ಸಿನಿಮಾ: ದಿ ಓಲ್ಡ್‌ ಬಾರ್ಬರ್‌

ದಿನ ಸಂಜೆ ನಾನೊಂದು ವಿಚಿತ್ರ ಸ್ಥಿತಿಯಲ್ಲಿದ್ದೆ. ಚಿತ್ರೋತ್ಸವ ವರದಿ ಮಾಡಲು ಬೆಂಗಳೂರಿನಿಂದ ಗೋವಾಕ್ಕೆ ಬಂದ ಗೆಳೆಯರೆಲ್ಲ ಹೊರಟು ಹೋಗಿದ್ದರು. ಕಲಾ ಅಕಾಡೆಮಿಯ ಎದುರಿನ ರಸ್ತೆಯಲ್ಲಿ, ಮಾಂಡೋವಿ ನದಿಯ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದರೆ ಈಗಲೇ ಬೆಂಗಳೂರಿಗೆ ವಾಪಸ್‌ ಹೊರಟುಬಿಡೋಣ ಅನಿಸುತ್ತಿತ್ತು. ಇಂಥ ಸ್ಥಿತಿಯಲ್ಲಿ ಐನಾಕ್ಸ್‌ಗೆ ಹೋಗಿ `ದಿ ಓಲ್ಡ್‌ ಬಾರ್ಬರ್‌’ ಚಿತ್ರ ನೋಡಿದೆ. ಚಿತ್ರ ಮುಗಿದಾಗ ರಾತ್ರಿ ಹನ್ನೊಂದೂವರೆ ಗಂಟೆ. ಐನಾಕ್ಸ್‌ನಿಂದ ಕಂಪಾಲ್‌ ತನಕ ರಾತ್ರಿಯ ಚಳಿಯಲ್ಲಿ ಒಬ್ಬನೇ ನಡೆದುಕೊಂಡು ಹೋಗುತ್ತಿದ್ದರೆ ತಲೆಯಲ್ಲಿ ಓಲ್ಡ್‌ ಬಾರ್ಬರ್‌ ಚಿತ್ರದ ಮರುಪ್ರದರ್ಶನ ನಡೆಯತೊಡಗಿತು. ಅದಾದ ನಂತರ ಈ ಚಿತ್ರದ ಮರುಪ್ರದರ್ಶನಗಳು ನನ್ನ ಮನಸ್ಸಿನಲ್ಲಿ ನಡೆಯುತ್ತಲೇ ಇವೆ. ಅಷ್ಟು ಖುಷಿಕೊಟ್ಟ ಚಿತ್ರ ಇದು.

105 ನಿಮಿಷಗಳ ಈ ಚಿತ್ರವನ್ನು ಕ್ಷೌರಿಕನೊಬ್ಬನ ಸ್ವಗತ ಎನ್ನಬಹುದು. 93 ವರ್ಷದ ಹುಡುಗನೊಬ್ಬ ಈ ಚಿತ್ರದ ಹೀರೋ! `93 ವರ್ಷ ವಯಸ್ಸಿನ ಹುಡುಗ’ ಎಂಬ ಪ್ರಯೋಗ ಇಲ್ಲಿ ಉದ್ದೇಶಪೂರ್ವಕ. ಏಕೆಂದರೆ ಸಿನಿಮಾ ಮುಗಿಯುವ ಹೊತ್ತಿಗೆ ನೀವು `ದಿ ಯಂಗ್‌ ಬಾರ್ಬರ್‌’ ಎಂದು ಉದ್ಗರಿಸಿರುತ್ತೀರಿ. ಈ ಪಾತ್ರ ಅಷ್ಟು ಜೀವನ್ಮುಖಿ.

