Monthly Archives: August 2007

ಏನ್‌ ಹುಡುಗರೋ ಯಾಕಿಂಗಾಡ್ತಾರೋ?

ಬಣ್ಣದ ಜಗತ್ತಿನ ಮೋಹವನ್ನು ವಿವರಿಸುವುದು ಕಷ್ಟ. ಓದುವುದನ್ನು ಬಿಟ್ಟು ಗಾಂಧೀನಗರಕ್ಕೆ ಬಂದವರಿದ್ದಾರೆ. ಓದಿದ್ದನ್ನು ಮರೆತು ಸಿನಿಮಾದಲ್ಲಿ ನಟಿಸೋಣ ಎಂದು ಬಂದ ಎಂಜಿನೀಯರ್‌ಗಳಿದ್ದಾರೆ. ಡಾಕ್ಟರ್‌ಗಳಿದ್ದಾರೆ. ಮಂಡ್ಯದಿಂದ, ಚಿಂತಾಮಣಿಯಿಂದ, ಚಾಮರಾಜ ನಗರದಿಂದ, ಹಾಸನದ ಪಕ್ಕದ ಪುಟ್ಟ ಹಳ್ಳಿಯಿಂದ, ಮೈಸೂರಿನ ಅಪರಿಚಿತ ಬಡಾವಣೆಗಳಿಂದ ಸಿನಿಮಾ ಬೆನ್ನು ಹತ್ತಿ ಬರುವ ಹುಡುಗರು ಈಗಲೂ ಸಿಗುತ್ತಾರೆ.

ಮಲೆನಾಡಿನ ಹುಡುಗಿ ಮತ್ತು ನಾಗತಿಹಳ್ಳಿ ಮಲ್ಲಿಗೆ

ಮೊನ್ನೆ ಸಂಜೆ `ಮಾತಾಡ್‌ ಮಾತಾಡು ಮಲ್ಲಿಗೆ’ ಚಿತ್ರ ನೋಡಿ ಐನಾಕ್ಸ್‌ನಿಂದ ಹೊರಕ್ಕೆ ಬಂದು ಮೆಟ್ಟಿಲು ಇಳಿಯುತ್ತಿದ್ದರೆ ನಾಗತಿಹಳ್ಳಿ ಚಂದ್ರಶೇಖರ್‌ ಬರೆದ ಕತೆಗಳೆಲ್ಲ ನೆನಪಾಗುತ್ತಿದ್ದವು. `ಮಲೆನಾಡಿನ ಹುಡುಗಿ ಮತ್ತು ಬಯಲು ಸೀಮೆಯ ಹುಡುಗ’ ಎಂಬ ಅವರ ಕತೆಯನ್ನು ಎಷ್ಟೆಲ್ಲ ಇಷ್ಟಪಟ್ಟಿದ್ದೆ. ಹದಿನೈದು ವರ್ಷಗಳ ಹಿಂದೆ, ಪ್ರೀತಿಯ ಅಮೂರ್ತತೆಯನ್ನು ಅರ್ಥಮಾಡಿಕೊಳ್ಳಲಾಗದೇ ಒದ್ದಾಡುತ್ತ, ಸಹಪಾಠಿ ಹುಡುಗಿಯರನ್ನು ಮನಸ್ಸಿನಲ್ಲೇ ಗುಟ್ಟಾಗಿ ಪ್ರೀತಿಸಿಬಿಡುತ್ತ ಹೈಸ್ಕೂಲಿಗೆ ಹೋಗುತ್ತಿದ್ದ ದಿನಗಳಲ್ಲಿ ಓದಿದ ಕತೆಯದು. ಆ ಕತೆಯನ್ನು ಗುಂಡ್ಕಲ್ಲಿನ ಹೆಂಚಿನ ಮನೆಯ ಮಹಡಿಯಲ್ಲಿ ಕುಳಿತು ಓದಿದ ಆ ಸಂಜೆ [...]

