September 3, 2007 – 8:57 am
ಕೃಷ್ಣಾಷ್ಟಮಿ ಬಂತು. ಹೋಯಿತು. ಗೊತ್ತಾಗಲಿಲ್ಲ. ಇದಕ್ಕೂ ಮೊದಲು ನಾಗರಪಂಚಮಿ ಬಂದಿತ್ತು. ಹೋಯಿತು. ಅದೂ ಗೊತ್ತಾಗಿರಲಿಲ್ಲ. ಗಣೇಶನ ಹಬ್ಬ ಬರುತ್ತದೆ. ಹೋಗುತ್ತದೆ. ಅದೂ ಗೊತ್ತಾಗುವುದಿಲ್ಲ. ಹೀಗಾದರೆ ಮಗನಿಗೆ ಏನು ಕಲಿಸುತ್ತೇವೆ?ಅವಳು ತಣ್ಣಗಿನ ದನಿಯಲ್ಲಿ ಕೇಳುತ್ತಾಳೆ. ಅವನು ಗೊಂದಲಗೊಳ್ಳುತ್ತಾನೆ.
ಯಾಕೋ ಇಬ್ಬರ ಮನಸ್ಸಿಗೂ ಕಸಿವಿಸಿಯಾಗುತ್ತದೆ. ಏಕೆಂದರೆ ಅವರು ಇದನ್ನೆಲ್ಲ ವಿವರವಾಗಿ ಆಚರಿಸುತ್ತಿದ್ದ ಪರಿಸರದಲ್ಲಿ ಬೆಳೆದು ಬಂದವರು. ಅವಳ ಮನೆಯಲ್ಲಿ ಗಣೇಶನ ಹಬ್ಬ ದೊಡ್ಡ ಹಬ್ಬ. ಮಣ್ಣಿನ ಗಣಪತಿ ಬರುತ್ತದೆ. ಪೂಜೆ ನಡೆಯುತ್ತದೆ. ಚಕ್ಕುಲಿ, ಅತ್ರಾಸ, ಖರ್ಜಿಕಾಯಿ, ಎಳ್ಳುಂಡೆ, ಪಂಚಕಜ್ಜಾಯಗಳ ಭೋಜನ [...]
August 29, 2007 – 7:47 am
ಬಣ್ಣದ ಜಗತ್ತಿನ ಮೋಹವನ್ನು ವಿವರಿಸುವುದು ಕಷ್ಟ. ಓದುವುದನ್ನು ಬಿಟ್ಟು ಗಾಂಧೀನಗರಕ್ಕೆ ಬಂದವರಿದ್ದಾರೆ. ಓದಿದ್ದನ್ನು ಮರೆತು ಸಿನಿಮಾದಲ್ಲಿ ನಟಿಸೋಣ ಎಂದು ಬಂದ ಎಂಜಿನೀಯರ್‌ಗಳಿದ್ದಾರೆ. ಡಾಕ್ಟರ್‌ಗಳಿದ್ದಾರೆ. ಮಂಡ್ಯದಿಂದ, ಚಿಂತಾಮಣಿಯಿಂದ, ಚಾಮರಾಜ ನಗರದಿಂದ, ಹಾಸನದ ಪಕ್ಕದ ಪುಟ್ಟ ಹಳ್ಳಿಯಿಂದ, ಮೈಸೂರಿನ ಅಪರಿಚಿತ ಬಡಾವಣೆಗಳಿಂದ ಸಿನಿಮಾ ಬೆನ್ನು ಹತ್ತಿ ಬರುವ ಹುಡುಗರು ಈಗಲೂ ಸಿಗುತ್ತಾರೆ.
August 2, 2007 – 11:02 am
ಇಪ್ಪತ್ತು ವರ್ಷಗಳ ಹಿಂದೆ ಒಂದು ಚಳಿಗಾಲ. ಧಾರವಾಡದಲ್ಲಿರುವ ಕರ್ನಾಟಕ ವಿಶ್ವವಿದ್ಯಾಲಯದ ಕ್ಯಾಂಪಸ್ಸು ತಣ್ಣಗಿತ್ತು. ಅಲ್ಲಿಂದ ಸುಮಾರು ನೂರು ಕಿಲೋಮೀಟರ್ ದೂರದ ಮಲೆನಾಡಿನ ಹಳ್ಳಿಯ ಪ್ರೈಮರಿ ಸ್ಕೂಲಿನಲ್ಲಿ ಓದುತ್ತಿದ್ದ ನಾವು ಪ್ರವಾಸಕ್ಕೆಂದು ಧಾರವಾಡಕ್ಕೆ ಬಂದು ಆ ದಿನ ಕ್ಯಾಂಪಸ್ಸಿನಲ್ಲಿ ಹಾಗೇ ಸುಮ್ಮನೆ ನಡೆದುಕೊಂಡು ಹೋಗುತ್ತಿದ್ದೆವು.