ಈ ಸಿನಿಮಾದಲ್ಲಿ ಭಾವನೆಗಳ ಏರಿಳಿತಗಳು ಮೇಲ್ನೋಟಕ್ಕೆ ಕಾಣಿಸುವುದಿಲ್ಲ. ವಯಸ್ಸಾದ, ಆದರೆ ತುಂಬಾ ಜೀವನ್ಮುಖಿಯಾದ ಕ್ಷೌರಿಕನೊಬ್ಬ ತನಗೆ ತಾನೇ ಹೇಳಿಕೊಳ್ಳುವ ಸಂಗತಿಗಳನ್ನು ಪೋಣಿಸಿಟ್ಟಂತೆ ಕಾಣಿಸುವ ಕತೆ ಬದುಕಿನ ಸರಳ ಫಿಲಸಫಿಯನ್ನು ಅತ್ಯಂತ ಪರಿಣಾಮಕಾರಿಯಾಗಿ ಹೇಳುತ್ತದೆ.

ಈ ಕ್ಷೌರಿಕ ಬದುಕುತ್ತಿರುವುದು ಚೀನಾದ ರಾಜಧಾನಿ ಬೀಜಿಂಗ್‌ನಲ್ಲಿ. ಇಲ್ಲಿ ಬದಲಾಗುತ್ತಿರುವ ಬದುಕಿನ ಕ್ರಮದಲ್ಲಿ, ಆಧುನಿಕವಾಗಿರುವ ಜಗತ್ತಿನಲ್ಲಿ ಈ ಕ್ಷೌರಿಕ ಪರಕೀಯನಂತೆ ಕಾಣಿಸುತ್ತಾನೆ. ಥಳಕು ಬಳುಕಿನ ಬೀದಿಗಳ ಆಚೆ ಇರುವ ಹಳೆಯ ಮನೆಯಲ್ಲಿ ಏಕಾಂಗಿಯಾಗಿರುವ ಈತ ಮಾತಾಡುವುದು ಕಡಿಮೆ. ಈತನ ಸ್ನೇಹಿತರೂ ವಯಸ್ಸಾದವರೇ. ಆತನ ಗಿರಾಕಿಗಳೂ ವಯಸ್ಸಾದವರೇ!

ಆಧುನಿಕತೆಯನ್ನು ಮೈಗೂಡಿಸಿಕೊಂಡಿರುವ ಕಟ್ಟಿಂಗ್‌ ಸೆಲೂನ್‌ಗಳ ನಡುವೆ ಈ ಕ್ಷೌರಿಕನ ಶೈಲಿ ಮತ್ತು ಜೀವನಕ್ರಮ ಅಪ್ರಸ್ತುತವಾಗಿಬಿಟ್ಟಿದೆ. ಹೀಗಿದ್ದರೂ ಈತ ಕೂದಲು ಕತ್ತರಿಸುವುದು ನಿಲ್ಲಿಸಿಲ್ಲ. ಈತನ ಜೀವನ ಪ್ರೀತಿ ನಿಂತಿಲ್ಲ. ಈತ ಈ ಬದಲಾವಣೆಯಿಂದ ಆಗುತ್ತಿರುವ ತೊಂದರೆಗಾಗಿ ಯಾರನ್ನೂ ದೂರುವುದಿಲ್ಲ. ಈತನಿಗೆ ಬೇಜಾರಾಗುವುದಿಲ್ಲ. ಪ್ರಾಮಾಣಿಕತೆಯಿಂದ ಒಂಚೂರೂ ಆಚೆ ಸರಿಯುವುದಿಲ್ಲ. ಯಾರಾದರೂ ಪ್ರೀತಿಯಿಂದ ಹೆಚ್ಚು ದುಡ್ಡು ಕೊಟ್ಟರೂ ಆತನಿಗೆ ಬೇಡ.