ಸುಂದರಿಯರು-ಭಾಗ ಎರಡು

ಮಲ್ಲೇಶ್ವರಂ ಸುಂದರಿಯರು ಕತೆಗೆ ಸೋಜಿಗ ತರುವಂಥ ಪ್ರತಿಕ್ರಿಯೆಗಳು ಬಂದಿವೆ. ಹಲವರು ಇದರಲ್ಲಿ ಬರುವ ಪಾರ್ವತಿ ಮತ್ತು ಪರಮೇಶ್ವರರ ಕತೆ ಬರೀ ಕತೆಯಿರಬಹುದು ಎಂದು ಅಪಾರ್ಥ ಮಾಡಿಕೊಂಡಿದ್ದಾರೆ! ನಿಮ್ಮ ಹೆಂಡತಿ ಇದನ್ನು ಓದಿದ್ದಾರಾ ಎಂದು ಕೇಳುತ್ತ ಕೆಲವರು ನನ್ನನ್ನು ಅಡಿಯಿಂದ ಮುಡಿಯ ತನಕ ಪರೀಕ್ಷಾದೃಷ್ಟಿಕೋನದೊಂದಿಗೆ ನೋಡಿದ್ದೂ ಆಗಿದೆ. ಕೇಳಿದ್ದೂ ಆಗಿದೆ. ಈ ನಡುವೆ ಹಿಂದೆ ಯಾವಾಗಲೋ ಓದಿದ ತಮಾಷೆ ಪ್ರಸಂಗವೊಂದು ನೆನಪಾಗಿ `ಮಲ್ಲೇಶ್ವರಂ ಸುಂದರಿಯರು’ ಕತೆಯ ಎರಡನೇ ಭಾಗವನ್ನು ಬರೆಯೋಣ ಅನಿಸಿತು. ಇದೇನೂ ಕತೆಯಲ್ಲ. ಈ ತಮಾಷೆ ಪ್ರಸಂಗವನ್ನು [...]

ವಾಟ್‌ ಎ ಶಾಟ್‌!

ಸಿನಿಮಾವೊಂದು ಮಾಮೂಲಿ ಮಾತಿನ ಸನ್ನಿವೇಶದೊಂದಿಗೆ ಶುರುವಾಗಬಹುದು. ಹಾಡಿನೊಂದಿಗೆ, ಹೊಡೆದಾಟದೊಂದಿಗೆ ಶುರುವಾಗಬಹುದು. ಚೇಸ್‌ನೊಂದಿಗೆ, ತಮಾಷೆಯೊಂದಿಗೆ, ಪ್ರಣಯದೊಂದಿಗೆ ಶುರುವಾಗಬಹುದು. ಇವೆಲ್ಲಾ ಪ್ರಯೋಗಗಳೂ ನಡೆದಿವೆ. ಮುಗಿದಿವೆ. ಹೀಗಿದ್ದರೂ ಪ್ರಶ್ನೆ ಹಾಗೇ ಉಳಿಯುತ್ತದೆ. ಪಿಚ್ಚರ್‌ ಹೇಗೆ ಶುರುವಾದರೆ ಚೆನ್ನಾಗಿರುತ್ತದೆ?

ಯಕ್ಷರಿಗೊಂದು ಪ್ರಶ್ನೆ

ಇದು ವಿಕಾಸ ನೇಗಿಲೋಣಿ ಬರಹ. ಪಿಚ್ಚರ್‌ನಲ್ಲಿ ಯಕ್ಷಗಾನವೇ ಎಂದು ಹುಬ್ಬೇರಿಸಬೇಡಿ. ಯಲ್ಲಾಪುರ, ಸಿದ್ಧಾಪುರ, ತೀರ್ಥಹಳ್ಳಿ, ಸಾಗರ, ಕಾಸರಗೋಡು, ಕುಂದಾಪುರದಂಥ ಊರಿನ ಹಂಗಾಮಿ ಯುವಕರನ್ನು ನಾಸ್ಟಾಲ್ಜಿಯಾದಂತೆ ಕಾಡುವ ಯಕ್ಷಗಾನವನ್ನು ವಿಕಾಸ್‌ ಅದ್ಭುತವಾಗಿ ಮೆಲುಕು ಹಾಕಿದ್ದಾರೆ. ಅವರು ಇತ್ತೀಚೆಗೆ ಬರೆದ ಒಳ್ಳೆಯ ಬರಹಗಳಲ್ಲಿ ಇದೂ ಒಂದು. ಓದಿ ನೋಡಿ.

ಸಿನಿಮಾ ಉಂಡುಟ್ಟವನ ಕತೆ

ಇದು ವಿಕಾಸ ನೇಗಿಲೋಣಿ ಬರಹ. ವಾರಕ್ಕೊಂದು ಕನ್ನಡ ಸಿನಿಮಾ ನೋಡಿ ಆಗುವ ಸುಸ್ತಿನ ನಡುವೆ ಮೆಚ್ಚಿನ ಸಿನಿಮಾವೊಂದನ್ನು ಅವರು ಇಲ್ಲಿ ನೆನಪು ಮಾಡಿಕೊಂಡಿದ್ದಾರೆ. 1988ರಲ್ಲಿ ಬಿಡುಗಡೆಯಾದ ಸಿನಿಮಾ ಪ್ಯಾರಾಡಿಸೋ ಕುರಿತು ಅವರ ಸವಿಸವಿ ನೆನಪುಗಳು ಇಲ್ಲಿವೆ. ಓದಿ.

