರಲಿಲ್ಲ
ಸಮಾಗಮಕ್ಕೆ ಕಾದ ಹೆಂಚಾಗಿರಲಿಲ್ಲ
ಅಷ್ಟಕ್ಕೂ ಅವು ಸಂಜೆಗಳೇ ಆಗಿರಲಿಲ್ಲ!

ಸಿನಿಮಾ: ಅರಿತೆವೇನು ನಾವು ನಮ್ಮ ಅಂತರಾಳವಾ

ವಿಕಾಸ ನೇಗಿಲೋಣಿ ಬರಹ:
ಎಲ್‌ಕೆಜಿ ಓದುತ್ತಿರುವ ಪುಟಾಣಿ ಮಗಳ ಎದುರು ಅವಳಪ್ಪ ಅಮ್ಮ ವಿಚ್ಛೇದನದ ತೀರ್ಮಾನ ತೆಗೆದುಕೊಳ್ಳುತ್ತಾರೆ. ಕಸಿವಿಸಿ ಮನಸ್ಸು, ತಡವರಿಸುವ ಹೆಜ್ಜೆ, ಹೊಡೆದುಕೊಳ್ಳುವ ಹೃದಯ ಮತ್ತು ಶಾಶ್ವತ ವೇದನೆಯೊಂದಿಗೆ ಅಪ್ಪ ಹೆಂಡತಿ ಮಗಳನ್ನು ಬಿಟ್ಟು ಹೊರಡುತ್ತಾನೆ. ಕೆನ್ನೆಯ ಮೇಲೆ ಸುರಿಯುವ ಕಣ್ಣೀರನ್ನು ಒರೆಸಿಕೊಳ್ಳಬೇಕೆಂಬುದೂ ಗೊತ್ತಾಗದ ಮಗಳು ದೂರದಲ್ಲಿ ನಿಂತುಕೊಂಡು ಪಿಟೀಲಿನ ತಂತಿಗಳ ಮೇಲೆ ಕಮಾನನ್ನು ಆಡಿಸುತ್ತಾಳೆ. ಅದು ಪುಟಾಣಿ ಕೈಗಳಿಗೆ ಸಿಕ್ಕಿ ಅಪಸ್ವರ ಹೊರಡಿಸುತ್ತದೆ. ಆ ಹೊತ್ತಿನಲ್ಲಿ ಮತ್ತೇನು ಸುಸ್ವರ ಹೊರಟೀತೇ?

ಕತೆ: ಕೆಂಪು ರಕ್ತ ಕಣಗಳು

ವಿಕಾಸ ನೇಗಿಲೋಣಿ ಕತೆ:ಸುಮಾರು ಎರಡೂವರೆ ವರ್ಷಗಳ ಹಿಂದೆ ಬರೆದ ಈ ಕತೆ ವೈಯಕ್ತಿಕವಾಗಿ ತೀರಾ ಖುಷಿ ಕೊಟ್ಟಿದೆ. ಈ ಕತೆಯಲ್ಲಿ ಬರುವ ಅಮ್ಮನ ಪಾತ್ರ ವೈಯಕ್ತಿಕವಾಗಿ ಬಹಳ ಕಾಡಿದ ಒಬ್ಬಾಕೆ. ಓದಿನೋಡಿ.