ಬಾದಾಮಿ ಹೌsನಲ್ಲಿರುವ ಪ್ರಿಯದರ್ಶಿನಿ ಚಿತ್ರಮಂದಿರ ಎಂದರೆ ಸಾಕು. ಮನಸ್ಸಿನಲ್ಲಿ ಸಿನಿಮಾ ರೀಲು ಸುತ್ತಿಕೊಳ್ಳತೊಡಗುತ್ತದೆ. ಸುಮಾರು ನೂರು ಜನ ಕುಳಿತುಕೊಳ್ಳಬಹುದಾದ ಪುಟ್ಟ ಚಿತ್ರಮಂದಿರದ ಕೊನೆಯ ಸಾಲಿನ ಮೂಲೆಯ ಕುರ್ಚಿಯಲ್ಲೇ ಕುಳಿತು ಅದೆಷ್ಟೋ ಸಿನಿಮಾ ನೋಡಿದ್ದೇನೆ. `ದ್ವೀಪ’ ಚಿತ್ರದಿಂದ `ಶಾಂತಿ’ ಚಿತ್ರದ ತನಕ ಎರಡೂ ಅತಿಶಯಗಳನ್ನು ಅನುಭವಿಸಿದ್ದೇನೆ. ಬರಗೂರು ರಾಮಚಂದ್ರಪ್ಪ ನಿರ್ದೇಶಿಸಿದ ಚಿತ್ರ `ಶಾಂತಿ’ ಎನ್ನುವ ಮಾಹಿತಿ ಯಾವ ಅತಿಶಯದ ತುದಿಯಲ್ಲಿ ಯಾವ ಚಿತ್ರವಿದೆ ಎನ್ನುವುದನ್ನು ಖಚಿತಪಡಿಸುತ್ತದೆ!
ಮೊನ್ನೆ ಪ್ರಿಯದರ್ಶಿನಿಯ ಕೊನೆಯ ಸಾಲಿನ ಮೂಲೆಯಲ್ಲಿ ಕುಳಿತು ಮತ್ತೊಂದು ಚಿತ್ರ ನೋಡಿದೆ. ಆ ಚಿತ್ರಮಂದಿರದಲ್ಲಿನ ವಾತಾವರಣಕ್ಕೊಂದು ವಿಚಿತ್ರವಾದ ವಾಸನೆಯಿದೆ. ಅದು ಎಂಥ ವಾಸನೆ ಎಂದು ವಿವರಿಸುವುದು ಕಷ್ಟ. ಈ ಹಿತವಾದ ವಾಸನೆಯನ್ನು ಅನುಭವಿತ್ತ ಕುಳಿತಿದ್ದಾಗ ಪಕ್ಕದಲ್ಲಿ ಕುಳಿತಿದ್ದ ಎ್ಟಿಐ ಗೆಳೆಯ ಅಭಯ ಹೇಳಿದ: ಪೂನಾ ಇ್ಸ್ಟಿಟ್ಯೂ್ನ ಚಿತ್ರಮಂದಿರಗಳಲ್ಲೂ ಇಂಥದ್ದೇ ವಾಸನೆಯಿರುತ್ತದೆ. ಬಹುಶಃ ಅದು ಒಳ್ಳೆಯ ಚಿತ್ರಗಳ ವಾಸನೆಯಿರಬಹುದು ಎಂದು ಅನಂತರ ನಾವು ತೀರ್ಮಾನಕ್ಕೆ ಬಂದೆವು. ಏಕೆಂದರೆ ಆ ದಿನ ಅಂಥದ್ದೊಂದು ಒಳ್ಳೆಯ ಚಿತ್ರ ನೋಡಿದ್ದೆವು. ಆ ಚಿತ್ರದ ಹೆಸರು: ಕಾಡ ಬೆಳದಿಂಗಳು.
