February 20, 2008 – 2:16 pm
ಅರಮನೆಗೆ ಮೊದಲು ಸಿಗುವ ಮನೆ ಕತೆಯಿದು. ತ್ಯಾಗರಾಜ ನಗರದಲ್ಲಿರುವ ನಾಗಸಂದ್ರ ಸರ್ಕಲ್ ಪಕ್ಕದಲ್ಲೊಂದು ಗಲ್ಲಿ. ಅದು ಮಾಡೆಲ್‌ಹೌಸ್ ಸ್ಟ್ರೀಟ್. ಅಲ್ಲಿ ಮನೆ ಎಂದು ಹೇಳಿಕೊಳ್ಳಬಹುದಾದ ರೂಮು ಅಥವಾ ರೂಮು ಎಂದು ಕರೆದುಬಿಡಬಹುದಾದ ಮನೆ. ಆ ಪುಟ್ಟ ಮನೆಗೊಂದು ಟೆರೇಸು.
ನಾಲ್ಕು ವರ್ಷಗಳ ಹಿಂದಿನ ರಾತ್ರಿಗಳಲ್ಲಿ ಆ ಟೆರೇಸಿನ ಮೇಲೆ ಕುಳಿತು ಇನ್ನೂ ಹುಟ್ಟಿಕೊಳ್ಳಬೇಕಾಗಿದ್ದ ತಾರೆ ಗಣೇಶ್ ಮತ್ತು ಹುಟ್ಟಿಕೊಳ್ಳಬೇಕಾಗಿದ್ದ ನಿರ್ದೇಶಕ ನಾಗಶೇಖರ್ ಹರಟೆ ಹೊಡೆಯುತ್ತಿದ್ದರು. ಮೈಗೊಂದು ಟವೆಲ್ ಸುತ್ತಿಕೊಂಡು ಆಕಾಶದಲ್ಲಿ ತಾರೆಗಳನ್ನು ನೋಡುತ್ತಾ ಬದಲಾಗದ ತಮ್ಮ ತಾರಾಬಲದ ಕುರಿತು [...]
February 20, 2008 – 2:10 pm
ಮುಗಿಲಪೇಟೆಯಿಂದ ಬಣ್ಣಬಣ್ಣದ ಕಾಗದ ತಂದಿದ್ದಾರೆ. ಮಳೆಕಾಡಿನ ಕಡ್ಡಿಗಳಿಂದ ಹಂದರ ರಚಿಸಿ ಭಾವನೆಗಳ ಅಂಟಿನಿಂದ ಅಂಟಿಸಿದ್ದಾರೆ. ತುಸು ಹೆಚ್ಚೇ ಎನಿಸುವಂತೆ ಸಂಭಾಷಣೆಗಳ ಬಾಲಂಗೋಚಿಯನ್ನು ಜೋಡಿಸಿ, ಜನಪ್ರಿಯ ಸಿನಿಮಾಗಳ ಮಿನುಗುವ ಬೇಗಡೆಯಿಂದ ಅಲಂಕರಿಸಿ ನಿರ್ದೇಶಕ ಯೋಗರಾಜ್ ಭಟ್ `ಗಾಳಿಪಟ’ ಹಾರಿಸಿದ್ದಾರೆ!ಗಾಳಿಪಟ ಇಲ್ಲಿ ಪತ್ರವಾಗುತ್ತದೆ. ಪಾತ್ರವಾಗುತ್ತದೆ. ರೂಪಕವಾಗುತ್ತದೆ. ಹಸಿರೇ ತುಂಬಿಕೊಂಡಿರುವ, ಕೆಸರಿಲ್ಲದ, ಮುಗಿಲುಪೇಟೆಯೆಂಬ ಹೊಸಪೇಟೆಯನ್ನು ಸೃಷ್ಟಿಸುವ ನಿರ್ದೇಶಕರು ಸೂತ್ರ ಕಿತ್ತುಹೋದ ಗಾಳಿಪಟದಂತಾಗಿರುವ ಮೂರು ಹುಡುಗರನ್ನು ಈ ಊರಿಗೆ ತರುತ್ತಾರೆ. ಅದರಲ್ಲೊಬ್ಬ ವಾಚಾಳಿ. ಮತ್ತೊಬ್ಬ ಭಗ್ನಪ್ರೇಮಿ. ಇನ್ನೊಬ್ಬ ಸಂಕೋಚದ ಮುದ್ದೆ. ಇದಕ್ಕೆ ತದ್ವಿರುದ್ಧವಾಗಿರುವ [...]