ಹೆಸರು ಕೃಷ್ಣ. ಸ್ನೇಹಿತರ ವಲಯದಲ್ಲಿ ಕಿಟ್ಟಿ. ದಾಖಲಾತಿಗಳಲ್ಲಿ ಎಸ್ ಕೃಷ್ಣ. ಗಾಂಧೀನಗರದಲ್ಲಿ ಕ್ಯಾಮರಾಮನ್ ಕೃಷ್ಣ. ಸಿನಿಮಾ ಪ್ರಿಯರಿಗೆಲ್ಲ ಮುಂಗಾರುಮಳೆ ಕೃಷ್ಣ!
ಇವರು ಬಂದಿದ್ದು ಬೆಂಗಳೂರಿನ ನೆಲಮಂಗಲದ ಸಮೀಪದಿಂದ. ಅಪ್ಪ ಸರಕಾರಿ ಉದ್ಯೋಗಿ. ಅಮ್ಮ ಗೃಹಿಣಿ. ಮಗ ಎಂಜಿನೀಯರೋ ಡಾಕ್ಟರೋ ಆದರೆ ಚೆನ್ನಾಗಿರುತ್ತದೆ ಎಂದು ಭಾವಿಸುತ್ತಿದ್ದ ಮಧ್ಯಮ ವರ್ಗದ ಕುಟುಂಬ. ಮಗನನ್ನು ಪಿಯೂಸಿಯಲ್ಲಿ ವಿಜ್ಞಾನ ವಿಭಾಗಕ್ಕೆ ಸೇರಿಸುವಾಗ ಬಹುಶಃ ಅಪ್ಪ ಅಮ್ಮನ ಕಣ್ಣ ಮುಂದೆ ಇದ್ದಿದ್ದು ಕಂಪ್ಯೂಟರ್ ಸೈನ್ಸು ಅಥವಾ ಇಲೆಕ್ಟ್ರಾನಿಕ್ಸ್‌ನಲ್ಲಿ ಎಂಜಿನೀಯರಿಂಗ್.
ಕ್ರಿಕೆಟ್‌ನಲ್ಲಿ ಸೋತರೆ ಭಾರತಕ್ಕೆ ಒಳ್ಳೆಯದಾಗುತ್ತದೆ. ವಿಶ್ವಕಪ್ ಕ್ರಿಕೆಟ್‌ನಲ್ಲಿ ಸೋತರೆ ಇನ್ನೂ ಒಳ್ಳೆಯದಾಗುತ್ತದೆ. ಜನ ಕ್ರಿಕೆಟ್ ಬಿಟ್ಟು ಬೇರೆ ಜಗತ್ತನ್ನು ನೋಡತೊಡಗುತ್ತಾರೆ. ಬೇರೆ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಬರದ ನೀರು, ಮುರಿದ ಬಸ್‌ಸ್ಟ್ಯಾಂಡು, ಸರಿಯಿಲ್ಲದ ಫುಟ್‌ಪಾತ್‌ಗಳು ಜನರ ಗಮನಕ್ಕೆ ಬರುತ್ತವೆ. ಬ್ರೆಜಿಲ್ ತಂಡ ಫುಟ್ಬಾಲ್ ವಿಶ್ವಕಪ್ ಸೋತಾಗ ಅಲ್ಲಿನ ಎಕಾನಮಿ ಸುಧಾರಿಸುತ್ತದೆ!
ಮಾಜಿ ಕ್ರಿಕೆಟ್ ಆಟಗಾರರು ವಿರೋಧ ಪಕ್ಷದಲ್ಲಿದ್ದಾರೆ. ಕ್ರಿಕೆಟ್ ಅಭಿಮಾನಿಗಳು ಅವರಿಗೆ ಹೊರಗಿನಿಂದ ಬೆಂಬಲ ಕೊಡುತ್ತಿದ್ದಾರೆ. ಪತ್ರಿಕೆಗಳು, ಚಾನೆಲ್‌ಗಳದ್ದು ಸಹ ಅದೇ ಪಕ್ಷ. ಒಟ್ಟಾರೆ ರಾಹುಲ್ ದ್ರಾವಿಡ್ ಈಗ ಗಳಿಸಿದ ರನ್‌ಗಳಿಗಿಂತ ಹೆಚ್ಚು ಪ್ರಶ್ನೆಗಳನ್ನು ಎದುರಿಸುತ್ತಿದ್ದಾರೆ. ತಲೆಗೊಂದು ಸಲಹೆಗಳು ಬರುತ್ತಿವೆ.