ಕನ್ನಡದ ಚಿತ್ರೋದ್ಯಮದ ವಾತಾವರಣದಲ್ಲಿ ಕಾಣಬಹುದಾದ ಹೊಚ್ಚ ಹೊಸ ಶೈಲಿಯ ಕತೆ `ಕಾಡ ಬೆಳದಿಂಗಳು’. ನಿರೂಪಣೆಯೂ ಅಷ್ಟೇ ಸೊಗಸಾಗಿದೆ. ಇದನ್ನು ಬರೆದವರು ಪತ್ರಕರ್ತ ಜೋಗಿ. ಈ ಕತೆಗೆ ಅನೇಕ ಎಳೆ, ಪದರಗಳಿದ್ದು ಅಷ್ಟೇ ಆಯಾಮಗಳಿವೆ. ಹೊಸ ತಲೆಮಾರಿನೊಂದಿಗೆ ಹಳ್ಳಿ ಬಿಡಲಾಗದ ಹಳಬರು ಈ ಕತೆಯ ಒಂದು ಎಳೆ. ಪಟ್ಟಣ ಬಿಡಲಾಗದ ಹೊಸ ತಲೆಮಾರಿನವರದು ಮತ್ತೊಂದು ಎಳೆ. ಹಳ್ಳಿಯಿಂದ ಕಾಣೆಯಾಗುತ್ತಿರುವ ಯುವ ತರುಣರು ಸೇರಿಕೊಂಡಿದ್ದಾದರೂ ಎಲ್ಲಿಗೆ ಎನ್ನುವುದು ಮಗದೊಂದು ಎಳೆ. ಹಳ್ಳಿಯ ದುರಂತವೊಂದು, ಖಾಸಗೀ ಯಾತನೆಯೊಂದು ಸುದ್ದಿ ಚಾನೆ್ ಒಂದಕ್ಕೆ ಸೆನ್ಸೇಷನ್ ಸುದ್ದಿಯಾಗಿಬಿಡುವುದು ನಾಲ್ಕನೇ ಎಳೆ. ಸುದ್ದಿ ಚಾನೆ್ನ ವರದಿಗಾರ್ತಿಯ ಗೊಂದಲಗಳು, ತೊಂದರೆಗಳು ಮತ್ತೊಂದು ಎಳೆ. ಇಷ್ಟೊಂದು ಎಳೆಗಳನ್ನು ಸಂಕೀರ್ಣ ಕತೆಯನ್ನು ಚಿತ್ರಕತೆಯಾಗಿ ನೇಯ್ಗೆ ಮಾಡಿದವರು ಪತ್ರಕರ್ತರಾದ ಉದಯ ಮರಕಿಣಿ ಮತ್ತು ಜೋಗಿ. ಕತೆ ಮತ್ತು ಚಿತ್ರಕತೆಯೇ ಈ ಚಿತ್ರವನ್ನು ಬೇರೆ ಎತ್ತರಕ್ಕೆ ಕೊಂಡಯ್ಯುತ್ತದೆ. ಜೋಗಿ ಮತ್ತು ಮರಕಿಣಿಯ ಬರವಣಿಗೆಯ ಸುಖವನ್ನು ಅನುಭವಿಸಿದವರೂ ಈ ಚಿತ್ರವನ್ನು ನೋಡಿ ಹಿತವಾದ ಅಚ್ಚರಿ ಅನುಭವಿಸುತ್ತಾರೆ. ಸಂಭಾಷಣೆಯೂ ಅಷ್ಟೇ ಚುರುಕು. ಅಷ್ಟೇ ಸಹಜ.