February 20, 2008 – 2:07 pm
ಭಾವನೆಗಳ ನಂಟಿನ ಜೊತೆ ಪ್ರೀತಿಯ ಅಂಟು. ಹಾಸ್ಯದ ಜೊತೆ ಸ್ವಲ್ಪ ಅಪಹಾಸ್ಯ. ಯುರೋಪ್‌ನ ಬೆಟ್ಟ ಗುಡ್ಡಗಳಲ್ಲಿ ಹಾಡು, ಕುಣಿತ. ಬ್ಯಾಂಕಾಕ್‌ನಲ್ಲೊಂದು ಐಟಮ್ ನಂಬರ್. ನಡುನಡುವೆ ದುಷ್ಟ ಮರ್ದನ ಮತ್ತು ರುಂಡ ಛೇದನ!
ದರ್ಶನ್ ಸಿನಿಮಾಗಳಿಗೆ ಸಹಜ ಎನಿಸುವ ಈ ಸೂತ್ರದೊಳಗೇ `ಗಜ’ ಕತೆ ತೆರೆದುಕೊಳ್ಳುತ್ತದೆ, ಬೆಳೆಯುತ್ತದೆ ಮತ್ತು ಮುಗಿಯುತ್ತದೆ. ಸಾಮಾನ್ಯ ಹುಡುಗನೊಬ್ಬ ಹುಡುಗಿಯೊಬ್ಬಳ ಪ್ರಪಂಚ ಪ್ರವೇಶಿಸಿ, ಆ ಜಗತ್ತಿನಲ್ಲಿ ನಡೆಯುವ ಜಗಳದಲ್ಲಿ ಭೀಕರವಾಗಿ ಹೊಡೆದಾಡಿ, ಗ್ಲಾಸು ಪುಡಿಪುಡಿ ಮಾಡಿ, ಕಾರುಗಳನ್ನು ಆಕಾಶಕ್ಕೆ ಹಾರಿಸಿ, ಸಂಹಾರ ಇತ್ಯಾದಿ ಚಟುವಟಿಕೆಗಳನ್ನು ಸಾಂಗವಾಗಿ [...]
February 20, 2008 – 2:04 pm
`ಬೆಳದಿಂಗಳಾಗಿ ಬಾ’ ಸಿನಿಮಾದಲ್ಲಿ ಬೆಳದಿಂಗಳಿಲ್ಲ. ಆದರೆ ಬೆಳದಿಂಗಳಂಥ ಹುಡುಗಿಯಿದ್ದಾಳೆ. ಬಾ ಎಂದು ಯಾರೂ ಕರೆಯುವುದಿಲ್ಲ. ಆದರೂ ಅಮವಾಸ್ಯೆಯಂಥ ಡಾನ್‌ಗಳು ಪದೇ ಪದೇ ಹಾಜರಾಗುತ್ತಾರೆ. ಪ್ರೀತಿಯನ್ನು ಪ್ರೀತಿಯಿಂದಲೇ ಗೆಲ್ಲಲು ಹೊರಟವನ ಕತೆ ಅಂದುಕೊಂಡಂತೆಯೇ ಆರಂಭವಾಗಿ ಅಂದುಕೊಂಡಂತೆಯೇ ಮುಗಿಯುತ್ತದೆ. ಆದರೆ ನಡುವಿನ ಹಾದಿಯಲ್ಲಿ ಮುನ್ಸೂಚನಾ ಫಲಕಗಳಿಲ್ಲದೇ ಸಿಗುವ ಅಚ್ಚರಿಯ ತಿರುವುಗಳಿವೆ. ಈ ಅಚ್ಚರಿಗಳೇ ಸಿನಿಮಾದ ನಿಜವಾದ ಅಚ್ಚರಿ!