February 20, 2008 – 2:16 pm
ಅರಮನೆಗೆ ಮೊದಲು ಸಿಗುವ ಮನೆ ಕತೆಯಿದು. ತ್ಯಾಗರಾಜ ನಗರದಲ್ಲಿರುವ ನಾಗಸಂದ್ರ ಸರ್ಕಲ್ ಪಕ್ಕದಲ್ಲೊಂದು ಗಲ್ಲಿ. ಅದು ಮಾಡೆಲ್‌ಹೌಸ್ ಸ್ಟ್ರೀಟ್. ಅಲ್ಲಿ ಮನೆ ಎಂದು ಹೇಳಿಕೊಳ್ಳಬಹುದಾದ ರೂಮು ಅಥವಾ ರೂಮು ಎಂದು ಕರೆದುಬಿಡಬಹುದಾದ ಮನೆ. ಆ ಪುಟ್ಟ ಮನೆಗೊಂದು ಟೆರೇಸು.
ನಾಲ್ಕು ವರ್ಷಗಳ ಹಿಂದಿನ ರಾತ್ರಿಗಳಲ್ಲಿ ಆ ಟೆರೇಸಿನ ಮೇಲೆ ಕುಳಿತು ಇನ್ನೂ ಹುಟ್ಟಿಕೊಳ್ಳಬೇಕಾಗಿದ್ದ ತಾರೆ ಗಣೇಶ್ ಮತ್ತು ಹುಟ್ಟಿಕೊಳ್ಳಬೇಕಾಗಿದ್ದ ನಿರ್ದೇಶಕ ನಾಗಶೇಖರ್ ಹರಟೆ ಹೊಡೆಯುತ್ತಿದ್ದರು. ಮೈಗೊಂದು ಟವೆಲ್ ಸುತ್ತಿಕೊಂಡು ಆಕಾಶದಲ್ಲಿ ತಾರೆಗಳನ್ನು ನೋಡುತ್ತಾ ಬದಲಾಗದ ತಮ್ಮ ತಾರಾಬಲದ ಕುರಿತು [...]
October 21, 2007 – 11:13 am
ಪುಸ್ತಕ ಓದುವಾಗ ನಮ್ಮ ತಲೆಯಲ್ಲಿ ನಮ್ಮದೇ ಜಗತ್ತಿನಿಂದ ಹುಟ್ಟಿಕೊಂಡ ಚಿತ್ರಗಳು ಮೂಡುತ್ತಿರುತ್ತವೆ. ಕೊತ್ವಾಲ ಅಂತ ರೌಡಿ ಇದ್ದ ಎಂದರೆ ನಮ್ಮ ತಲೆಯಲ್ಲಿ ನಮ್ಮ ಭಾವಕ್ಕೆ, ನಮ್ಮ ಗ್ರಹಿಕೆಗೆ ತಕ್ಕುದಾದ ಕೊತ್ವಾಲ ಕಾಣತೊಡಗುತ್ತಾನೆ. ಸಿನಿಮಾ ಆಗುವಾಗ ನಮ್ಮ ಎದುರು ಸ್ಪಷ್ಟ ಚಿತ್ರ ಕಾಣಿಸತೊಡಗುತ್ತದೆ. ಅದು ನಮ್ಮ ಕಲ್ಪನೆಯ ಚಿತ್ರಕ್ಕಿಂತ ಬೇರೆ ಆಗಿರುವ ಸಾಧ್ಯತೆಯೇ ಹೆಚ್ಚು. ಹೀಗಾಗಿಯೇ ಪುಸ್ತಕವೊಂದನ್ನು ಓದಿ ಅದನ್ನು ಆಧರಿಸಿದ ಸಿನಿಮಾ ನೋಡುವಾಗ ನಮಗೆ ಗೊಂದಲವಾಗುತ್ತದೆ. `ದಾದಾಗಿರಿಯ ದಿನಗಳು’ ಪುಸ್ತಕವನ್ನು ಬಹುವಾಗಿ ಮೆಚ್ಚಿಕೊಂಡಿದ್ದ ನನಗೆ `ಆ ದಿನಗಳು’ [...]