ಪಾಕಿಸ್ತಾನ ಒಂದು ದಿನ ಕೆಟ್ಟದಾಗಿ ಆಡಿತು. ವಿಶ್ವಕಪ್‌ನಿಂದ ಹೊರ ಬಿತ್ತು. ಭಾರತ ಒಂದು ದಿನ ಕೆಟ್ಟದಾಗಿ ಆಡಿತು. ವಿಶ್ವಕಪ್‌ನಿಂದ ಹೊರಬಿತ್ತು. ಈಗ ಐರ್ಲೆಂಡ್ ಮತ್ತು ಬಾಂಗ್ಲಾದೇಶಗಳು ಸೂಪರ್ ಏ್ಟ್‌ನಲ್ಲಿ ಆಡುತ್ತವೆ. ಎಲ್ಲರಿಗೂ ಗೊತ್ತಿದೆ. ಬಾಂಗ್ಲಾಕ್ಕಿಂತ ಭಾರತ ಸಮರ್ಥ ತಂಡ. ಐರ್ಲೆಂಡಿಗಿಂತ ಪಾಕಿಸ್ತಾನ ಸಮರ್ಥ ತಂಡ. ಇನ್ನೊಂದು ಅವಕಾಶವಿದ್ದರೆ ಬಾಂಗ್ಲಾವನ್ನು ಭಾರತ ಸೋಲಿಸುತ್ತದೆ. ಐರ್ಲೆಂಡನ್ನು ಪಾಕಿಸ್ತಾನವೂ ಸೋಲಿಸುತ್ತದೆ. ಆದರೆ ಈ ವಿಶ್ವಕಪ್‌ನ ಸ್ವರೂಪ ಅದಕ್ಕೆ ಅವಕಾಶ ಮಾಡಿಕೊಡುವುದಿಲ್ಲ. ಇದನ್ನು ಅರ್ಥಮಾಡಿಕೊಳ್ಳದ ಕ್ರಿಕೆಟ್ ಪ್ರಿಯರು ಮಾಡುತ್ತಿರುವುದೇನು?
ಕಿವಿಗೊಟ್ಟು ಕೇಳಿದರೆ ಬರಲಿರುವ ದಿನಗಳಲ್ಲಿ ವೀಕ್ಷಕ ವಿವರಣೆ ಹೀಗೆಲ್ಲ ಕೇಳಿಸುವ ಸಾಧ್ಯತೆಗಳಿವೆ: ಓಹ್, ಸೆಹ್ವಾಗ್ ಔಟಾ? ಹೇಳಿರಲಿಲ್ವಾ? ವೇಸ್ಟೂ ಅಂತ. ಅವನೆಲ್ಲಿ ಆಡ್ತಾನೆ. ಸಿಕ್ಸ್ ಹೊಡೆದನಾ? ಫಾಮ್ ಅನ್ನೋದೆಲ್ಲಾ ಮಣ್ಣಾಂಗಟ್ಟಿ. ತೆಂಡೂಲ್ಕರ್ ಕತೆ ಮುಗೀತು. ಸೆಂಚುರಿ ಹೊಡೆದ್ನಾ? ಅವ್ನು ಬಿಡಿ. ದ್ರಾವಿಡ್ ಯಾಕ್ ಹೀಗೆ ಬಾಲ್ ತಿಂತಿದಾನೋ ಅರ್ಥ ಆಗ್ತಾ ಇಲ್ಲ. ಥತ್, ಇವರ್ ಕತೆ ಇಷ್ಟೇ. ಡೈವ್ ಮಾಡಿದ್ದಿದ್ರೆ ಈಸಿ ಸಿಕ್ಕಿರೋದು. ಟಾಸ್ ಗೆದ್ದು ಯಾರಾದ್ರೂ ಅವ್ರಿಗೆ ಬ್ಯಾಟಿಂಗ್ ಕೊಡ್ತಾರ? ಟಾಸ್ ಗೆದ್‌ಬಿಟ್ರೆ ಬ್ಯಾಟಿಂಗ್ ಮಾಡ್‌ಬಿಡೋದಲ್ಲ. [...]
ಇದನ್ನು ಲಹರಿ ಎಂದವರಿದ್ದಾರೆ. ಸಣ್ಣ ಕತೆಯಿರಬಹುದಾ ಎಂದು ಅನುಮಾನ ಪಟ್ಟವರಿದ್ದಾರೆ. ಲಲಿತ ಪ್ರಬಂಧ ಎಂದು ಆರೋಪಿಸಿದವರೂ ಇದ್ದಾರೆ. ನನ್ನ ಪಾಲಿಗೆ ಇದು ಒಂದು ನೆನಪು. ಆರು ವರ್ಷಗಳ ಹಿಂದೆ ಕನ್ನಡ ಸಿನಿಮಾ ಚಿತ್ರೀಕರಣದ ವರದಿಗೆಂದು ಚಾಲುಕುಡಿಗೆ ಹೋಗಿದ್ದೆ. ಅಲ್ಲಿಂದ ಬೆಂಗಳೂರಿಗೆ ಬರುವ ಹಾದಿಯಲ್ಲಿ ನನಗೆ ನಿಜವಾಗಿಯೂ ಹೀಗೊಬ್ಬಳು ಹುಡುಗಿ ಸಿಕ್ಕಿದ್ದಳು. ಓದಿ ನೋಡಿ.