August 23, 2007 – 11:08 am
ಮಲ್ಲೇಶ್ವರಂ ಸುಂದರಿಯರು ಕತೆಗೆ ಸೋಜಿಗ ತರುವಂಥ ಪ್ರತಿಕ್ರಿಯೆಗಳು ಬಂದಿವೆ. ಹಲವರು ಇದರಲ್ಲಿ ಬರುವ ಪಾರ್ವತಿ ಮತ್ತು ಪರಮೇಶ್ವರರ ಕತೆ ಬರೀ ಕತೆಯಿರಬಹುದು ಎಂದು ಅಪಾರ್ಥ ಮಾಡಿಕೊಂಡಿದ್ದಾರೆ! ನಿಮ್ಮ ಹೆಂಡತಿ ಇದನ್ನು ಓದಿದ್ದಾರಾ ಎಂದು ಕೇಳುತ್ತ ಕೆಲವರು ನನ್ನನ್ನು ಅಡಿಯಿಂದ ಮುಡಿಯ ತನಕ ಪರೀಕ್ಷಾದೃಷ್ಟಿಕೋನದೊಂದಿಗೆ ನೋಡಿದ್ದೂ ಆಗಿದೆ. ಕೇಳಿದ್ದೂ ಆಗಿದೆ. ಈ ನಡುವೆ ಹಿಂದೆ ಯಾವಾಗಲೋ ಓದಿದ ತಮಾಷೆ ಪ್ರಸಂಗವೊಂದು ನೆನಪಾಗಿ `ಮಲ್ಲೇಶ್ವರಂ ಸುಂದರಿಯರು’ ಕತೆಯ ಎರಡನೇ ಭಾಗವನ್ನು ಬರೆಯೋಣ ಅನಿಸಿತು. ಇದೇನೂ ಕತೆಯಲ್ಲ. ಈ ತಮಾಷೆ ಪ್ರಸಂಗವನ್ನು [...]
ಇದೊಂದು ಪುಟ್ಟ ಕತೆ. ಇರ್ವಿನ್ ಶಾರ ಕತೆಯೊಂದನ್ನು ಓದುತ್ತಿರುವಾಗ ಈ ಕತೆ ರೂಪುಗೊಂಡಿತು. ಇದು ಆ ಕತೆಯ ರೂಪಾಂತರ ಎನ್ನಬಹುದು. ಅಥವಾ ಆ ಕತೆಗೊಂದು ಪುಟ್ಟ ಪ್ರತಿಕ್ರಿಯೆ ಎನ್ನಬಹುದು. ಜಗಳವಾಡುತ್ತಲೇ ಸುಖವಾಗಿರುವ ಬೆಂಗಳೂರಿನ ಸಮಸ್ತ ಗಂಡ ಹೆಂಡತಿಯರನ್ನು ನೆನಪು ಮಾಡಿಕೊಳ್ಳುತ್ತಾ, ಮಲ್ಲೇಶ್ವರಂ ಸುಂದರಿಯರ ಕುರಿತು ಅಸೂಯೆ ಪಡುತ್ತಾ ಇದನ್ನು ಓದಿಕೊಳ್ಳಬಹುದು.
ಸಹೋದ್ಯೋಗಿ ವಿಕಾಸ್ ಜೊತೆ ಮಣಿಪಾಲ್ ಸೆಂಟರ್‌ನ ಎರಡನೇ ಮಹಡಿಯಲ್ಲಿ ಕುಳಿತು ಮೊನ್ನೆ ಹರಟೆ ಹೊಡೆಯುತ್ತಿದ್ದೆ. ಹಾಗೆ ಹರಟೆ ಹೊಡೆಯುತ್ತಿದ್ದ ಹಂತದಲ್ಲಿ ಥಟ್ಟನೇ ಏನೋ ಹೊಳೆದಂತಾಗಿ ಇಂಥದ್ದೊಂದು ಕತೆ ಬರೆಯೋಣ ಅನಿಸಿತು. ಹಾಗೆ ಅನಿಸಿದ ತಕ್ಷಣ ಅರ್ಧ ಗಂಟೆ ಕುಳಿತು ಇದನ್ನು ಬರೆದೆ. ಓದಿ ಪ್ರತಿಕ್ರಿಯಿಸಿ. ಅಂದಹಾಗೆ ಈ ಕತೆಯಲ್ಲಿ ಬರುವ ಪಾತ್ರಕ್ಕೂ ವಿಕಾಸ್‌ಗೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಲು ವಿಷಾದಿಸುತ್ತೇನೆ.
March 28, 2007 – 11:58 am
ಯೋ…ಸುಟ್ ಕೂಸೇ’ ಎಂದು ಬಯ್ದುಕೊಳ್ಳುತ್ತಾಳೆ ಹಿರ್ಬೆ, ತನ್ನಷ್ಟಕ್ಕೆ.ಹಿರ್ಬೆ ಅಂದರೆ ಗೊತ್ತಲ್ಲ?ಹಿರಿಯಬ್ಬೆ.