ಆತ ಒಂಟಿಯಾಗಿ ಬದುಕುವ ಮನೆಯಲ್ಲಿ ಆತನದೇ ಆದ ಒಂದು ಹಳೆಯ ಗಡಿಯಾರವಿದೆ. ಈ ಗಡಿಯಾರ ಹೊಸದಾದ ಡಿಜಿಟಲ್‌ ಗಡಿಯಾರಗಳ ಜೊತೆ ಸ್ಪರ್ಧಿಸಲಾರದೇ ದಿನಕ್ಕೆ ಐದು ನಿಮಿಷ ಹಿಂದುಳಿಯುತ್ತದೆ. ಇದನ್ನು ಸರಿಪಡಿಸಲು ಆತ ಗಡಿಯಾರವನ್ನು ಅಂಗಡಿಗೆ ತರುತ್ತಾನೆ. ಅಲ್ಲಿನ ಮಾಲೀಕ ಅದನ್ನು ಸರಿಪಡಿಸಲು ಒಪ್ಪುವುದಿಲ್ಲ. ಬದಲಿಗೆ ಒಂದು ಡಿಜಿಟಲ್‌ ಗಡಿಯಾರ ಕೊಳ್ಳುವಂತೆ ಸಲಹೆ ಕೊಡುತ್ತಾನೆ. ಕ್ಷೌರಿಕ ಒಪ್ಪುವುದಿಲ್ಲ. ದಿನವೂ ಐದು ನಿಮಿಷ ಹಿಂದುಳಿಯುವ ಗಡಿಯಾರವನ್ನು ಪ್ರತಿ ದಿನ ಕೈಯಾರೆ ಐದು ನಿಮಿಷ ಮುಂದಕ್ಕೆ ಹಾಕುತ್ತ ಅದನ್ನೇ ಉಳಿಸಿಕೊಳ್ಳುತ್ತಾನೆ ಈ ವೃದ್ಧ ಕ್ಷೌರಿಕ.

ಈ ಹಳೆಯ ಗಡಿಯಾರ ಚಿತ್ರದಲ್ಲೊಂದು ಪಾತ್ರವೇ ಆಗಿಬಿಡುತ್ತದೆ ಮತ್ತು ನೋಡುಗನ ಮನಸ್ಸಿನಲ್ಲಿ ಬೆಳೆಯುತ್ತಾ ಹೋಗುತ್ತದೆ. ಎಲ್ಲವೂ ಡಿಜಿಟಲ್‌ ಆಗುತ್ತಿರುವ ಜಾಗತೀಕರಣದ ಹೊತ್ತಿನಲ್ಲಿ ದಿನವೂ ಐದು ನಿಮಿಷ ಹಿಂದುಳಿದುಬಿಡುವ, ಕ್ಷೌರಿಕನಷ್ಟೇ ಹಳೆಯದಾಗಿರಬಹುದಾದ ಈ ಗಡಿಯಾರ ಒಂದು ಸುಂದರ ರೂಪಕವಾಗುತ್ತದೆ. ಅದನ್ನು ಸರಿಪಡಿಸಲಾಗದೇ, ಬಿಡಲೂ ಆಗದೇ ದಿನವೂ ಕೈಯಿಂದಲೇ ಐದು ನಿಮಿಷ ಮುಂದಕ್ಕೆ ಹಾಕುವ ಕ್ಷೌರಿಕ ಆ ಮೂಲಕ ಜಾಗತೀಕರಣವನ್ನು ಸಾತ್ವಿಕವಾಗಿ ಪ್ರತಿಭಟಿಸುವ ಸಂಕೇತವೂ ಆಗುತ್ತಾನೆ. ಇದನ್ನು ಆತ ಗೊಣಗಾಡುತ್ತ ಮಾಡುವುದಿಲ್ಲ. ರಾತ್ರಿ ಕಾದು, ಗಡಿಯಾರ ಒಂಬತ್ತು ಗಂಟೆ ಬಾರಿಸಿಕೊಳ್ಳುತ್ತಲೇ ಐದು ನಿಮಿಷ ಮುಂದಕ್ಕೆ ಹಾಕಿ ಮಲಗಿಕೊಳ್ಳುವ ಆತ ಆ ಕೆಲಸವನ್ನೂ ಅಷ್ಟು ಪ್ರೀತಿ ಮತ್ತು ಶ್ರದ್ಧೆಯಿಂದ ಮಾಡುತ್ತ ಹೋಗುತ್ತಾನೆ.

