ಹೆಸರು ಕೃಷ್ಣ. ಸ್ನೇಹಿತರ ವಲಯದಲ್ಲಿ ಕಿಟ್ಟಿ. ದಾಖಲಾತಿಗಳಲ್ಲಿ ಎಸ್ ಕೃಷ್ಣ. ಗಾಂಧೀನಗರದಲ್ಲಿ ಕ್ಯಾಮರಾಮನ್ ಕೃಷ್ಣ. ಸಿನಿಮಾ ಪ್ರಿಯರಿಗೆಲ್ಲ ಮುಂಗಾರುಮಳೆ ಕೃಷ್ಣ!
ಇವರು ಬಂದಿದ್ದು ಬೆಂಗಳೂರಿನ ನೆಲಮಂಗಲದ ಸಮೀಪದಿಂದ. ಅಪ್ಪ ಸರಕಾರಿ ಉದ್ಯೋಗಿ. ಅಮ್ಮ ಗೃಹಿಣಿ. ಮಗ ಎಂಜಿನೀಯರೋ ಡಾಕ್ಟರೋ ಆದರೆ ಚೆನ್ನಾಗಿರುತ್ತದೆ ಎಂದು ಭಾವಿಸುತ್ತಿದ್ದ ಮಧ್ಯಮ ವರ್ಗದ ಕುಟುಂಬ. ಮಗನನ್ನು ಪಿಯೂಸಿಯಲ್ಲಿ ವಿಜ್ಞಾನ ವಿಭಾಗಕ್ಕೆ ಸೇರಿಸುವಾಗ ಬಹುಶಃ ಅಪ್ಪ ಅಮ್ಮನ ಕಣ್ಣ ಮುಂದೆ ಇದ್ದಿದ್ದು ಕಂಪ್ಯೂಟರ್ ಸೈನ್ಸು ಅಥವಾ ಇಲೆಕ್ಟ್ರಾನಿಕ್ಸ್‌ನಲ್ಲಿ ಎಂಜಿನೀಯರಿಂಗ್.
ಪಿಯೂಸಿ ಮುಗಿಯಿತು. ಇನ್ನೇನು ಸಿಇಟಿ ಬರೆಯಬೇಕು. ಬರೆಯುವುದಕ್ಕೆ ಮನಸ್ಸಿಲ್ಲ ಎಂದರು ಕೃಷ್ಣ. ಅಪ್ಪ ಅಮ್ಮ ಗಾಬರಿ. ಸಿನಿಮಟೋಗ್ರಫಿ ಓದುತ್ತೇನೆ ಎಂದಾಗ ಇನ್ನೂ ಗಾಬರಿ. ಸ್ನೇಹಿತರಾದ ವೈದ್ಯರೊಬ್ಬರು ಕೃಷ್ಣ ನೆರವಿಗೆ ಬಂದರು. ಕೊನೆಗೂ ಕೃಷ್ಣ ಸಿನಿಮಟೋಗ್ರಫಿ ಓದಿದರು.
ಅದು ಮುಗಿಯುತ್ತಲೇ `ಶಾಪ’ ಚಿತ್ರದಲ್ಲಿ ಅಶೋಕ್ ಕಷ್ಯಪ್ ಜೊತೆ ಸಹಾಯಕರಾಗಿ ಕೆಲಸ. ಆಮೇಲೆ `ಮತದಾನ’ದಲ್ಲಿ ಮತ ಚಲಾವಣೆ. ಒಂದಷ್ಟು ದಿನಗಳ ನಂತರ ಅವರಿಗೆ ಸ್ವತಂತ್ರ ಕ್ಯಾಮರಾಮನ್ ಆಗುವ ಅವಕಾಶ ಸಿಕ್ಕಿತು. `ರೋಮಿಯೋ ಜ್ಯೂಲಿಯೆಟ್’ ಬಂತು. ಆಮೇಲೆ `ಹಾರ್ಟ್‌ಬೀಟ್’. ನಡುನಡುವೆ ಡಾಕ್ಯುಮೆಂಟರಿ, ಧಾರಾವಾಹಿ, ಕಾರ್ಪೊರೇಟ್ ವಿಡಿಯೋ ಎಂದು ಕೃಷ್ಣ ಹಾಯಾಗಿದ್ದರು. ಈ ಹಂತದಲ್ಲಿ ಸಿಕ್ಕಿದ್ದೇ `ಮುಂಗಾರುಮಳೆ’. ಕೃಷ್ಣ ಕ್ಯಾಮರಾ ಕೈಚಳಕ ಈಗ ಸಿನಿಮಾಪ್ರಿಯರ ವಲಯದಲ್ಲಿ ಜೋಗಕ್ಕಿಂತ ಪ್ರಖ್ಯಾತ!