ವಾಚ್ಯವಾಗಿಬಿಡಬಹುದಾಗಿದ್ದ ಹಲವು ಸಂಗತಿಗಳನ್ನು, ಲೌ್d ಅನಿಸಬಹುದಾಗಿದ್ದ ಎಷ್ಟೋ ಸನ್ನಿವೇಶಗಳನ್ನು ಚಿತ್ರಕತೆ ಬರೆಯುವಾಗ ನಿಭಾಯಿಸಿದ ರೀತಿ ಖುಷಿ ಕೊಡುತ್ತದೆ. ಉದಾಹರಣೆಗೆ ಅಂಗಡಿಯ ಮಾಲಿಕನ ಹತ್ಯೆ ಪ್ರಸಂಗ. ಆ ಹತ್ಯೆಯನ್ನು ತೋರಿಸದೆಯೇ ನಡೆದಿರಬಹುದಾದ ಹಿಂಸೆಯ ಭೀಕರತೆಯನ್ನು ಸೃಷ್ಟಿಸುವುದು ಚಿತ್ರಕತೆ ಬರೆದವರಿಗೆ ಸಾಧ್ಯವಾಗಿದೆ. ಆ ಹತ್ಯೆ ಮಾಡಿದವರು ಯಾರು ಎಂದು ಹೇಳದೆಯೇ ಯಾರು ಮಾಡಿದ್ದಾರೆ ಎನ್ನುವುದನ್ನು ಖಚಿತವಾಗಿ ಹೇಳುವುದು ಸಾಧ್ಯವಾಗಿದೆ. ಇದು ಒಂದು ಚಿತ್ರಕತೆಯ ನಿಜವಾದ ಗೆಲುವು. ಇಂಥ ಹಲವು ಅಚ್ಚರಿಗಳು ಈ ಚಿತ್ರಕತೆಯಲ್ಲಿದೆ.
ಅಭಿನಯದ ವಿಷಯದಲ್ಲಿ ಲೋಕನಾ್ ಮತ್ತು ದತ್ತಣ್ಣ ಒಬ್ಬರನ್ನೊಬ್ಬರು ಮೀರಿಸುತ್ತಾರೆ. ಕಳಸದಂಥ ಊರಿನ ಒಬ್ಬ ಹಿರಿಯನ ಪಾತ್ರವನ್ನು ದತ್ತಣ್ಣ ಅಲ್ಲದೇ ಬೇರೆ ಯಾರೂ ಅಷ್ಟು ಅದ್ಭುತವಾಗಿ ಮಾಡುವುದು ಸಾಧ್ಯವಿರಲಿಲ್ಲ. ಮೇಷ್ಟ್ರ ಪಾತ್ರವನ್ನು ಲೋಕನಾ್ ಅಲ್ಲದೇ ಬೇರೆ ಯಾರೂ ಅಷ್ಟು ಚೆನ್ನಾಗಿ ನಿರ್ವಹಿಸುವುದು ಸಾಧ್ಯವಿರಲಿಲ್ಲ. ಇಬ್ಬರೂ ಪಾತ್ರವೇ ಆಗಿ ಹೋಗಿದ್ದಾರೆ.
ಮಲೆನಾಡಿನ ಸೊಗಸನ್ನು ಬಹುಶಃ ಎ್ ಎಂ ರಾಮಚಂದ್ರ ಅವರಷ್ಟು ಸಮರ್ಥವಾಗಿ ಸೆರೆ ಹಿಡಿಯುವುದು ಬಹುಶಃ ಬೇರೆ ಯಾವುದೇ ಛಾಯಾಗ್ರಾಹಕರಿಗೆ ಸಾಧ್ಯವಿಲ್ಲ. ಇದನ್ನು ದ್ವೀಪದಲ್ಲಿಯೇ ಸಿದ್ಧಮಾಡಿದ್ದ ರಾಮಚಂದ್ರ `ಕಾಡ ಬೆಳದಿಂಗಳ’ ಮೂಲಕ ಇನ್ನೊಂದು ಸಲ ಅದನ್ನು ನೋಡುಗರಿಗೆ ನೆನಪು ಮಾಡಿಕೊಟ್ಟಿದ್ದಾರೆ.