October 21, 2007 – 10:16 am
ಡ್ರೀಮ್ಸ್! ಹೆಸರೇ ಹೇಳುವಂತೆ ಕನಸುಗಳ ಕತೆಯಿರುವ ಸಿನಿಮಾ. ನಿರೂಪಕನ(ನಿರ್ದೇಶಕನ) ಬದುಕಿನ ಬೇರೆ ಬೇರೆ ಅವಸ್ಥೆಗಳಲ್ಲಿ ಕಂಡ ಕನಸುಗಳ ಕಥಾ ಸಂಕಲನ ಇದು. ಒಂದೊಂದು ಕನಸಿನದು ಒಂದೊಂದು ಕತೆ. ಆ ಕನಸಿಗೂ ಅನಂತರ ಹೇಳುವ ಕನಸಿಗೂ ಅರ್ಥಾತ್ ಸಂಬಂಧವಿಲ್ಲ. ಆದರೂ ಸಂಬಂಧ ಇದೆ! ಏಕೆಂದರೆ ಈ ಕನಸುಗಳನ್ನೆಲ್ಲಾ ಒಬ್ಬನೇ ಕಾಣುತ್ತಿದ್ದಾನೆ. ಆತನಲ್ಲಿ ಅವಸ್ಥಾಂತರಗಳು ಸಂಭವಿಸುತ್ತಿವೆ. ಹೀಗೆ ಎಂಟು ಕನಸುಗಳು ಬೇರೆ ಬೇರೆಯಾಗಿದ್ದೂ ಒಂದೇ ಕನಸಾಗುವ, ಕತೆಯಾಗುವ ವಿಸ್ಮಯವನ್ನು ನಿರ್ದೇಶಕ ಅಕಿರಾ ಕುರಸೋವಾ `ಡ್ರೀಮ್ಸ್’ ಸಿನಿಮಾದಲ್ಲಿ ಸೃಷ್ಟಿಸುತ್ತಾರೆ.
ನಟನೆಯಿಂದ ನಿರ್ದೇಶನ, ಅಲ್ಲಿಂದ ಸಂಗೀತ ನಿರ್ದೇಶನ, ಹಾಡು, ಕ್ಯಾಮರಾ, ಸಂಕಲನ ಮತ್ತು ವ್ಯವಕಲನ! ರವಿಚಂದ್ರನ್ ಮಾತುಗಳು ಹೀಗೆ ಜಿಗಿದಾಡುತ್ತವೆ. 24 ಫ್ರೇಮುಗಳ ವೇಗವನ್ನು ಮೀರಿ ಎಲ್ಲೆಂದರಲ್ಲಿ ಸರಿದಾಡುತ್ತವೆ. ಈ ಮಾತುಗಳು ಟ್ರಾಲಿಯ ಹಳಿಯ ಮೇಲೆ ಶಿಸ್ತುಬದ್ಧವಾಗಿ ಚಲಿಸುವುದಿಲ್ಲ. ಸ್ಟೆಡಿ ಕ್ಯಾಮರಾದಂತೆ ಸಿಕ್ಕಿದಲ್ಲೆಲ್ಲ ನುಗ್ಗುತ್ತವೆ. ಏಕೆಂದರೆ ಸಿನಿಮಾ ಕುರಿತು ಮಾತಾಡತೊಡಗಿದರೆ ರವಿಚಂದ್ರನ್ ಕ್ರೇಜಿಯಾಗುತ್ತಾರೆ!
ಡಾ.ರಾಜ್‌ಕುಮಾರ್ ಇಲ್ಲದೇ ಒಂದು ವರ್ಷ. 365 ದಿನಗಳ ನಂತರವೂ ವರನಟನ ಸಾವು ನಮ್ಮ ಮನಸ್ಸಿನಲ್ಲಿನ್ನೂ ಜೀವಂತವಾಗಿದೆ. `ಓಂ’ ಚಿತ್ರದ ನಿರ್ದೇಶನದ ಸಂದರ್ಭದಲ್ಲಿ ರಾಜ್‌ಕುಮಾರ್ ಜೊತೆ ನಿಕಟ ಸಂಪರ್ಕ ಇಟ್ಟುಕೊಂಡಿದ್ದವರು ನಟ, ನಿರ್ದೇಶಕ ಉಪೇಂದ್ರ. ತಮ್ಮ ಮನೆಯ ಟೆರೇಸಿನ ಮೇಲೆ ಕುಳಿತು ಆ ದಿನಗಳನ್ನು ಉಪ್ಪಿ ನೆನಪು ಮಾಡಿಕೊಂಡರು. ಆಗ ಹೆಕ್ಕಿಕೊಂಡ ಸಂಗತಿಗಳನ್ನು ಇಲ್ಲಿ ದಾಖಲಿಸಲಾಗಿದೆ.
