Monthly Archives: October 2007

ದಾದಾಗಿರಿಯ ದಿನಚರಿ

ಪುಸ್ತಕ ಓದುವಾಗ ನಮ್ಮ ತಲೆಯಲ್ಲಿ ನಮ್ಮದೇ ಜಗತ್ತಿನಿಂದ ಹುಟ್ಟಿಕೊಂಡ ಚಿತ್ರಗಳು ಮೂಡುತ್ತಿರುತ್ತವೆ. ಕೊತ್ವಾಲ ಅಂತ ರೌಡಿ ಇದ್ದ ಎಂದರೆ ನಮ್ಮ ತಲೆಯಲ್ಲಿ ನಮ್ಮ ಭಾವಕ್ಕೆ, ನಮ್ಮ ಗ್ರಹಿಕೆಗೆ ತಕ್ಕುದಾದ ಕೊತ್ವಾಲ ಕಾಣತೊಡಗುತ್ತಾನೆ. ಸಿನಿಮಾ ಆಗುವಾಗ ನಮ್ಮ ಎದುರು ಸ್ಪಷ್ಟ ಚಿತ್ರ ಕಾಣಿಸತೊಡಗುತ್ತದೆ. ಅದು ನಮ್ಮ ಕಲ್ಪನೆಯ ಚಿತ್ರಕ್ಕಿಂತ ಬೇರೆ ಆಗಿರುವ ಸಾಧ್ಯತೆಯೇ ಹೆಚ್ಚು. ಹೀಗಾಗಿಯೇ ಪುಸ್ತಕವೊಂದನ್ನು ಓದಿ ಅದನ್ನು ಆಧರಿಸಿದ ಸಿನಿಮಾ ನೋಡುವಾಗ ನಮಗೆ ಗೊಂದಲವಾಗುತ್ತದೆ. `ದಾದಾಗಿರಿಯ ದಿನಗಳು’ ಪುಸ್ತಕವನ್ನು ಬಹುವಾಗಿ ಮೆಚ್ಚಿಕೊಂಡಿದ್ದ ನನಗೆ `ಆ ದಿನಗಳು’ [...]

ಕನಸುಗಳ ಕಥಾಸಂಕಲನ

ಡ್ರೀಮ್ಸ್‌! ಹೆಸರೇ ಹೇಳುವಂತೆ ಕನಸುಗಳ ಕತೆಯಿರುವ ಸಿನಿಮಾ. ನಿರೂಪಕನ(ನಿರ್ದೇಶಕನ) ಬದುಕಿನ ಬೇರೆ ಬೇರೆ ಅವಸ್ಥೆಗಳಲ್ಲಿ ಕಂಡ ಕನಸುಗಳ ಕಥಾ ಸಂಕಲನ ಇದು. ಒಂದೊಂದು ಕನಸಿನದು ಒಂದೊಂದು ಕತೆ. ಆ ಕನಸಿಗೂ ಅನಂತರ ಹೇಳುವ ಕನಸಿಗೂ ಅರ್ಥಾತ್‌ ಸಂಬಂಧವಿಲ್ಲ. ಆದರೂ ಸಂಬಂಧ ಇದೆ! ಏಕೆಂದರೆ ಈ ಕನಸುಗಳನ್ನೆಲ್ಲಾ ಒಬ್ಬನೇ ಕಾಣುತ್ತಿದ್ದಾನೆ. ಆತನಲ್ಲಿ ಅವಸ್ಥಾಂತರಗಳು ಸಂಭವಿಸುತ್ತಿವೆ. ಹೀಗೆ ಎಂಟು ಕನಸುಗಳು ಬೇರೆ ಬೇರೆಯಾಗಿದ್ದೂ ಒಂದೇ ಕನಸಾಗುವ, ಕತೆಯಾಗುವ ವಿಸ್ಮಯವನ್ನು ನಿರ್ದೇಶಕ ಅಕಿರಾ ಕುರಸೋವಾ `ಡ್ರೀಮ್ಸ್‌’ ಸಿನಿಮಾದಲ್ಲಿ ಸೃಷ್ಟಿಸುತ್ತಾರೆ.