ಇದರ ಜೊತೆಯಲ್ಲಿ ಆತನ ಇತರ ಆಸಕ್ತಿಗಳೂ ಕುತೂಹಲಕರವಾಗಿವೆ. ಆತ ಸ್ನೇಹಿತರಿಗೆ, ಗಿರಾಕಿಗಳಿಗೆ ಜೀವನ ಪ್ರೀತಿಯ ಪಾಠವನ್ನು ಸರಳವಾಗಿ ಹೇಳುತ್ತಾನೆ. ತನ್ನಿಂದ ಬೇರೆ ಇರುವ ಮಗನಿಗೆ ಬದುಕಲು ದುಡ್ಡು ಕೊಡುತ್ತಾನೆ. ಕಾರ್ಡ್‌ ಒಂದರ ನವೀಕರಣಕ್ಕೆ ಫೋಟೋ ತೆಗೆಸಿಕೊಳ್ಳಲು ಹೋಗಿ ಹತ್ತಾರು ಸಲ ತಲೆ ಬಾಚಿಕೊಂಡು ವಿಚಿತ್ರ ಸಂಭ್ರಮ ಅನುಭವಿಸುತ್ತಾನೆ. ಫೋಟೋ ಬಂದಾಗ ಹರೆಯದ ಹುಡುಗನಂತೆ ಸಂಭ್ರಮಿಸುತ್ತಾನೆ.

ಹೀಗೆ ವೃದ್ಧಕ್ಷೌರಿಕನ ಜೀವನ ಪ್ರೀತಿಯನ್ನು ಹೇಳುವ `ದಿ ಓಲ್ಡ್‌ ಬಾರ್ಬರ್‌’ನ ನಿರ್ಣಾಯಕ ಕ್ಷಣದಲ್ಲಿ ಗಡಿಯಾರದ ಲೋಲಕದ ಸದ್ದು ನಿಧಾನವಾಗಿ, ಇನ್ನೂ ನಿಧಾನವಾಗಿ, ಮತ್ತೂ ನಿಧಾನವಾಗಿ ಆಗಿ ಆಗಿ ಆಗಿ ಕೊನೆಗೆ ನಿಂತೇ ಹೋಗುತ್ತದೆ. ಗಡಿಯಾರದ ಲೋಲಕದ ಸದ್ದಿನೊಂದಿಗೆ ಕ್ಷೌರಿಕನ ಹೃದಯಬಡಿತವನ್ನು ಕಂಡುಕೊಂಡಿದ್ದ ನೋಡುಗರು ಮೂಕರಾಗುತ್ತಾರೆ. ಬೀಜಿಂಗ್‌ನ ಅನಾಮಿಕ ಬೀದಿಯಲ್ಲಿ ಏಕಾಂಗಿಯಾಗಿರುವ ಈ ಮುದುಕನನ್ನು ಹುಡುಕಿಕೊಂಡು ಮರುದಿನ ಆತನ ಮಗ ಬರುತ್ತಾನೆ. ಇಷ್ಟೊತ್ತಾದರೂ ಅಪ್ಪ ಇನ್ನೂ ಯಾಕೆ ಎದ್ದಿಲ್ಲ ಎಂದು ಮನೆಯೊಳಕ್ಕೆ ಆತ ಬರುತ್ತಿದ್ದರೆ ನೋಡುಗರ ಮನಸ್ಸಿನಲ್ಲಿ ವಿಷಾದ ಗೀತೆ ಅನುರಣಿಸತೊಡಗುತ್ತದೆ. ಆತ ಸತ್ತೇ ಹೋಗಿದ್ದಾನೆ ಎಂದು ಅಂದುಕೊಳ್ಳುವಷ್ಟರಲ್ಲಿ ಆತ `ಗಡಿಯಾರ ಹಾಳಾಗಿದೆ’ ಎನ್ನುತ್ತ ಎದ್ದು ಕುಳಿತುಕೊಳ್ಳುತ್ತಾನೆ. ಇಡೀ ಚಿತ್ರಮಂದಿರದಲ್ಲೊಂದು ಸಶಬ್ದ ನಿಟ್ಟುಸಿರು ಕೇಳಿಸುತ್ತದೆ.