ಹಾಗಾದರೆ ಈ ಸಿನಿಮಾದಲ್ಲಿ ನೆಗೆಟಿವ್ವೇ ಇಲ್ಲವೇ ಎಂದು ಕೇಳಬಹುದು. ನೆಗೆಟಿ್ ಇಲ್ಲದಿದ್ದರೆ ಸಿನಿಮಾ ಆಗುವುದು ಹೇಗೆ? ನಡೆದುಕೊಂಡು ಹೋಗುತ್ತಿರುವಾಗ ಹೆಜ್ಜೆ ಸಪ್ಪಳವೇ ಕೇಳಿಸುತ್ತಿಲ್ಲವಲ್ಲ ಎಂದು ಅನಿಸಬಹುದು. ಮಾತಾಡುತ್ತಿದ್ದರೂ ತುಟಿ ಮುಚ್ಚಿದೆಯಲ್ಲಾ ಎಂದು ಕೆಲವೆಡೆ ಕಾಣಬಹುದು. ಸಂಗೀತ ನಿರ್ದೇಶಕ ರಾಜೇ್ ರಾಮನಾಥ್ ಗುಂಪಿಗೆ ಸೇರದ ಹೆಸರು ಎಂದೆಲ್ಲಾ ಅನಿಸಬಹುದು. ಆದರೆ ಚಿತ್ರದ ಕತೆ, ಚಿತ್ರಕತೆ, ನಿರೂಪಣೆ ಒಂದು ಹೊಸ ಜಗತ್ತನ್ನು ಸೃಷ್ಟಿಮಾಡಿದಾಗ ಇದೆಲ್ಲಾ ದೊಡ್ಡದು ಎಂದು ಅನಿಸುವುದೇ ಇಲ್ಲ. ಇದಕ್ಕಾಗಿ ನಿರ್ದೇಶಕರು ಲಿಂಗದೇವರು ಮತ್ತು ತಂಡವನ್ನು ಅಭಿನಂದಿಸಬಹುದು. ಅನುಮಾನವಿಲ್ಲ. `ಕಾಡ ಬೆಳದಿಂಗಳು’ ಚಿತ್ರಕ್ಕೆ ಒಂದಿಷ್ಟು ಒಳ್ಳೊಳ್ಳೆಯ ಪ್ರಶಸ್ತಿಗಳು ಬರಲಿಕ್ಕಿದೆ. ನೋಡಿದ ಜನ ಚಿತ್ರವನ್ನು ಮೆಚ್ಚಿ ಪ್ರೀತಿ ಮಾಡಲಿಕ್ಕಿದೆ.
ಹಳ್ಳಿಯಿಂದ ಬೆಂಗಳೂರಿಗೆ ಗೊತ್ತಿಲ್ಲದ ಜಗತ್ತನ್ನು ಹುಡುಕಿಕೊಂಡು ಬಂದು ಗೊಂದಲಗೊಂಡಿರುವ, ಕಳಸದಂಥದ್ದೇ ಒಂದು ಊರಾದ ಗುಂಡ್ಕ್ನ ತಂದೆಯೊಬ್ಬರ ಮೂವರು ಮಕ್ಕಳಲ್ಲಿ ಒಬ್ಬನಾಗಿರುವ ನನ್ನಲ್ಲಿ `ಕಾಡ ಬೆಳದಿಂಗಳು’ ಹುಟ್ಟಿಸಿದ ಸ್ಪಂದನೆಗಳನ್ನು ಬರೆಯಲು ಹೋಗಿ ಸೋತು ಇಲ್ಲಿಗೇ ನಿಲ್ಲಿಸುತ್ತಿದ್ದೇನೆ
-
ಪುಟಗಳು
ವಿಭಾಗಗಳು
-
ಇತ್ತೀಚಿನ ಬರೆಹ
-
ಪ್ರತಿಕ್ರಿಯೆ
raaghu on ನನ್ನ ಕೃಷ್ಣ… ರೂಪ on ಮಲ್ಲೇಶ್ವರಂ… nanda on ನನ್ನ ಕೃಷ್ಣ… pbanagi on ಏನ್ ಹುಡುಗ… chiraviraha on ದಾದಾಗಿರಿಯ… -