ಹಿರಿ ಅಬ್ಬೆ.
ಅಂದರೆ ದೊಡ್ಡಮ್ಮ.
ಅವಳ ಕೆಲಸ ಬೆಳಕು ಹರಿಯುವ ಮೊದಲೇ ಶುರುವಾಗುತ್ತದೆ. ಬಚ್ಚಲ ಒಲೆಗೆ ಬೆಂಕಿ ಹಾಕುವುದರೊಂದಿಗೆ. ಅಷ್ಟಾದ ಮೇಲೆ ಕೊಟ್ಟಿಗೆಗೆ ಹೋಗಿ ದನಗಳನ್ನು ದಣಪೆಯಿಂದ ಆಚೆ ದಾಟಿಸಿ ಬಂದು ಹಿರ್ಬೆ ಮುಖ ತೊಳೆದುಕೊಳ್ಳುತ್ತಾಳೆ. ದೇವರಿಗೊಂದು ನಮಸ್ಕಾರ ಮಾಡಿ ಪುನಃ ಕೊಟ್ಟಿಗೆಗೆ. ಈ ಸಲ ಆಕಳಿಗೆ ಗೋಗ್ರಾಸ. ಮತ್ತೆ ಮನೆಗೆ ಬಂದು ಕಾಲು ತೊಳದುಕೊಂಡವಳು ಹೆಬ್ಬಾಗಿಲು ದಾಟಿ ಅಂಗಳಕ್ಕೆ ಬರುತ್ತಾಳೆ. ಅದರ ತುದಿಯಲ್ಲಿ ತುಳಸಿ ಕಟ್ಟೆಯಿದೆ. ಅದನ್ನು ಮೂರು [...]
March 22, 2007 – 10:08 am
ಇದು ನನ್ನ ಮೊದಲ ಕತೆ. ಹದಿನಾರು ವರ್ಷಗಳ ಹಿಂದೆ ಬರೆದಿದ್ದು. ಹದಿನಾಲ್ಕನೇ ವಯಸ್ಸಿನಲ್ಲಿ ಬರೆದಿದ್ದು. ಅದನ್ನು ಪತ್ರಿಕೆಯೊಂದಕ್ಕೆ ಕಳುಹಿಸಿದ್ದೆ ಕೂಡ. ಯಥಾಪ್ರಕಾರ ಪ್ರಕಟವಾಗಲಿಲ್ಲ. ಕತೆಯ ಇನ್ನೊಂದು ಪ್ರತಿ ನನ್ನ ಬಳಿ ಈಗಲೂ ಇಲ್ಲ. ಆದರೆ ಕತೆ ನನಗೆ ನಿನ್ನೆ, ಮೊನ್ನೆ ಬರೆದಷ್ಟೇ ಚೆನ್ನಾಗಿ ನೆನಪಿದೆ. ಅದನ್ನು ಎರಡು ವರ್ಷಗಳ ಹಿಂದೆ ಇನ್ನೊಂದು ಸಲ ಬರೆದೆ. ಕಥಾ ವಸ್ತು, ನಿರೂಪಣೆಯನ್ನು ಬದಲಾಯಿಸಲಿಲ್ಲ. ಬರಹದ ಶೈಲಿ ಮಾತ್ರ ಬದಲಾಗಿದೆ. ಕತೆಗೆ `ಮೌಢ್ಯ’ ಎಂದು ಹೆಸರು ಏಕೆ ಕೊಟ್ಟಿದ್ದೆ ಎನ್ನುವುದು ಮಾತ್ರ [...]
ಇನ್ನೇನು ಬೆಳಕು ಹರಿದು ನಿಚ್ಛಳವಾಗುವುದರಲ್ಲಿದ್ದ ಮೆಜೆಸ್ಟಿಕ್ಕು ಯಾವ್ಯಾವುದೋ ಊರುಗಳಿಂದ ಹರಿದು ಬರುವ ಬಸ್ಸುಗಳಿಂದ ಜನ ಸಮುದ್ರವಾಗತೊಡಗಿತು. ಕೆಂಪಿ ಬಸ್ಸು, ಹಸಿರು ಬಸ್ಸು, ಡಿಲಕ್ಸ್ ಬಸ್ಸು , ವಾಂತಿಯಿಂದ ನಾರುತ್ತಿರುವ ಬಸ್ಸು. ಬಸ್ಸು, ಬಸ್ಸು…ಬಸ್ಸು!ಮೆಜೆಸ್ಟಿಕ್ಕಿನಲ್ಲಿ ಈಗ ಪಾದಗಳು ಸರಿದಾಡತೊಡಗಿದವು. ಪಾದ ಕಾಣದ ಬೂಟುಗಳು, ಬೂಟೇ ಕಾಣದ ಪಾದಗಳು, ಬೆಳ್ಳಕ್ಕಿಯಷ್ಟು ಮೃದು ಪಾದಗಳು, ಗುಬ್ಬಚ್ಚಿಯಷ್ಟು ಪುಟ್ಟ ಪಾದಗಳು, ಕಪ್ಪು ಪಾದಗಳು, ಕಲೆಯಾದ, ಸುಕ್ಕುಗಟ್ಟಿದ ಪಾದಗಳು, ಸಾದಾ ಪಾದಗಳು, ಎಡವಿಕೊಂಡು ಹೈ ಹೀಲ್ಡ್‌ಗಳಾದವು ಮತ್ತು ಹೈ ಹೀಲ್ಡ್ ಹಾಕಿ ಎಡವುವ ಪಾದಗಳು!