ಒಂದು ಶಾಟ್ ಮತ್ತು ಛಾಯಾಗ್ರಾಹಕ ಜನಸಾಮಾನ್ಯರ ವಲಯದಲ್ಲಿ ಈ ಮಟ್ಟದ ಚರ್ಚೆಯಾಗುವುದು ಕನ್ನಡ ಚಿತ್ರರಂಗಕ್ಕೆ ಹೊಸದು. ಇಂಥದ್ದೊಂದು ಜನಪ್ರಿಯತೆಯ ಯಾವ ಸೂಚನೆಯೂ ಇದನ್ನು ಚಿತ್ರೀಕರಿಸುವ ಹಂತದಲ್ಲಿ ಕೃಷ್ಣ ಅವರಿಗೆ ಸಿಕ್ಕಿರಲಿಲ್ಲ. ಎಲ್ಲರೂ ಜೋಗವನ್ನು ನೋಡಿದ ಕೋನದಲ್ಲಿ ಜೋಗ ತೋರಿಸುವುದು ಬೇಡ ಎಂದಷ್ಟೇ ಅವರು ತೀರ್ಮಾನಿಸಿದ್ದರು. ಜೋಗದ ಪಕ್ಷಿನೋಟ ಕೊಡೋಣ ಎಂಬ ಆಲೋಚನೆ ಬಂತು. ಹೊಸ ಆಲೋಚನೆಗಳಿಗೆ ನಿರ್ದೇಶಕ ಯೋಗರಾಜ್ ಭಟ್‌ರಿಂದ ಪ್ರೋತ್ಸಾಹ ಇದ್ದೇ ಇತ್ತು. ಅರ್ಧ ದಿನದಲ್ಲಿ ಜೋಗದ ಚಿತ್ರೀಕರಣವನ್ನು ಅವರು ಮುಗಿಸಿಬಿಟ್ಟರು. ನಂತರ ಏನಾಯಿತು ಎಂದು ಎಲ್ಲರಿಗೂ ಗೊತ್ತಿದೆ.
`ಮುಂಗಾರುಮಳೆ’ ಚಿತ್ರದ ಕ್ಯಾಮರಾ ಕುರಿತು ಇಷ್ಟೊಂದು ಚರ್ಚೆ ನಡೆಯುವುದಕ್ಕೆ ಕಾರಣಗಳೇನು ಎನ್ನುವುದನ್ನೂ ಕೃಷ್ಣ ವಿಶ್ಲೇಷಿಸುತ್ತಾರೆ. ಸಿನಿಮಾದಲ್ಲಿ ಮೊದಲ ಹತ್ತು ನಿಮಿಷ ಮಾತಿಲ್ಲ. ಕೊನೆಯಲ್ಲಿ ಹತ್ತು ನಿಮಿಷ ಮಾತಿಲ್ಲ. ಇಲ್ಲೆಲ್ಲ ಮಾತಾಡುವ ಅವಕಾಶ ಇದ್ದಿದ್ದು ಛಾಯಾಗ್ರಾಹಕನಿಗೆ. ಜೊತೆಯಲ್ಲಿ ನಗರದ ಧೂಳು, ಕಟ್ಟಡ, ಗದ್ದಲದಲ್ಲಿ ಕಳೆದು ಹೋಗಿದ್ದ ಜನರಿಗೆ ಹಸಿರು ಮತ್ತು ಮಳೆ ನೋಡಿದಾಗ ರೋಮಾಂಚನವಾಗಿರಬೇಕು ಎನ್ನುತ್ತಾರೆ ಅವರು.