ಲೆಕ್ಕಿಗ
- 15,473 hits
-
ಹಕ್ಕುಗಳು
© ಪರಮೇಶ್ವರ ಗುಂಡ್ಕಲ್ 2007 -
Top Posts
8 Comments
ಪ್ರೀತಿಯ ಪರಮೇಶ್,
ನಿಮ್ಮ ಪ್ರೀತಿಗೆ ಕೃತಜ್ಞ ಎಂದಷ್ಟೇ ಹೇಳಬಲ್ಲೆ. ಚಿತ್ರಕತೆ ಬರೆಯುತ್ತಾ ಹೋದ ಹಾಗೆ ನಾನೂ ಉದಯ್ ತುಂಬ ಭಾವುಕರಾಗಿಬಿಟ್ಟಿದ್ದೆವು. ನಮ್ಮ ಆತ್ಮಚರಿತ್ರೆಯ ತುಣುಕೊಂದನ್ನು ಬರೆಯುತ್ತಿದ್ದೇವೋ ಅನ್ನುವ ಹಾಗೆ. ನಮ್ಮಪ್ಪ ಬೆಂಗಳೂರಿಗೆ ಬಂದು ಇಲ್ಲಿ ಹಿಂಸೆ ಪಟ್ಟು ಊರಿಗೆ ಮರಳಿದ್ದ, ಈಗಲೂ ಜೊತೆಗಿರುವ ಅಮ್ಮ ಊರಿಗೆ ಹೋದಾಗೆಲ್ಲ ಸಂತೋಷದಿಂದ ಅರಳಿಕೊಳ್ಳುವುದು ನೆನಪಾಗುತ್ತಿತ್ತು.
ನಾವೆಲ್ಲ ಬಹುಶಃ ಒಂದೇ ದೋಣಿಯ ಪಯಣಿಗರು. ನಮ್ಮಂಥವರು ಸಾಕಷ್ಟು ಮಂದಿ ಇದ್ದೇವೆ ಅಲ್ವಾ?
ತಂಗಿಯ ಮದುವೆ ಮುಗಿಸಿಕೊಂಡು ಬನ್ನಿ. ಕೂತು ಮಾತಾಡೋಣ.
ಜೋಗಿ
ಇದು ನನ್ನ ನಿಮ್ಮಂಥವರಿಗಷ್ಟೇ ಅರ್ಥವಾಗುವ ಹಾಗೂ ರುಚಿಸುವ ಸಿನಿಮಾ ಎಂಬ ನನ್ನ ಗುಮಾನಿಯನ್ನು ನಿಜವಾಗಿಸಿದ್ದಕ್ಕೆ ಥ್ಯಾಂಕ್ಸ್. ಊರು ಬಿಟ್ಟು ಇಪ್ಪತ್ತೈದು ವರ್ಷವಾದರೂ ಇನ್ನೂ ಎಡಬಿಡಂಗಿತನವನ್ನು ಬಿಡುವುದಕ್ಕೆ ಸಾಧ್ಯವಾಗದೆ ಒದ್ದಾಡುತ್ತಿರುವ ಮತ್ತು ನನ್ನೂರನ್ನು ಮತ್ತು ಸತ್ತುಹೋದ ನಮ್ಮಪ್ಪನನ್ನು ಕನಸಲ್ಲಿ ಆಹ್ವಾನಿಸುತ್ತಾ ವಿಚಿತ್ರ ಪಾಪಪ್ರಜ್ಞೆಯಿಂದ ಬಳಲುತ್ತಿರುವ ನನ್ನ ಪ್ರತಿಬಿಂಬವೇ ಈ ಸಿನಿಮಾ. ನಿಮಗೆ ಗೊತ್ತಿಲ್ಲ, ನನ್ನಪ್ಪ ಸತ್ತಾಗ ಮೈತುಂಬಾ ಸಾಲ ಮಾಡಿದ್ದ. ಆ ಸಾಲ ಮಾಡಿದ್ದು ಏಳು ಮಕ್ಕಳನ್ನು ಓದಿಸಿ ಪದವೀಧರರನ್ನಾಗಿ ಮಾಡುವುದಕ್ಕೆ. ಬಹುಶ ಆತ ತನ್ನ ಜೀವನದಲ್ಲಿ ಮಾಡಿದ ಅತಿದೊಡ್ಡ ತಪ್ಪೆಂದರೆ ಅದೇ ಇರಬೇಕು. ಆತ ಸಾಯುವಾಗ ನಾವ್ಯಾರೂ ಮನೆಯಲ್ಲಿರಲಿಲ್ಲ. ನಾವು ಮನೆಗೆ ಹೋದಾಗ ಪುರೋಹಿತರು ನನ್ನಪ್ಪನನ್ನು ಶವ ಎಂದೇ ಕರೆಯುತ್ತಿದ್ದರು. ಆತನ ಮುಖದಲ್ಲಿ ಕೋಪ ಇತ್ತೋ, ದುಖ ಇತ್ತೋ ಅಥವಾ ಧನ್ಯತೆಯಿತ್ತೋ ಗೊತ್ತಾಗಲಿಲ್ಲ. ಈಗ ನನ್ನ ದೊಡ್ಡಣ್ಣ ಊರಲ್ಲೇ ಇದ್ದು ಅಪ್ಪ ಮಾಡಿದ ಸಾಲವನ್ನು ಇನ್ನೂ ತೀರಿಸುತ್ತಲೇ ಇದ್ದಾನೆ. ಅಂದಹಾಗೆ ಅಣ್ಣನ ಮಗ ಇಲ್ಲೇ ಬೆಂಗಳೂರಲ್ಲಿ ಯಾವುದೋ ಸಾಫ್ಟ್ವ್ ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ನಮ್ಮ ಪಾಪಗಳು ಮರಿಹಾಕುತ್ತಿವೆ.
ಏನ್ರೀ ಗುಂಡ್ಕಲ್, ನಮಗೆಲ್ಲ ತಿಳಿಸದೆ ನೀವಿಷ್ಟೇ ಜನ ಹೋಗಿ ಬಂದಿದ್ದೀರಿ. ಬರೇ ಕಂಪ್ಯೂಟರ್ ಬಗ್ಗೆ ಇದ್ದಾಗ ಮಾತ್ರ ನಮ್ಮ ನೆನಪು ಬರೋದೋ ಹೇಗೆ?
ವಿಕಾಸ್ ಇದೇ ಚಿತ್ರದ ಬಗ್ಗೆ ಬರೆದಿರೋ ಸಚಿತ್ರ ಲೇಖನ ಸಂಪದದಲ್ಲಿ ಹಾಕಿದ್ದಾರೆ.
ಉದಯ್, ನಾನಿನ್ನೂ ಸಿನಿಮಾ ನೋಡಿಲ್ಲ. ಸಿನಿಮಾ ತುಂಬಾ ಚೆನ್ನಾಗಿದೆ ಅಂತ ಕೇಳಿ ಬಲ್ಲೆ. ಇಲ್ಲಿ ಪರಮೇಶ್ ಅಭಿಪ್ರಾಯಕ್ಕೆ ಉತ್ತರವಾದ ನಿಮ್ಮ ಕಾಮೆಂಟ್ ಓದಿದ ಮೇಲೆ ಸಿನಿಮಾ ನೋಡಲೇಬೇಕು ಅನಿಸಹತ್ತಿದೆ. `ಕಾಡ ಬೆಳದಿಂಗಳು’ ಕಾಡುವುದಕ್ಕೂ ಮುನ್ನ ನಿಮ್ಮ ಈ ಕಾಮೆಂಟ್ ತುಂಬಾ ಕಾಡಿಸಿಬಿಟ್ಟಿತು; ಎಷ್ಟೆಂದರೆ, ನಿಮ್ಮ ಈ ಕಾಮೆಂಟ್ನಲ್ಲೇ ಇನ್ನೊಂದು ಕಾಡುವ ಸಿನಿಮಾಕ್ಕಾಗುವ ಸರಕಿದೆ ಅಂತ ವಿಕಾಸ್ ಜೊತೆ ಹೇಳಿಕೊಂಡು ಮನಸ್ಸಿನ ಭಾರ ತಗ್ಗಿಸಿಕೊಂಡೆ.