ಹದಿನಾರಂಕಣದ ಮನೆ.ದಕ್ಷಿಣಕ್ಕೆ ಬಾಗಿಲು ಇರಬಾರದು ಎಂದು ಪಕ್ಕದಲ್ಲಿದ್ದ ಗುಡ್ಡವನ್ನು ಅಗೆದು ತೆಗೆದು ಕಟ್ಟಲಾಗಿದೆ. ಬಾಗಿಲು ಈಗ ಉತ್ತರಕ್ಕಿದೆ. ಆ ಬಾಗಿಲಿನಿಂದ ಒಳಕ್ಕೆ ಬಂದರೆ ಜಗುಲಿ. ಈ ಜಗುಲಿಯಲ್ಲಿ ಎಡಬದಿಗೆ ಸಾಲಾಗಿ ಮರದ ಕುರ್ಚಿಗಳಿವೆ. ಕುರ್ಚಿಗಳ ಎದುರು ಒಂದು ಹಳೆಯ ಮೇಜು. ಅದರ ಮೇಲೆ ಒಂದು ಮರದ ಬಟ್ಟಲು. ಎಲೆ. ಅಡಿಕೆ. ಸುಣ್ಣ. ತಂಬಾಕು. ಜಗುಲಿಯ ಬಲ ತುದಿಯಲ್ಲಿ ಒಂದಷ್ಟು ಮೂಟೆಗಳನ್ನು ಪೇರಿಸಿಡಲಾಗಿದೆ.ಈ ಜಗುಲಿಯಿಂದ ಒಳಕ್ಕೆ ಹೋದರೆ ಒಳಜಗುಲಿ. ಅಲ್ಲಿ ಎಲ್ಲವೂ ಕತ್ತಲೆ ಕತ್ತಲೆ. ಈ ಜಗುಲಿಯ ಎಡ [...]
ಇದೊಂದು ನೀಳ್ಗತೆ. ಇಷ್ಟೊಂದು ಉದ್ದ ಕತೆಯನ್ನು ಯಾರು ಓದುತ್ತಾರೆ ಎಂದು ಬೇಸರ ಮಾಡಿಕೊಳ್ಳಬೇಡಿ. ಪಿಚ್ಚರ್ ಎಂದರೆ ಎರಡೂವರೆ ಗಂಟೆಯ ವಿಷಯ. ಚಿಕ್ಕದಾಗಿ ಹೇಳಿ ಎಂದರೆ ಹೇಗೆ?
ಇರಾಕ್ ಮೆಲೆ ಆಮೆರಿಕದವರು ಯುದ್ದ ಮಾಡುತ್ತಿದ್ದ ಹಂತದಲ್ಲಿ ಬರೆದ ಕತೆಯಿದು. ಉತ್ತರ ಕನ್ನಡದ ಮಲೆನಾಡ ಹಳ್ಳಿಯೊಂದರಲ್ಲಿ ಅಕ್ಕ ಪಕ್ಕದ ಮನೆಗಳ ನಡುವಿನ ರಾಜಕೀಯವನ್ನು ಹೇಳಲು ಪ್ರಯತ್ನಿಸಿದ್ದೇನೆ. ಓದಿ, ಪ್ರತಿಕ್ರಿಯಿಸಿ.
ಸ್ಕೂಲಿಗೆ ಹೋಗಿ ಓದಿದ್ದು ಎಸ್ಸೆಸ್ಸೆಲ್ಸಿ . ಎಂ ಎ ಓದಿದ್ದು ರಾತ್ರಿ ಶಾಲೆ ಅಥವಾ ಓಪನ್ ಯುನಿವರ್ಸಿಟಿಯಲ್ಲಿ. ನಾಲ್ಕು ವರ್ಷಗಳ ಹಿಂದೆ ಪರೀಕ್ಷೆಗೆ ಮೊದಲು ಓದಲು ಕುಳಿತುಕೊಂಡಾಗ ಬರೀ ಗಡಿಯಾರ ನೋಡುವುದೇ ಆಗುತ್ತಿತ್ತು. ಈ ಹಂತದಲ್ಲಿ ಇಂಥದ್ದೊಂದು ಕತೆ ಹುಟ್ಟಿಕೊಂಡಿತು. ಎಂ ಎ ಪರೀಕ್ಷೆ ಬರೆದು ಮುಗಿಸಿದ ದಿನವೇ ಇದನ್ನು ಬರೆದಿದ್ದು.