Monthly Archives: September 2007

ಅಂತ್ಯಸಂಸ್ಕಾರ

ಪೊಲೀಷ್‌ ಭಾಷೆಯ ನೊಬಲ್‌ ಪ್ರಶಸ್ತಿ ಪುರಸ್ಕೃತ ಕವಯಿತ್ರಿ ವಿಸ್ಲಾವಾ ಸಿಂಬೋರ್‌ಸ್ಕಾಳ ವಿಶಿಷ್ಟ ಶೈಲಿಯ ಕವಿತೆ ಇದು. ವ್ಯಕ್ತಿಯೊಬ್ಬ ಸತ್ತ ದಿನ ಅವನ ಸಾವನ್ನು ನಿರ್ಭಾವುಕವಾಗಿ `ಆಡಿಕೊಳ್ಳುವು’ದನ್ನು ಕವಯಿತ್ರಿ ಅದ್ಭುತವಾಗಿ ಹಿಡಿದಿಟ್ಟಿದ್ದಾರೆ. ಅದನ್ನು ಅಷ್ಟೇ ಅದ್ಭುತವಾಗಿ ಕನ್ನಡಕ್ಕೆ ತಂದಿಡಲು ವಿಕಾಸ ನೇಗಿಲೋಣಿ ಪ್ರಯತ್ನಪಟ್ಟಿದ್ದಾರೆ!

ನನ್ನ ಕೃಷ್ಣನ ಕಂಡೀರೇ

ಇದು ವಿಕಾಸ ನೇಗಿಲೋಣಿ ಬರಹ: ನಾನು ಬೆಳಿಗ್ಗೆ ಊಟಕ್ಕಿಂತ ಮೊದಲು ನೋಡುತ್ತಿದ್ದುದು ಕೃಷ್ಣನನ್ನೇ. ಆ ಕೃಷ್ಣ ಆಗ ಕೌಪೀನಧಾರಿಯಾಗಿರುತ್ತಿದ್ದ, ಚಿನ್ನದ ಜನಿವಾರ ಇರುತ್ತಿತ್ತು, ಸೊಂಟದಲ್ಲಿ ಮಕ್ಕಳಿಗೆ ಹಾಕಿದಂಥ ನೇವಳ ಇರುತ್ತಿತ್ತಾದ್ದರೂ ಅದು ನಮಗೆ ನಿಮಗೆ ಸಿಗದ ಚಿನ್ನದ ತೊಡುಗೆ. ಒಂದು ಕೈಯಲಿ ಕಡಗೋಲು, ಅತ್ತ ಅಮ್ಮ ಮೊಸರು ಕಡೆಯಲು ಕಡಗೋಲು ಹುಡುಕುತ್ತಿದ್ದರೆ ಅದನ್ನು ಬೆಳಬೆಳಗ್ಗೆ ಕೃಷ್ಣ ಕದ್ದು ಇಟ್ಟುಕೊಂಡಿದ್ದಾನೋ ಎಂದು ಭಾಸವಾಗುವಂತೆ. ಅದಕ್ಕಾಗಿಯೇ ಇರಿಸಿಕೊಂಡಂತೆ ಕಣ್ಣಲ್ಲಿ ಒಂದು ತುಂಟತನ, ಕಳ್ಳನಂತೆ ತುಟಿಯ ಕೊಂಕಲ್ಲೊಂದು ಕಿರುನಗು.

ಬಾಲು ಮತ್ತು ಹುಣ್ಣಿಮೆ ಚಂದಿರ

ಕೃಷ್ಣಾಷ್ಟಮಿ ಬಂತು. ಹೋಯಿತು. ಗೊತ್ತಾಗಲಿಲ್ಲ. ಇದಕ್ಕೂ ಮೊದಲು ನಾಗರಪಂಚಮಿ ಬಂದಿತ್ತು. ಹೋಯಿತು. ಅದೂ ಗೊತ್ತಾಗಿರಲಿಲ್ಲ. ಗಣೇಶನ ಹಬ್ಬ ಬರುತ್ತದೆ. ಹೋಗುತ್ತದೆ. ಅದೂ ಗೊತ್ತಾಗುವುದಿಲ್ಲ. ಹೀಗಾದರೆ ಮಗನಿಗೆ ಏನು ಕಲಿಸುತ್ತೇವೆ?ಅವಳು ತಣ್ಣಗಿನ ದನಿಯಲ್ಲಿ ಕೇಳುತ್ತಾಳೆ. ಅವನು ಗೊಂದಲಗೊಳ್ಳುತ್ತಾನೆ.
ಯಾಕೋ ಇಬ್ಬರ ಮನಸ್ಸಿಗೂ ಕಸಿವಿಸಿಯಾಗುತ್ತದೆ. ಏಕೆಂದರೆ ಅವರು ಇದನ್ನೆಲ್ಲ ವಿವರವಾಗಿ ಆಚರಿಸುತ್ತಿದ್ದ ಪರಿಸರದಲ್ಲಿ ಬೆಳೆದು ಬಂದವರು. ಅವಳ ಮನೆಯಲ್ಲಿ ಗಣೇಶನ ಹಬ್ಬ ದೊಡ್ಡ ಹಬ್ಬ. ಮಣ್ಣಿನ ಗಣಪತಿ ಬರುತ್ತದೆ. ಪೂಜೆ ನಡೆಯುತ್ತದೆ. ಚಕ್ಕುಲಿ, ಅತ್ರಾಸ, ಖರ್ಜಿಕಾಯಿ, ಎಳ್ಳುಂಡೆ, ಪಂಚಕಜ್ಜಾಯಗಳ ಭೋಜನ [...]