ನನಗಿನ್ನೂ ನೆನಪಿದೆ. ನನ್ನಪ್ಪ ಮಧ್ಯರಾತ್ರಿಯೋ ಬೆಳಗಿನ ಜಾವವೋ ಸತ್ತಿದ್ದು. ನಾನು ಆ ರಾತ್ರಿ ಎನ್ಎಚ್-17ರ ಪಕ್ಕದ ನಾವುಂದ ಎಂಬ ಊರಿನಲ್ಲಿ ಚಳಿಗೆ ಮುದುಡಿ ಕುಳಿತು `ಧರ್ಮಸ್ಥಳ ಕ್ಷೇತ್ರ ಮಹಾತ್ಮೆ’ ಎಂಬ ಯಕ್ಷಗಾನ ನೋಡುತ್ತಿದ್ದೆ! ಆ ಪ್ರಸಂಗವನ್ನು ನೋಡಿದವರ ಕಷ್ಟಗಳು, ಪಾಪಗಳು ಪರಿಹಾರವಾಗುತ್ತವೆ ಎಂದು ಯಾರೋ ಹೇಳಿದ್ದರು. ಮನೆಗೆ ಬಂದು ನೋಡಿದರೆ ಅಪ್ಪ ಶವವಾಗಿ ಮಲಗಿದ್ದ. ನನ್ನ ಕಷ್ಟಗಳು ಆರಂಭವಾಗಿದ್ದವು.
ಕೆಲವೊಮ್ಮೆ ಹೀಗೂ ಘಟಿಸಬಹುದು, ಅಲ್ಲವೇ?
-ಸುರೇಶ್ ಕೆ.
I think whenever you write about movies it ends up being a good article. Or is it that you write about only good movies? yaksha prashne..
Well, I saw a programme about this movie on Etv (or was it TV9) I thought it was a wonderful effort. Every frame I watched on TV looked fresh (considering boredom created by the run of the mill films of kannada.)
As a film buff, I would definitely like to watch this movie. The team of Linga Devaru, Ramachandra (who can forget the magic of Dweepa?) Loknath and Daththanna is more than enough for me to attract to that movie.
But will it be released in my city? (Mangalore)
‘Cyanide’ was a semi hit here and I enjoyed that film. ‘Naayi Neralu’ also got released here, but only for few days. I could not make it to this film. I loved Dweepa and was waiting to watch ‘Naayi Neralu’
There was one more good film I saw in the city recent times. It is an international award winning Tulu movie ‘Suddha’. Except these few movies Mangaloreans are still deprived of all the good regional movies. May the monopoly of formulaic movies end.
ಭವಿಷ್ಯ ಹುಡುಕಿಕೊಂಡು ಬೆಂಗಳೂರಿಗೆ ಬಂದವರು, ಹಿಂಸೆ ಪಟ್ಟವರು, ಹಿಂಸೆ ಪಟ್ಟೂ ಗೆಲುವನ್ನು ದಕ್ಕಿಸಿಕೊಳ್ಳದವರು, ಮರಳಬೇಕು ಎನ್ನುವವರು…… ಅದರಲ್ಲೂ ಸೋತವರ ಪಾಡಂತೂ….
