Daily Archives: March 8th, 2007

ರೌಡಿ, ರಾಜಕಾರಣಿ, ಪತ್ರಕರ್ತ ಹೇಗಿರುತ್ತಾನೆ?

ಕನ್ನಡ ಸಿನಿಮಾಗಳಲ್ಲಿ ಕಾಣುವ ರೌಡಿಯ ಗುಣಲಕ್ಷಣಗಳೇನು?ಉದ್ದ ಕೂದಲು. ಕುರುಚಲು ಗಡ್ಡ. ಕೈಯ್ಯಲ್ಲಿ ಗನ್ನು, ರೇಜರ್‌. ಹತ್ತು ಜನ ಬಂದರೂ ಆತ ಹೊಡೆದಾಡುತ್ತಾನೆ. ಸರ್ವಶಕ್ತ. ಸರ್ವಾಂತರ್ಯಾಮಿ. ಸ್ನೇಹಿತರೆಂದರೆ ಸಾಯಲೂ ಸಿದ್ಧನಾಗುತ್ತಾನೆ. ಸಾಮಾನ್ಯವಾಗಿ ಆತನಿಗೆ ಅಮ್ಮನೆಂದರೆ ತುಂಬಾ ಪ್ರೀತಿ. ಅಪ್ಪ ಇರುವುದಿಲ್ಲ. ಮುಗ್ಧನೂ ಒಳ್ಳೆಯವನೂ ಆಗಿದ್ದವನು ಪರಿಸ್ಥಿತಿಯ ಪಿತೂರಿಗೆ ಸಿಕ್ಕು ರೌಡಿಯಾಗಿರುತ್ತಾನೆ.
ಬೆಂಗಳೂರಿನಲ್ಲಿ ನಿಜವಾದ ರೌಡಿಗಳು ಹೀಗಿರುತ್ತಾರೆಯೇ? ಕಷ್ಟ ಕಷ್ಟ. ಕನ್ನಡ ಸಿನಿಮಾದ ರೌಡಿಗಳ ಕುರಿತು ಎಸಿಪಿ ಶಿವರಾಮ್‌ ಒಂದು ಸುಂದರವಾದ ವಿಮರ್ಶೆ ಮಾಡಿದ್ದಾರೆ. ಅವರು ಹೇಳುತ್ತಾರೆ: ರೌಡಿಗಳಂಥ ಪುಕ್ಕಲು [...]