ಮಳೆಗೆ ಹೊರಗೆ

ಇದು ವಿಕಾಸ ನೇಗಿಲೋಣಿ ಬರೆದ ಕವಿತೆ. ಇತ್ತೀಚೆಗೆ `ಮುಂಗಾರು ಮಳೆ’ ಚಿತ್ರ ಚೆನ್ನಾಗಿ ಓಡುತ್ತಿರುವುದರಿಂದ, ವಿಕಾಸ್‌ ಸಿನಿಮಾ ಪತ್ರಕರ್ತರಾಗಿರುವುದರಿಂದ, ಈ ಕವಿತೆ ಅದರ ದುಷ್ಪರಿಣಾಮ ಇರಬಹುದು ಎಂದು ಸಹಜವಾಗಿಯೇ ಅನಿಸುತ್ತದೆ. ಆದರೆ, ಅಂಥದ್ದೇನೂ ಇಲ್ಲವೆಂದೂ, ಇದು ಇನ್ಯಾವುದರದೋ ದುಷ್ಪರಿಣಾಮ ಎಂದು ಸ್ವತಃ ವಿಕಾಸ್‌ ಒಪ್ಪಿಕೊಂಡಿದ್ದಾರೆ! ಬೆಂಗಳೂರು ಮಳೆಯನ್ನು ನೋಡುತ್ತ ಮಲೆನಾಡಿನ ಮಳೆಯನ್ನು ನೆನಪಿಸಿಕೊಳ್ಳುತ್ತ ಇದನ್ನು ಬರೆದಂತಿದೆ. ಹೇಗೂ ಮಳೆ ಸುರಿಯುತ್ತಿದೆ. ಬೆಚ್ಚಗೆ ಓದಿಕೊಳ್ಳಿ.

ಮಲ್ಲೇಶ್ವರಂ ಸುಂದರಿಯರು

ಇದೊಂದು ಪುಟ್ಟ ಕತೆ. ಇರ್ವಿನ್‌ ಶಾರ ಕತೆಯೊಂದನ್ನು ಓದುತ್ತಿರುವಾಗ ಈ ಕತೆ ರೂಪುಗೊಂಡಿತು. ಇದು ಆ ಕತೆಯ ರೂಪಾಂತರ ಎನ್ನಬಹುದು. ಅಥವಾ ಆ ಕತೆಗೊಂದು ಪುಟ್ಟ ಪ್ರತಿಕ್ರಿಯೆ ಎನ್ನಬಹುದು. ಜಗಳವಾಡುತ್ತಲೇ ಸುಖವಾಗಿರುವ ಬೆಂಗಳೂರಿನ ಸಮಸ್ತ ಗಂಡ ಹೆಂಡತಿಯರನ್ನು ನೆನಪು ಮಾಡಿಕೊಳ್ಳುತ್ತಾ, ಮಲ್ಲೇಶ್ವರಂ ಸುಂದರಿಯರ ಕುರಿತು ಅಸೂಯೆ ಪಡುತ್ತಾ ಇದನ್ನು ಓದಿಕೊಳ್ಳಬಹುದು.

ಅನಿಸುತಿದೆ ಯಾಕೋ ಇಂದು!

ಇಪ್ಪತ್ತು ವರ್ಷಗಳ ಹಿಂದೆ ಒಂದು ಚಳಿಗಾಲ. ಧಾರವಾಡದಲ್ಲಿರುವ ಕರ್ನಾಟಕ ವಿಶ್ವವಿದ್ಯಾಲಯದ ಕ್ಯಾಂಪಸ್ಸು ತಣ್ಣಗಿತ್ತು. ಅಲ್ಲಿಂದ ಸುಮಾರು ನೂರು ಕಿಲೋಮೀಟರ್‌ ದೂರದ ಮಲೆನಾಡಿನ ಹಳ್ಳಿಯ ಪ್ರೈಮರಿ ಸ್ಕೂಲಿನಲ್ಲಿ ಓದುತ್ತಿದ್ದ ನಾವು ಪ್ರವಾಸಕ್ಕೆಂದು ಧಾರವಾಡಕ್ಕೆ ಬಂದು ಆ ದಿನ ಕ್ಯಾಂಪಸ್ಸಿನಲ್ಲಿ ಹಾಗೇ ಸುಮ್ಮನೆ ನಡೆದುಕೊಂಡು ಹೋಗುತ್ತಿದ್ದೆವು.

ಕಳೆದುದು ಸಿಕ್ಕಿದೆ

ವಿಕಾಸ ನೇಗಿಲೋಣಿ ಇತ್ತೀಚೆಗೆ ಬರೆದ ಕವಿತೆ ಇದು. ಬಹಳ ದಿನಗಳ ಕಾಲ ಕವಿತೆ, ಕತೆ ಇತ್ಯಾದಿಗಳನ್ನೇನೂ ಬರೆಯದೇ ಮದುವೆಯಾಗಿ ಮನೆಯಲ್ಲಿ ಹಾಯಾಗಿ ಇದ್ದುಬಿಟ್ಟಿದ್ದ ವಿಕಾಸ್‌ ಈ ನಡುವಿನ ಬೇಸರದಲ್ಲೋ ಖುಷಿಯಲ್ಲೋ ಇದನ್ನು ಬರೆದಿದ್ದಾರೆ. ಓದಿ ನೋಡಿ.