ಈ ಯಶಸ್ಸಿನ ಪರಿಣಾಮಗಳೇನು? ವೈಯಕ್ತಿಕವಾಗಿ ಕೃಷ್ಣ ಮೇಲಿದ್ದ ಜವಾಬ್ದಾರಿ ಹೆಚ್ಚಾಗಿದೆ. ಕನ್ನಡದ ನಿರ್ಮಾಪಕರೂ ಕ್ಯಾಮರಾ ಕುರಿತು ಮಾತಾಡತೊಡಗಿದ್ದಾರೆ. ಲೆನ್ಸ್‌ಗಳ ಕುರಿತು ಮಾತಾಡತೊಡಗಿದ್ದಾರೆ. ಪಾರ್ ಲೈಟು, ಕಿನೋ ಇತ್ಯಾದಿಯಾಗಿ ಟ್ಯೂಬ್‌ಲೈಟ್‌ಗಳ ಹೊರತಾದ ಲೈಟುಗಳೂ ಇವೆಯಲ್ಲ ಎಂದು ವಿಸ್ಮಿತರಾಗುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ.
ಮುಂದೇನು?
ಮುಂದಿನ ಸಿನಿಮಾಗಳಲ್ಲಿ ಏನು ಹೊಸತಿದೆ ಎಂದು ಜನ ಕೇಳಬಹುದು. ಆದರೆ ಒಬ್ಬ ಛಾಯಾಗ್ರಾಹಕ ಕತೆಗೆ ತಕ್ಕಂತೆ ಚಿತ್ರಗಳನ್ನು ಕಟ್ಟಿಕೊಡಬಹುದಷ್ಟೆ ಎನ್ನುತ್ತಾರೆ ಕೃಷ್ಣ. `ಮುಂಗಾರುಮಳೆ’ಗೆ ಕಾಂಟ್ರಾಸ್ಟ್ ಆದ ಚಿತ್ರ ಕೊಡಬೇಕು ಎನ್ನುವುದು ಅವರ ಆಸೆ. `ಪರ್‌ಫೆಕ್ಟ್ ಛಾಯಾಗ್ರಹಣ ನನ್ನದಲ್ಲ. ಫ್ರೇಮಿಗೆ ಏನು ಬೇಕೋ ಅದನ್ನು ಕೊಡುವುದಷ್ಟೇ ನನ್ನ ಉದ್ದೇಶ’ ಎನ್ನುತ್ತಾರೆ ಅವರು. ಫ್ರೇಮ್ ಚೆನ್ನಾಗಿ ಕಾಣುತ್ತದೆ ಎಂದಾದರೆ ಅವರು ಯಾವುದಕ್ಕೂ ರಾಜಿಯಾಗುತ್ತಾರೆ.
ಯೋಗಾಯೋಗ
`ಮುಂಗಾರುಮಳೆ’ಯಲ್ಲಿ ತೊಯ್ದು ತೊಪ್ಪೆಯಾಗಿದ್ದಕ್ಕೆ ಖುಷಿಪಡುತ್ತಲೇ `ಗಾಳಿಪಟ’ ಹಾರಿಸುವ ಅವಕಾಶ ತಪ್ಪಿಹೋಗಿದ್ದಕ್ಕೆ ಕೃಷ್ಣ ಅವರಿಗೆ ಬೇಸರವಿದೆ. ಸಿನಿಮಾ ಮಾಡುವಾಗ ಯೋಗರಾಜ್ ಭಟ್ ಕೊಟ್ಟ ಸ್ವಾತಂತ್ರ್ಯವನ್ನು ಸಂಭ್ರಮದಿಂದ ಹೇಳಿಕೊಳ್ಳುತ್ತಲೇ `ಮುಂಗಾರುಮಳೆ’ಯ ಯಶಸ್ಸಿನ ನಂತರ ಆದ ಬೆಳವಣಿಗೆಗಳ ಕುರಿತು ನಿರಾಶರಾಗುತ್ತಾರೆ.