ಈ ಚಿತ್ರದಲ್ಲಿ ಶಬ್ದವನ್ನು ನಿರ್ದೇಶಕ ಹಸಿ ಚಾಹುಲೊ ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದಾರೆ. ಗಡಿಯಾರದ ಲೋಲಕದ ಸದ್ದು ಮುದುಕನ ಹೃದಯಬಡಿತಕ್ಕೆ ಸಂವಾದಿಯಾಗಿಬಿಡುವುದು ಅದಕ್ಕೆ ಒಂದು ಉದಾಹರಣೆ. ಛಾಯಾಗ್ರಹಣ ಕತೆಯ ಲಹರಿಗೆ ಹೊಂದಿಕೊಂಡಿದೆ. ಕ್ಷೌರಿಕನ ಪಾತ್ರಧಾರಿ ಜಿಂಗ್‌ ಕು ನಟಿಸಿಯೇ ಇಲ್ಲ. ಫ್ರೇಮಿನೊಳಕ್ಕೆ ಸಹಜವಾಗಿ ನಡೆದಾಡಿಕೊಂಡಿದ್ದಾರೆ. ಏಕೆಂದರೆ ಜಿಂಗ್‌ ಕು ನಿಜ ಜೀವನದಲ್ಲೂ ಕ್ಷೌರಿಕ. ಈ ಚಿತ್ರದಲ್ಲಿ ಹಸಿ ಚಾಹುಲೋ ವೃತ್ತಿಪರ ಕಲಾವಿದರನ್ನು ಬಳಸಿಕೊಂಡೇ ಇಲ್ಲ ಎನ್ನುವುದೂ ಗಮನಾರ್ಹ. ಕ್ಷೌರಿಕನೊಬ್ಬನ ಸಚಿತ್ರ ಡೈರಿಯಂತೆ ಕಾಣಿಸಿಬಿಡಬಹುದಾಗಿದ್ದ ಈ ಚಿತ್ರವನ್ನು ತಮ್ಮ ತೆಳು ಹಾಸ್ಯದ ನಿರೂಪಣೆಯಿಂದ ಲವಲವಿಕೆ ಉಳಿಸಿಕೊಳ್ಳುವಂತೆ ನಿರ್ದೇಶಕರು ನೋಡಿಕೊಂಡಿದ್ದಾರೆ. ಕೊನೆಯಲ್ಲಿ ಈ ಚಿತ್ರಕ್ಕೆ ಸ್ವರ್ಣ ಮಯೂರ ಪ್ರಶಸ್ತಿ ಬಂತು. ಅದರಲ್ಲಿ ಆಶ್ಚರ್ಯವೇನಿಲ್ಲ.

`ದಿ ಓಲ್ಡ್‌ ಬಾರ್ಬರ್‌’ ನೋಡುವ ಅವಕಾಶ ಯಾವಾಗಾದರೂ ಸಿಕ್ಕಿದರೆ ತಪ್ಪಿಸಿಕೊಳ್ಳಬೇಡಿ. ಇಳಿ ಸಂಜೆಯಲ್ಲಿ ತೇಲಿಬರುವ ಭಾವಗೀತೆಯೊಂದನ್ನು ಮಿಸ್‌ ಮಾಡಿಕೊಂಡಂತಾಗುತ್ತದೆ.ಙ