ಬೆಂಗಳೂರಿಂದ ಊರಿಗೆ ಹೋದರೆ, ಇಲ್ಲಿ ಕೂತು ಏನು ಮಾಡುವುದು ಅಂತ ಎರಡೇ ದಿನಕ್ಕೆ ಬೆಂಗಳೂರಿಗೆ ವಾಪಸ್ಸಾಗುತ್ತಿದ್ದ ನನ್ನ ತಂದೆಗೆ ಇತ್ತೀಚೆಗೆ ಊರಿನಲ್ಲೇ ಇರಬೇಕು ಅನ್ನೋ ಹಂಬಲ. ಊರಿನಿಂದ ಬಂದವರಿಗೆ ಊರಿನ ಕಡೆ ಸೆಳೆತ ಸಹಜ. ಆದರೆ ಬೆಂಗಳೂರಿನಲ್ಲೆ ಬೆಳೆದ ನನ್ನಂತವರಿಗೂ ಊರಿನ ಹಂಬಲ ಯಾಕೆ?. ಗೆಲ್ಲಬೇಕು ಸುಖವಾಗಿಡಬೇಕು ಅನ್ನೋದರ ಅರ್ಥ ಏನು?. ನನಗಿನ್ನೂ ಸ್ಪಷ್ಟವಾಗಿಲ್ಲ.
ಇದೊಂದು ಆರ್ಟ್ ಸಿನೆಮಾ ಆದ್ದರಿಂದ ರಿಲೀಸ್ ಕಷ್ಟ ಆಗಬಹುದು ಅಂತ ಜೋಗಿ ಹೇಳಿದ್ದರು. CD/DVD ಗಳ ಮೂಲಕವಾದರು ಇದನ್ನ ತಲುಪಿಸಿ. ನೋಡುವವರ ಸಂಖ್ಯೆ ಮಸ್ತಿದೆ.
-ವಿಕ್ರಮ ಹತ್ವಾರ
ಪರಮಣ್ಣ…. `ಲಗಾನ್’ಚಿತ್ರಕ್ಕೆ ಆಸ್ಕರ್ ಯಾಕೆ ಸಿಕ್ಕಿಲ್ಲ ಎನ್ನುವ ವಿಷಯ ಬಂದಾಗ ಅದರಲ್ಲಿ ನಟಿಸಿದ ಕಲಾವಿದ ಒಬ್ಬ “ಭಾರತೀಯರಲ್ಲದ ಅವರು ಈ ಚಿತ್ರವನ್ನು ಹೇಗೆ ಅನುಭವಿಸಿಯಾರು?” ಎಂದನಂತೆ..ಹಾಗೆ ಯಾರಿಗೆ ಇಂತಹ ಸಿನಿಮಾ ಅರ್ಥವಾಗುತ್ತದೋ, ಬಿಡುತ್ತದೋ, ಪ್ರಶಸ್ತಿ ಕೊಡುತ್ತಾರೋ, ಬಿಡುತ್ತಾರೋ; ಆದರೆ `ಗೊತ್ತಿಲ್ಲದ ಜಗತ್ತಿನಲ್ಲಿ ಹೊರಟ’ನಿನ್ನ,ನನ್ನಂತಹವರಿಗೆ ಮಾತ್ರ ಹೃದಯಸ್ಪರ್ಶಿಯಾಗಿರುತ್ತದೆ…..
ಕನ್ನಡ-ಕನ್ನಡಿಗ-ಕರ್ನಾಟಕಗಳ ಏಳಿಗೆಗೆ ಬದ್ಧವಾದ ಬನವಾಸಿ ಬಳಗದ ಹೊಸ ಬ್ಲಾಗಿಗೊಮ್ಮೆ ಭೇಟಿಕೊಡಿ. ವಿಳಾಸ:
http://enguru.blogspot.com
Post a Comment