`ನಮ್ ಸಿನಿಮಾದಲ್ಲಿ ನೀವಿದ್ದೀರಿ ಎಂದು ಕೊನೆಯ ತನಕವೂ ಭಟ್ ಹೇಳುತ್ತಿದ್ದರು. ಬರುತ್ತಿದ್ದ ಅವಕಾಶಗಳನ್ನೆಲ್ಲಾ ನಾನು ಬಿಟ್ಟು ಸುಮ್ಮನೆ ಕುಳಿತಿದ್ದೆ. ಕೊನೆಯಲ್ಲಿ ನೋಡಿದರೆ ನನ್ನ ಜಾಗಕ್ಕೆ ರತ್ನವೇಲು ಬಂದು ಕುಳಿತಿದ್ದರು’ ಎನ್ನುತ್ತಾರೆ ಕೃಷ್ಣ. `ಬಿಂದಾಸ್’ ಚಿತ್ರಕ್ಕಾಗಿ `ಗಾಳಿಪಟ’ ಬಿಟ್ಟೆ ಎನ್ನುವುದು ಸುಳ್ಳು ಎಂದೂ ಅವರು ಬೇಜಾರಾಗುತ್ತಾರೆ. ಈಗ `ಬಿಂದಾಸ್’ ಚಿತ್ರದಲ್ಲೂ ಅವರು ಛಾಯಾಗ್ರಾಹಕರಲ್ಲ. ಇಂಥ ಹೊತ್ತಿನಲ್ಲಿ ಮನೆಯಲ್ಲಿ ಸುಮ್ಮನೇ ಕುಳಿತುಕೊಳ್ಳುವುದು ಹಿಂಸೆ ಎನ್ನುತ್ತಾರೆ ಅವರು. `ಗಾಳಿಪಟ’ಕ್ಕಾಗಿ ತಾನು ಬಿಟ್ಟ ಸಿನಿಮಾಗಳ ಪಟ್ಟಿಯನ್ನೂ ಅವರು ಕೊಡಬಲ್ಲರು.
ಅಭಿಮಾನದ ಮಳೆ
ಚಿತ್ರವೊಂದರ ಲೈಟಿಂಗ್ ನೋಡಿ ಜನ ಮೆಚ್ಚಿಕೊಂಡಿದ್ದನ್ನು ಛಾಯಾಗ್ರಾಹಕ ಅಶೋಕ್ ಕಷ್ಯಪ್ ಒಮ್ಮೆ ಹೇಳಿದ್ದರಂತೆ. ಇದನ್ನು ಕೇಳಿದಾಗ ಇಂಥದ್ದೊಂದನ್ನು ನಾನೂ ಸಾಧಿಸಬೇಕು ಎಂದು ಕೃಷ್ಣ ಅಂದುಕೊಳ್ಳುತ್ತಿದ್ದರು. `ಮುಂಗಾರುಮಳೆ’ಯಲ್ಲಿ ಅದು ಸಾಧ್ಯವಾಗಿದೆ ಎನ್ನುವುದೇ ಖುಷಿ ಎನ್ನುತ್ತಾರೆ ಕೃಷ್ಣ.
ಈಗ ಕೃಷ್ಣ ಅವರ ಮೊಬೈಲು ರಾತ್ರಿ ಹನ್ನೆರಡು ಗಂಟೆಗೂ ಸದ್ದು ಮಾಡುತ್ತಿರುತ್ತದೆ. ಎತ್ತಿಕೊಂಡರೆ ಜೋಗದ ಶಾಟ್ ಮಾತುಕತೆ. ಹೊಸ ಚಿತ್ರದಲ್ಲಿ ಏನು ಹೊಸತು ಮಾಡುತ್ತಿದ್ದೀರಿ ಎಂಬ ಪ್ರಶ್ನೆ. ಹುಡುಗಿಯರ ಫೋನ್‌ಗಳೂ ಮುಂಗಾರು ಮಳೆಯಷ್ಟೇ ಚುರುಕಾಗಿದೆ ಎನ್ನುವುದು ಗಮನಾರ್ಹ.
ಅಂದಹಾಗೆ ಕೃಷ್ಣ ಈಗ `ಗೆಳೆಯ’ ಮತ್ತು `ಕಬಡ್ಡಿ’ ಚಿತ್ರಗಳಿಗೆ ಕೆಲಸ ಮಾಡುತ್ತಿದ್ದಾರೆ. `ಗೆಳೆಯ’ ಚಿತ್ರೀಕರಣ ಮುಗಿದಿದೆ. `ಕಬಡ್ಡಿ’ ಇನ್ನೂ ಮುಗಿಯಬೇಕು. ಈ ನಡುವೆ ಮಗ ಎಂಜಿನೀಯರ್ ಆಗಬೇಕಿತ್ತು ಎಂಬ ಚರ್ಚೆ ಈಗ ಮನೆಯಲ್ಲಿ ನಡೆಯುವುದಿಲ್ಲ. ಬಹುಶಃ ಈ ಸಲದ ಮುಂಗಾರು ಮಳೆಗೆ ಅದೆಲ್ಲ ಕೊಚ್ಚಿಹೋಗಿದೆ!
8 Comments
Krishna, Krishna,
Eegaladaroo eee blog update aayitalla? Ashte saaku.