12 Comments

  1. Satish
    Posted March 22, 2007 at 1:58 pm | Permalink

    Hey man!
    This is a wonderful stuff. Your writing style is so beautiful. I am a fan of you!!!!
    Satish

  2. Posted March 22, 2007 at 2:00 pm | Permalink

    ವಾಹ್! ತುಂಬಾ ಚೆನ್ನಾಗಿತ್ತು ಸರ್ ವಿಮರ್ಶೆ. ಸಿನೆಮಾ ನೋಡಿ ಬಂದಂತಾಯಿತು. ಈ ಬಾರಿ ಗೋವಾದಿಂದ ಬೇಗನೇ ಹೊರಟು ಬಂದದ್ದಕ್ಕೆ ಬೇಜಾರಾಗುವಂತೆ ಮಾಡಿದಿರಿ… ಇದೇ ಧಾಟಿಯಲ್ಲಿ ‘ಅಮೆಲಿ’ (ಫ್ರೆಂಚ್) ಎಂಬ ಸಿನೆಮಾ ನೋಡಿ.

  3. Gundkal
    Posted March 22, 2007 at 5:18 pm | Permalink

    Thanks Abhaya!
    I missed you while watching the film.

  4. ಜೋಗಿ
    Posted March 24, 2007 at 4:16 am | Permalink

    ಪರಮೇಶ್
    ಓದುತ್ತಿದ್ದಂತೆ ನನ್ನ ಗೋವಾ ದಿನಗಳ ನೆನಪಾದವು. ಗೋವಾಕ್ಕೆ ನಾನು ಹೋದದ್ದು ಕೂಡ ಚಿತ್ರೋತ್ಸವದ ನೆಪಕ್ಕೇ. ಮೊದಲ ಚಿತ್ರೋತ್ಸವ ಶುರುವಾಗುವ ಮೊದಲೇ ಹೋಗಿದ್ದೆ. ಬ್ರಿಡ್ಜ್ ಆನ್ ದಿ ರಿವರ್ ಕ್ವಾಯ್ ಚಿತ್ರದಲ್ಲಿ ಕಾಣುವ ಕ್ಯಾಂಪಿನಂಥ ಕ್ಯಾಂಪು ಹಾಕಿಕೊಂಡು ಅಲ್ಲಿ ಚಿತ್ರೋತ್ಸವಕ್ಕೆ ಚಿತ್ರಮಂದಿರ ಕಟ್ಟುವ ಕೆಲಸ ನಡೀತಿತ್ತು.
    ಅದ್ಯಾಕೋ ಗೋವಾ ನನಗೆ ಇಷ್ಟವಾಗಲಿಲ್ಲ. ಅದರ ಅಂತರಂಗದ ವ್ಯಾಮೋಹಕ್ಕೆ ವ್ಯತಿರಿಕ್ತ ಎಂಬಂತೆ ಏಳೂವರೆ ಎಂಟು ಗಂಟೆಗೆಲ್ಲ ನಿರ್ಜನವಾಗುವ ಬೀದಿ. ನಾವು ಊರಿಂದಾಚೆಗಿರೋ ಕ್ಯಾಸಿನೋಗೆ ಹೋಗಿ ಕೂರುತ್ತಿದ್ದೆವು. ಅಲ್ಲಿ ಜೂಜು, ಮೋಜು, ಮತ್ತು.
    ಕೊನೆಗೂ ನಿಚ್ಚಳವಾಗಿ ನೆನಪಲ್ಲಿ ಉಳಿದದ್ದು ದಾರಿಯಲ್ಲಿ, ಗುಣವಂತೆ ಭಟ್ಟರ ಹೊಟೆಲಿನಲ್ಲಿ ತಿಂದ ಅವಲಕ್ಕಿ ಮೊಸರು ಮಾತ್ರ.

  5. Gundkal
    Posted March 24, 2007 at 8:54 am | Permalink

    Thank you verymuch Jogi! I missed that hotel and avalakki mosaru!!

