ಸತಿಸಾವಿತ್ರಿಯ ಸುಖ ದುಃಖ

daisy11.jpg 

ಮೊನ್ನೆ ಡೈಸಿ ಬೋಪಣ್ಣ ಪತ್ರಕರ್ತರನ್ನೆಲ್ಲ ಭೇಟಿಯಾಗಿದ್ದರು. ಹಳೆಯದನ್ನು ನೆನಪು ಮಾಡಿಕೊಂಡರು. ಹೊಸದರ ಕುರಿತು ಹರಟಿದರು. ಅದರ ವರದಿ ಇಲ್ಲಿದೆ.  

ಡೈಸಿ ಪತ್ರಕರ್ತರನ್ನು ಭೇಟಿಯಾಗಿದ್ದರು. ಸತ್ಯವಾನ್‌ ಸಾವಿತ್ರಿಯ ಪಾತ್ರದ ಕುರಿತು ಮಾತಾಡುವುದು ಅವರ ಉದ್ದೇಶವಾಗಿತ್ತು. ಆದರೆ `ಐಶ್ವರ್ಯ’ದ ಕುರಿತು ಮಾತಾಡಿ ಅವರು `ಸತ್ಯವಾನ್‌’ ಆದರು! ಅವರು ಹೇಳಿದ್ದು ಇಷ್ಟೇ: `ಐಶ್ವರ್ಯ’ ಚಿತ್ರದಲ್ಲಿ ಪಾತ್ರ ಒಪ್ಪಿಕೊಂಡು ತಪ್ಪು ಮಾಡಿದೆ! ಅರೆರೇ, ಐಶ್ವರ್ಯದಲ್ಲಿ ಡೈಸಿ ಪಾತ್ರವನ್ನು ಎಲ್ಲರೂ ಹೊಗಳಿದ್ದರಲ್ಲವಾ ಎಂದು ಪತ್ರಕರ್ತರು ಗೊಂದಲಗೊಂಡರು. ಇದನ್ನು ಡೈಸಿಯೂ ಒಪ್ಪಿಕೊಂಡರು: `ಐಶ್ವರ್ಯ’ ಚಿತ್ರದಲ್ಲಿ ನಾನು ಮಾಡಿದ ಪಾತ್ರವನ್ನು ಬಹಳಷ್ಟು ಜನ ಮೆಚ್ಚಿಕೊಂಡರು. ಈಗಲೂ ಜನ ನನ್ನನ್ನು `ಐಶ್ವರ್ಯ’ ಚಿತ್ರದಲ್ಲಿನ ಪಾತ್ರಕ್ಕಾಗಿಯೇ ಗುರುತಿಸುತ್ತಾರೆ. ಅದೊಂದು ಒಳ್ಳೆಯ ಪಾತ್ರವಾಗಿತ್ತಾದರೂ ನನಗೆ ತುಂಬಾ ನೋವಾಯಿತು!ಒಳ್ಳೆಯ ಪಾತ್ರ. ಜನ ಮೆಚ್ಚಿಕೊಂಡರು. ಹೀಗಿದ್ದರೂ ನೋವಾಗಿದ್ದೇಕೆ ಎಂಬ ಪ್ರಶ್ನೆ ಬಂತು. `ಹೇಳಿದ್ದು ಒಂದು ಮಾಡಿದ್ದು ಇನ್ನೊಂದು’ ಎಂದರು ಡೈಸಿ. `ಗಜನಿ’ ಮತ್ತು `ಮನ್ಮಥಡು’ ಚಿತ್ರಗಳ ಕೋಲಾಜ್‌ ಆಗಿದ್ದ ಚಿತ್ರದಲ್ಲಿ ನನ್ನ ಪಾತ್ರ ಬೇರೆ ರೀತಿ ಇರುತ್ತದೆಯೆಂದು ಹೇಳಲಾಗಿತ್ತು. ಚಿತ್ರೀಕರಣ ಮಾಡುವ ಹಂತದಲ್ಲಿ ಅದು ಬದಲಾಯಿತು. ಮೊದಲೇ ಹೇಳಬೇಕಾದ ಸಾಕಷ್ಟು ಸಂಗತಿಗಳನ್ನು ನನಗೆ ತಡವಾಗಿ ತಿಳಿಸಲಾಯಿತು ಎಂದರು ಡೈಸಿ. ಅವರಿಗೆ ಮೊದಲು ತಿಳಿಸಿದಂತೆ ಸಿನಿಮಾ ಆಗಿದ್ದರೆ ಅವರು ಇಡೀ ಚಿತ್ರದಲ್ಲಿ ಇರಬೇಕಾಗಿತ್ತಂತೆ!ಸಾವಿತ್ರಿ ಫಾಸ್ಟ್‌`ಸತ್ಯವಾನ್‌ ಸಾವಿತ್ರಿ’ಯಲ್ಲಿ ಸಾವಿತ್ರಿ ಪಾತ್ರ ತುಂಬಾ ಇಷ್ಟವಾಗಿದೆ ಎಂದು ಮಾತು ಬದಲಿಸಿದರು ಡೈಸಿ. ಸಿನಿಮಾದಲ್ಲಿ ನಟಿಸುವ ಸಂತೋಷವನ್ನು ಅವರು ನಿಜವಾಗಿ ಅನುಭವಿಸಿದ್ದು `ರಾಮ ಶಾಮ ಭಾಮ’ ಚಿತ್ರೀಕರಣದಲ್ಲಂತೆ. ರಮೇಶ್‌ ಎಲ್ಲವನ್ನೂ ಅದ್ಭುತವಾಗಿ ಪ್ಲಾನ್‌ ಮಾಡುವುದರಿಂದ ಇದು ಸಾಧ್ಯವಾಯಿತಂತೆ. `ಸತ್ಯವಾನ್‌ ಸಾವಿತ್ರಿ’ ಚಿತ್ರದಲ್ಲೂ ರಮೇಶ್‌ ಎಲ್ಲವನ್ನೂ ಅಷ್ಟೇ ಅಚ್ಚುಕಟ್ಟಾಗಿ ಮುಗಿಸುತ್ತಿದ್ದಾರಂತೆ. ಪರಿಣಾಮ: 35 ದಿನ ಚಿತ್ರೀಕರಣ ನೆಡೆಸಬೇಕಿದ್ದ ಸತ್ಯವಾನ್‌ ಸಾವಿತ್ರಿ ಬರೀ 28 ದಿನಗಳಲ್ಲಿ ಮುಗಿಯುತ್ತಿದೆ! `ಬಿಂಬ’ ಚಿತ್ರದ ಪಾತ್ರ ನನಗೆ ಬಹಳ ಸವಾಲಿನದಾಗಿತ್ತು ಎಂದು ಫ್ಲ್ಯಾಶ್‌ಬ್ಯಾಕಿಗೆ ಹೊರಳಿದರು ಡೈಸಿ. ಸ್ಕೂಟಿಯಲ್ಲಿ ಕಾಲೇಜಿಗೆ ಹೊರಟಿದ್ದವಳನ್ನು ಕರೆದು ಮಗು ಕೊಟ್ಟು ಸಾಕು ಎಂದಂತಾಗಿ ಅವರು ಸಾಕಷ್ಟು ಚಡಪಡಿಸಿದ್ದರಂತೆ. ಹೀಗಾಗಿ ಸಿನಿಮಾದ ಥ್ರಿಲ್‌ ಅನುಭವಿಸುವುದು ಅವರಿಗೆ ಸಾಧ್ಯವಾಗಲಿಲ್ಲ. ಈಗಂತೂ ಅವರು ಸಿನಿಮಾದಲ್ಲಿ ನಟಿಸುವ ರೋಮಾಂಚನವನ್ನು ಅಕ್ಷರಶಃ ಅನುಭವಿಸುತ್ತಿದ್ದಾರಂತೆ. ಎಲ್ಲ ಸರಿ ಹೋದರೆ ಸಾವಿತ್ರಿ ಪಾತ್ರಕ್ಕೆ ತಾವೇ ದನಿ ಕೊಡಬೇಕು ಎಂದೂ ಡೈಸಿ ಅಂದುಕೊಂಡಿದ್ದಾರೆ.ಡೈಸಿ ಈಗ ಪಾತ್ರಗಳನ್ನು ಅಳೆದು ಸುರಿದು ಒಪ್ಪಿಕೊಳ್ಳುತ್ತಾರೆ. `ಐಶ್ವರ್ಯ’ದಲ್ಲಿ ಮಾಡಿದ ತಪ್ಪನ್ನು ಮಾಡಲಾರೆ ಎಂದು ಅವರು ಪುನರುಚ್ಛರಿಸುತ್ತಾರೆ. ಈ ಕಾರಣಕ್ಕೇ ಅವರು ಸಾವಿತ್ರಿಯ ಪಾತ್ರದ ಹೊರತಾಗಿ ಬೇರೆ ಏನನ್ನೂ ಒಪ್ಪಿಕೊಂಡಿಲ್ಲ. `ರಾಮ ಶಾಮ ಭಾಮ’ದಲ್ಲಿ ಗರ್ಲ್‌ಫ್ರೆಂಡ್‌ ಆಗಿದ್ದ ಡೈಸಿಗೆ ಈ ಚಿತ್ರದಲ್ಲಿ ಪ್ರಮೋಷನ್‌ ಸಿಕ್ಕಿದೆ ಎನ್ನುವುದು ಕುತೂಹಲಕರ. ಅವರು ಈ ಚಿತ್ರದಲ್ಲಿ ರಮೇಶ್‌ ಹೆಂಡತಿ. ಗರ್ಲ್‌ಫ್ರೆಂಡ್‌ ಪಾತ್ರವನ್ನು ಜೆನ್ನಿಫರ್‌ ನಿಭಾಯಿಸುತ್ತಿದ್ದಾರೆ. ಆ ಪಾತ್ರ ಕೊಟ್ಟರೆ ಒಪ್ಪಿಕೊಳ್ಳುತ್ತಿರಲಿಲ್ಲವಾ ಎಂದು ಕೇಳಿ ನೋಡಿ. ತಕ್ಷಣ ಡೈಸಿ ರಾಯಭಾರಿಯಾಗುತ್ತಾರೆ: ಇಲ್ಲ, ಇಲ್ಲ. ಅದೂ ತುಂಬಾ ಒಳ್ಳೆಯ ಪಾತ್ರ. ಜೆನ್ನಿಫರ್‌ ತುಂಬಾ ಒಳ್ಳೆಯ ನಟಿ!ಡೈಸಿ ಈಗಲೂ ಮುಂಬೈ ನಿವಾಸಿ. ಅಂದರೆ ಅನಿವಾಸಿ ಕನ್ನಡಿಗರಲ್ಲಿ ಒಬ್ಬರು. ಹಿಂದಿ ಚಿತ್ರಗಳಲ್ಲಿ ನಟಿಸಬೇಕು ಎನ್ನುವುದು ಇದಕ್ಕೆ ಕಾರಣ ಅಲ್ಲವಂತೆ. ನಮ್ಮ ಕುಟುಂಬದ ಸದಸ್ಯರ ವ್ಯವಹಾರ ಅಲ್ಲಿದೆ. ಹಾಗಾಗಿ ಅಲ್ಲಿದ್ದೇನೆ ಎನ್ನುತ್ತಾರೆ ಅವರು. ಹೀಗಿದ್ದರೂ ಹಿಂದಿ ಚಿತ್ರಗಳಲ್ಲಿ ಕಾಣಿಸಿಕೊಳ್ಳುವ ವಿಷಯದಲ್ಲೂ ಅವರ ಪ್ರಯತ್ನ ಗಂಭೀರವಾಗಿದೆ. ಈಗಾಗಲೇ ಅವರು ಅಂಥ ಒಂದು ಚಿತ್ರಕ್ಕೆ ಸಹಿ ಹಾಕಿದ್ದಾರೆ. ಚಿತ್ರೀಕರಣ ಇನ್ನೂ ಶುರುವಾಗಬೇಕು.