ಮುಂಗಾರು ಮಳೆಯ ಹೀರೋ ಬಗ್ಗೆ ತಿಳಿಸಿದ್ದಕ್ಕೆ ಥ್ಯಾಂಕ್ಸ್!
ಸೀಸನ್ನಿಗೆ ಸರಿಯಾಗಿ ಮಳೆ ಬರುತ್ತಿರಲಿ ಮತ್ತು ಬರೀ ಮಳೆಯಲ್ಲೇ ಕೊಚ್ಚಿ ಹೋಗದಿರಲಿ
ಅನಿಸುತಿದೆ ಯಾಕೋ ಇಂದು …ಜೋಗದ ಮೇಲೊಂದು ಜಿಮ್ಮಿ ಜೀಪ್ ತಿರುಗಿಸಿ ಕ್ಯಾಮರಾ ಮಾನ್ ಸೈ ಅನಿಸಿಕೊಂಡದ್ದು ಯಾಕೋ ಇಂದು…? ನೆಲವನ್ನು ತೊಯ್ದು ಮಳೆ ಅಂದರೆ ಅದು ಮಳೆಯಾಗುವುದೆಂದು…?
ಕೃಷ್ಣರ ಸ್ಲೋ ಮೂವ್‍ಮೆನ್ಟ್‍ಗಳು ಮುದಕೊಟ್ಟವು. ಆದರೆ ಲೈಟಿಂಗ್ ಅಲ್ಲ. ರತ್ನವೇಲು ಸ್ವಲ್ಪ ಒಳ್ಳೆ ಕೆಲಸ ಮಾಡಿದ್ದರೇನೋ ನಿಜ ಕೃಷ್ಣ. ಆದರೆ ಬೇಸರಪಡಬೇಡಿ… ಅವರು ಮಾತಾಡ್ಕೊಳ್ಳೋಷ್ಟೇನೂ ಅವರ ಕೆಲಸ ಚೆನ್ನಾಗಿರ್ಲಿಲ್ಲ. ಅವರ ಸೋರ್ಸ್ ಲೈಟಿಂಗ್ ವಿಚಿತ್ರವಾಗೇ ಇತ್ತು. (ನಿಮ್ಮಲ್ಲಿ ಸೋರ್ಸ್ ಇಲ್ಲದಿದ್ದರಿಂದ ನೀವು ಆ ಚರ್ಚೆಯಿಂದ ಬಚಾವ್ ಬಿಡಿ) ಇನ್ನು ಜನ ಲೈಟು ಕ್ಯಾಮರಾ ಬಗ್ಗೆ ಮಾತನಾಡುವುದನ್ನ ಆರಂಭಿಸಿದ್ದು ನಿಜವೋ ಏನೋ… ಆದ್ರೆ ಅದು ಕೃಷ್ಣನಿಂದಾಗಿದ್ದು ಟ್ರಾಜೆಡೀನೇ….
photos back grond
ya i liked krishnas work in mungaru male ….
nange edara bagge ashtu aalvada gnana ella adru this movie gave a different view to kannada industry..
Gundkal sahebarige namaskara. Neevu marali aagasakke bandiddeeri. Goodu ashtu bega besaravagiralaradu, allave? Indu munjaane nimma aagamanada vishaya tiliyitu. Kshamisi, nimmellarinda koncha dooravidde. Tappu nannadalla, nimmadoo alla. Yaara mele goobe koorisona? Namma kelasada ottadave athava nanna sankochave? Dayavittu tamma dooravani sankhye tilisi– haleya settannu ajaagarookateyinda kaledu kondiddene.Koduvirallave? Nimmodane maataduvudu bahalavuntu– halatu, hosatu, are hosatu–ellavooo… Avakasha koduvira?
Uttaravannu nireeksheyalli…
I don’t know how far this movie did it’s job in the Kannada industry. But I say that it was quite useful because of the Krishna Krishna idea! You don’t say?
—————————————————————-
If ever you felt you were at a loss because it was so hard to blog in KANNADA. Don’t ever
fret again! There’s http://quillpad.in/kannada/ just to do it for you!
Try it! Enjoy it!
Gundkal sahibre. channagi heliddira.
I am quite clearly in the appreciation of this entire article. Do it all the good you can sir. all the best!
And I must say, Krishna was exceptional in Mungaru Male.
—————————————————————-
If ever you felt you were at a loss because it was so hard to blog in KANNADA. Don’t ever
fret again! There’s http://quillpad.in/kannada/ just to do it for you!
Try it! Enjoy it!