  6. R S Ranjeetha Urs
    Posted March 25, 2007 at 10:08 am | Permalink

    Hello Mr Gundkal
    Mr Gundkal you seem to be real obsessed with time, clock, its functioning, is it a leith motif in all your writings? On reading this review I was reminded of Vittorio De Sica`s “Umberto D”, as it too deals with one man`s struggle against the crumbling social security edifice of a nation and the vulnerable position in which the old people find themselves in. Even in that movie there are several beautiful scenes…however i found one of the scenes unforgettable and beautifully crafted. A scene in which the old pensioner is distraught and is left with no money and is pushed to the brink of begging…he musters enough courage and stretches his cap and makes an attempt to beg…but somehow his integrity and self-respect prevents him from doing so and finalkly when a passerby is about to flip a coin he just withdraws his cap…in a beautiful manner…indicating the triumph of the human spirit even in the face of great adversity!Just like the old baraber even Umberto retains tremendous humanity, unconditional love and zest towards life.His humanity is well exemplified in his love towards his dog!As a student of film analysis and communiaction I always found it interesting and easy to discuss a movie at greater length, interpreting it at various levels, inner meanings , symbolism and others but when it came to writing a review… i found it quite tough to bring in all my observations into one piece of writing, now on rading your review…i think i got a clue.

  7. Gundkal
    Posted March 26, 2007 at 8:48 am | Permalink

    Ranjeetha,
    Nanage idella holadiralilla. eega neevu bareda mele houdalla endu anisuttide. Nanage gadiyarada mele antha mohavenoo illa. Adaroo gadiyara nanna barahagalli kanisikolluttiruva reeti nodi swataha nanage achchari aaguttide. Any way thanks for your comment. I have not seen “Umberto D’. Will watch that and come back to you. I am sure, you can write better reviews.

  8. Posted March 29, 2007 at 12:55 pm | Permalink

    What a superb article is this. Now I am damn sure the cinema is also as engaging as this article. World cinema is overshadowed by the dominence of hollywood studios and we the common people rarely get to see good cinema. This movie has made into my list of ‘must watch’. I hope to watch this movie soon.

  9. Posted March 29, 2007 at 1:15 pm | Permalink

    Astroshiva,
    Thank you for reading my blog. Yes, of course this film is a “must watch’.

  10. Posted March 29, 2007 at 1:20 pm | Permalink

    You can add me to your blogroll. Well, my blog is not as interesting as you’s. But I ll try to improve the blog.

  11. B jayakishore
    Posted April 3, 2007 at 7:26 am | Permalink

    hi,

    Really your blog is wonderful. one my freind introduced this to me.thanks to both.
    By the way i keep telling some my’filmy’freinds to watch some good movies. have u watched Elipathayam by adoor gopalakrishnan…A wonderful movie…

    A story of a prisoner falls in love with a ‘lady voice’who is also a prisoner next to his cell seperated by a big wall…
    The person who yearned to move out of the jail every second before, now doesnt want freedom when he really gets it as an award for his good conduct!

    The film was based on a short story by malayalam writer paikkam mohd basheer

    LIFE IS NOT AS WE WISH. BUT WE HAVE TO MOVE ALONG WITH IT> ITS DIFFICULT. BUT ITS LIFE.

    WHY IS IT LIKE THAT?

    B.Jayakishore
    ===

  12. shastrimath
    Posted December 28, 2007 at 9:46 am | Permalink

    Hi Paramesh,
    Nimma ee review odi aa chitravanne nodidante anubhava aayitu. 105 nimishada chitravannu kevala 10 nimishagala nenapiduvantha odige maarpadisiruva braha idu. nanage tumba ishtavayitu. Nimma innashtu barahagalannu oduva aase aaguttide.
    Prabhudeva Shastrimath
    28-12-2007

Post a Comment

Your email is never published nor shared. Required fields are marked *
*
*