ಹೀರೋ ಆಗುತ್ತೇನೆ ಎಂದು ನಿರ್ದೇಶಕ ಪ್ರೇಮ್ ಹೊರಟಾಗ ಬೇಡ ಎಂದವರೇ ಹಲವರು. ಹೀಗಿದ್ದರೂ ಪ್ರೇಮ್ ಹೀರೋ ಆಗಿದ್ದಾರೆ. `ಪ್ರೀತಿ ಏಕೆ ಭೂಮಿ ಮೇಲಿದೆ?’ ಚಿತ್ರೀಕರಣ ಅರ್ಧದಷ್ಟು ಮುಗಿದಿದೆ. ಈ ನಡುವೆ ರಕ್ಷಿತಾ ಜೊತೆ ಮದುವೆಯಾಗಿದೆ. `ಪ್ರೀತಿ’ಯ ಹಾಡುಗಳು ಬಿಡುಗಡೆಯಾಗಿರುವ ಸಂದರ್ಭದಲ್ಲಿ ಪ್ರೇಮ್ ಮೊನ್ನೆ ಪತ್ರಕರ್ತರ ಜೊತೆ ಮಾತಾಡಿದರು. ಅದರ ವರದಿ ಇಲ್ಲಿದೆ.
ಇದನ್ನು ಪುಟ್ಟ ಕತೆಯೆನ್ನಬಹುದು. ಆತ್ಮಕತೆಯೆನ್ನಬಹುದು. ಡೈರಿ ಬರವಣಿಗೆ ಎನ್ನಬಹುದು. ಗೊತ್ತಿಲ್ಲ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ಇದು ನನ್ನ ಪ್ರೀತಿಯ ಹುಟ್ಟಿನ ಕತೆ. ಅಥವಾ ಅವಳು ಹುಟ್ಟಿದ ಕತೆ. ಅವಳು ಬೆಳೆದ ಕತೆ. ಬೆಳೆಯುತ್ತ ಬೆಳೆಯುತ್ತ ಅವಳು ಬದಲಾದ ಕತೆ. ಬದಲಾಗುತ್ತ ಬದಲಾಗುತ್ತ ಬದಲಾಗುತ್ತಲೇ ಹೋದ ಕತೆ. ಅಥವಾ ಬದಲಾಗಿದ್ದು ನಾನಾ? ಓದಿದ ನೀವೇ ಹೇಳಬೇಕು.
March 22, 2007 – 10:08 am
ಇದು ನನ್ನ ಮೊದಲ ಕತೆ. ಹದಿನಾರು ವರ್ಷಗಳ ಹಿಂದೆ ಬರೆದಿದ್ದು. ಹದಿನಾಲ್ಕನೇ ವಯಸ್ಸಿನಲ್ಲಿ ಬರೆದಿದ್ದು. ಅದನ್ನು ಪತ್ರಿಕೆಯೊಂದಕ್ಕೆ ಕಳುಹಿಸಿದ್ದೆ ಕೂಡ. ಯಥಾಪ್ರಕಾರ ಪ್ರಕಟವಾಗಲಿಲ್ಲ. ಕತೆಯ ಇನ್ನೊಂದು ಪ್ರತಿ ನನ್ನ ಬಳಿ ಈಗಲೂ ಇಲ್ಲ. ಆದರೆ ಕತೆ ನನಗೆ ನಿನ್ನೆ, ಮೊನ್ನೆ ಬರೆದಷ್ಟೇ ಚೆನ್ನಾಗಿ ನೆನಪಿದೆ. ಅದನ್ನು ಎರಡು ವರ್ಷಗಳ ಹಿಂದೆ ಇನ್ನೊಂದು ಸಲ ಬರೆದೆ. ಕಥಾ ವಸ್ತು, ನಿರೂಪಣೆಯನ್ನು ಬದಲಾಯಿಸಲಿಲ್ಲ. ಬರಹದ ಶೈಲಿ ಮಾತ್ರ ಬದಲಾಗಿದೆ. ಕತೆಗೆ `ಮೌಢ್ಯ’ ಎಂದು ಹೆಸರು ಏಕೆ ಕೊಟ್ಟಿದ್ದೆ ಎನ್ನುವುದು ಮಾತ್ರ [...]