ಹಿಂದಿಯಲ್ಲಿ ಹಣ ಹೆಚ್ಚು ಸಿಗುತ್ತದೋ ಕನ್ನಡದಲ್ಲೋ ಎಂದು ಪತ್ರಕರ್ತರು ತೌಲನಿಕ ಅಧ್ಯಯನ ಶುರು ಮಾಡಿದರು. ಇಲ್ಲೂ ಡೈಸಿ ಪುನಃ ರಾಯಭಾರಿಯಾದರು. ಎಲ್ಲಿ ಹೆಚ್ಚು ಎನ್ನುವುದನ್ನು ಅವರು ಕೊನೆಗೂ ಬಾಯಿಬಿಡಲಿಲ್ಲ. `ನೀವು ಯಾವ ಬ್ಯಾನರ್‌ನಲ್ಲಿ ನಟಿಸುತ್ತಿದ್ದೀರಿ ಎನ್ನುವುದರ ಮೇಲೆ ಸಂಭಾವನೆ ತೀರ್ಮಾನವಾಗುತ್ತದೆ’ ಎಂದರು ಅವರು. ಹೀಗಿದ್ದರೂ ದಕ್ಷಿಣ ಭಾರತದ ಚಿತ್ರೋದ್ಯಮದಲ್ಲಿರುವ ಶಿಸ್ತು ಮಾತ್ರ ಅಲ್ಲಿಲ್ಲವಂತೆ. ಉದಾಹರಣೆಗೆ ಇಲ್ಲಿ ಎಷ್ಟೇ ಪ್ರಸಿದ್ಧ ನಟರಾದರೂ ಹೇಳಿದ ಸಮಯಕ್ಕೆ ಸೆಟ್‌ಗೆ ಬರುತ್ತಾರೆ. ಹಿಂದಿಯಲ್ಲಿ ಹಾಗಿಲ್ಲ!

ಡೈಸಿ ಮುಂದಿರುವ ಗುರಿಗಳೇನು? ತುಂಬಾ ಇದೆ ಎಂದರು ಡೈಸಿ. ನನ್ನಲ್ಲಿ ಇರುವ ಪ್ರತಿಭೆ ಏನು ಎನ್ನುವುದು ಗೊತ್ತಿದೆ. ಇನ್ನೂ ಒಳ್ಳೊಳ್ಳೆಯ ಪಾತ್ರಗಳನ್ನು ಮಾಡಬೇಕು ಎನ್ನುವುದು ಅವರ ಆಸೆಯಂತೆ.

One Comment

  1. Posted March 8, 2007 at 12:46 pm | Permalink

    It seems daisy has forgotten the people who tried to give moral support top her when she was very much in need of one such support. I know a friend of her, who has said that it was he who took trouble to get her a job in a now-dead television channel as an anchor. Better she remember them all, than just thinking on the future. Past makes one person’s great future. Those who forget it will be usually self-centred. Hope Daisy is not so.


Post a Comment

Your email is never published nor shared. Required fields are marked *
*
*