Monthly Archives: May 2007

ಸಿನಿಮಾ: ಆಹಾ ಬೆಳದಿಂಗಳು!

ಬಾದಾಮಿ ಹೌsನಲ್ಲಿರುವ ಪ್ರಿಯದರ್ಶಿನಿ ಚಿತ್ರಮಂದಿರ ಎಂದರೆ ಸಾಕು. ಮನಸ್ಸಿನಲ್ಲಿ ಸಿನಿಮಾ ರೀಲು ಸುತ್ತಿಕೊಳ್ಳತೊಡಗುತ್ತದೆ. ಸುಮಾರು ನೂರು ಜನ ಕುಳಿತುಕೊಳ್ಳಬಹುದಾದ ಪುಟ್ಟ ಚಿತ್ರಮಂದಿರದ ಕೊನೆಯ ಸಾಲಿನ ಮೂಲೆಯ ಕುರ್ಚಿಯಲ್ಲೇ ಕುಳಿತು ಅದೆಷ್ಟೋ ಸಿನಿಮಾ ನೋಡಿದ್ದೇನೆ. `ದ್ವೀಪ’ ಚಿತ್ರದಿಂದ `ಶಾಂತಿ’ ಚಿತ್ರದ ತನಕ ಎರಡೂ ಅತಿಶಯಗಳನ್ನು ಅನುಭವಿಸಿದ್ದೇನೆ. ಬರಗೂರು ರಾಮಚಂದ್ರಪ್ಪ ನಿರ್ದೇಶಿಸಿದ ಚಿತ್ರ `ಶಾಂತಿ’ ಎನ್ನುವ ಮಾಹಿತಿ ಯಾವ ಅತಿಶಯದ ತುದಿಯಲ್ಲಿ ಯಾವ ಚಿತ್ರವಿದೆ ಎನ್ನುವುದನ್ನು ಖಚಿತಪಡಿಸುತ್ತದೆ!
ಮೊನ್ನೆ ಪ್ರಿಯದರ್ಶಿನಿಯ ಕೊನೆಯ ಸಾಲಿನ ಮೂಲೆಯಲ್ಲಿ ಕುಳಿತು ಮತ್ತೊಂದು ಚಿತ್ರ ನೋಡಿದೆ. ಆ [...]