March 14, 2007 – 11:40 am
ದುನಿಯಾ ಸಿನಿಮಾಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಮೆಜೆಸ್ಟಿಕ್ ಚಿತ್ರಮಂದಿರದಲ್ಲಿ ಜನ ಮುಗಿಬಿದ್ದು ಚಿತ್ರ ನೋಡುತ್ತಿದ್ದಾರೆ. ಬ್ಲ್ಯಾಕ್‌ನಲ್ಲಿ ಟಿಕೆಟ್ ಮಾರಾಟವಾಗುತ್ತಿದೆ. ಮೆಜೆಸ್ಟಿಕ್‌ನಲ್ಲಿ ಕನ್ನಡ ಚಿತ್ರವೊಂದಕ್ಕೆ ಬ್ಲ್ಯಾಕ್‌ನಲ್ಲಿ ಟಿಕೆಟ್ ಕೊಡದೇ ಎಷ್ಟೆಲ್ಲ ವರ್ಷಗಳಾಗಿತ್ತು ಎಂದು ಅಲ್ಲಿನ ಸಿಬ್ಬಂದಿಗಳು ಉದ್ಗರಿಸುತ್ತಿದ್ದಾರೆ.ತಾಂತ್ರಿಕವಾಗಿ ನೋಡಿದರೆ `ದುನಿಯಾ’ ಇತ್ತೀಚೆಗೆ ಬಂದ ಕನ್ನಡ ಚಿತ್ರಗಳಲ್ಲೇ ಅತ್ಯುತ್ತಮ. ಹಳೆಯ ವಸ್ತುವನ್ನೇ ನಿರ್ದೇಶಕ ಸೂರಿ ಹೊಸ ರೀತಿಯಲ್ಲಿ ಟ್ರೀಟ್ ಮಾಡಿದ ರೀತಿ ಹಲವರ ಮೆಚ್ಚುಗೆ ಪಡೆಯುತ್ತಿದೆ. ಹೀಗಿದ್ದರೂ `ಮುಂಗಾರು ಮಳೆ’ಗೆ ಹೋಲಿಸಿದರೆ ಚಿತ್ರದ ಗಳಿಕೆ ಹೆಚ್ಚು ದಿನ ನಿಲ್ಲುವ ಸಾಧ್ಯತೆಗಳಿಲ್ಲ. [...]
March 14, 2007 – 11:29 am
ಸಾಧು ಕೋಕಿಲಾ ಕುರಿತು ಅನೇಕರಿಗೆ ತಪ್ಪು ಅಭಿಪ್ರಾಯಗಳಿವೆ. ಅವರು ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿನ ವಿದ್ಯಾರ್ಥಿ ಎಂದರೆ ಹಲವರಿಗೆ ಅಚ್ಚರಿಯಾಗಬಹುದು. ಏಕೆಂದರೆ ಸಾಧು ಕೋಕಿಲಾ ಸಿನಿಮಾದಲ್ಲಿ ಮಾಡುವ ಪಾತ್ರಗಳು ಇದಕ್ಕೆ ತದ್ವಿರುದ್ಧ. ಹೀಗಿದ್ದರೂ ಸಾಧು ಪ್ರತಿಭೆಯನ್ನು ಯಾರೂ ಪ್ರಶ್ನೆ ಮಾಡಲಾರರು. ಅವರು ನಟರಾಗಿಯೂ ಸೈ. ನಿರ್ದೇಶಕರಾಗಿಯೂ ಸೈ. ಅವರ ನಿರ್ದೇಶನದ ಶಕ್ತಿಯನ್ನು ಎತ್ತಿ ಹಿಡಿದದ್ದು ಶಿವರಾಜ್‌ಕುಮಾರ್ ಅಭಿನಯದ `ರಾಕ್ಷಸ’ ಚಿತ್ರ. `ರಕ್ತಕಣ್ಣೀರು’ ಮತ್ತು ಈಗ `ಹರಿಹರ’ ಚಿತ್ರವನ್ನೂ ಸಾಧು ನಿರ್ದೇಶಿಸಿದ್ದಾರೆ. ಆದರೆ ಈ ಚಿತ್ರಗಳು ತಮಿಳಿನ ರೀಮೇಕ್‌ಗಳು. [...]