Daily Archives: March 22nd, 2007

ಸಿನಿಮಾ: ದಿ ಓಲ್ಡ್‌ ಬಾರ್ಬರ್‌

ಆ ದಿನ ಸಂಜೆ ನಾನೊಂದು ವಿಚಿತ್ರ ಸ್ಥಿತಿಯಲ್ಲಿದ್ದೆ. ಚಿತ್ರೋತ್ಸವ ವರದಿ ಮಾಡಲು ಬೆಂಗಳೂರಿನಿಂದ ಗೋವಾಕ್ಕೆ ಬಂದ ಗೆಳೆಯರೆಲ್ಲ ಹೊರಟು ಹೋಗಿದ್ದರು. ಕಲಾ ಅಕಾಡೆಮಿಯ ಎದುರಿನ ರಸ್ತೆಯಲ್ಲಿ, ಮಾಂಡೋವಿ ನದಿಯ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದರೆ ಈಗಲೇ ಬೆಂಗಳೂರಿಗೆ ವಾಪಸ್‌ ಹೊರಟುಬಿಡೋಣ ಅನಿಸುತ್ತಿತ್ತು. ಇಂಥ ಸ್ಥಿತಿಯಲ್ಲಿ ಐನಾಕ್ಸ್‌ಗೆ ಹೋಗಿ `ದಿ ಓಲ್ಡ್‌ ಬಾರ್ಬರ್‌’ ಚಿತ್ರ ನೋಡಿದೆ. ಚಿತ್ರ ಮುಗಿದಾಗ ರಾತ್ರಿ ಹನ್ನೊಂದೂವರೆ ಗಂಟೆ. ಐನಾಕ್ಸ್‌ನಿಂದ ಕಂಪಾಲ್‌ ತನಕ ರಾತ್ರಿಯ ಚಳಿಯಲ್ಲಿ ಒಬ್ಬನೇ ನಡೆದುಕೊಂಡು ಹೋಗುತ್ತಿದ್ದರೆ ತಲೆಯಲ್ಲಿ ಓಲ್ಡ್‌ ಬಾರ್ಬರ್‌ ಚಿತ್ರದ [...]

ಕತೆ:ಮೌಢ್ಯ

ಇದು ನನ್ನ ಮೊದಲ ಕತೆ. ಹದಿನಾರು ವರ್ಷಗಳ ಹಿಂದೆ ಬರೆದಿದ್ದು. ಹದಿನಾಲ್ಕನೇ ವಯಸ್ಸಿನಲ್ಲಿ ಬರೆದಿದ್ದು. ಅದನ್ನು ಪತ್ರಿಕೆಯೊಂದಕ್ಕೆ ಕಳುಹಿಸಿದ್ದೆ ಕೂಡ. ಯಥಾಪ್ರಕಾರ ಪ್ರಕಟವಾಗಲಿಲ್ಲ. ಕತೆಯ ಇನ್ನೊಂದು ಪ್ರತಿ ನನ್ನ ಬಳಿ ಈಗಲೂ ಇಲ್ಲ. ಆದರೆ ಕತೆ ನನಗೆ ನಿನ್ನೆ, ಮೊನ್ನೆ ಬರೆದಷ್ಟೇ ಚೆನ್ನಾಗಿ ನೆನಪಿದೆ. ಅದನ್ನು ಎರಡು ವರ್ಷಗಳ ಹಿಂದೆ ಇನ್ನೊಂದು ಸಲ ಬರೆದೆ. ಕಥಾ ವಸ್ತು, ನಿರೂಪಣೆಯನ್ನು ಬದಲಾಯಿಸಲಿಲ್ಲ. ಬರಹದ ಶೈಲಿ ಮಾತ್ರ ಬದಲಾಗಿದೆ. ಕತೆಗೆ `ಮೌಢ್ಯ’ ಎಂದು ಹೆಸರು ಏಕೆ ಕೊಟ್ಟಿದ್ದೆ ಎನ್ನುವುದು ಮಾತ್ರ [...]