ಹೀರೋ ಆಗುತ್ತೇನೆ ಎಂದು ನಿರ್ದೇಶಕ ಪ್ರೇಮ್ ಹೊರಟಾಗ ಬೇಡ ಎಂದವರೇ ಹಲವರು. ಹೀಗಿದ್ದರೂ ಪ್ರೇಮ್ ಹೀರೋ ಆಗಿದ್ದಾರೆ. `ಪ್ರೀತಿ ಏಕೆ ಭೂಮಿ ಮೇಲಿದೆ?’ ಚಿತ್ರೀಕರಣ ಅರ್ಧದಷ್ಟು ಮುಗಿದಿದೆ. ಈ ನಡುವೆ ರಕ್ಷಿತಾ ಜೊತೆ ಮದುವೆಯಾಗಿದೆ. `ಪ್ರೀತಿ’ಯ ಹಾಡುಗಳು ಬಿಡುಗಡೆಯಾಗಿರುವ ಸಂದರ್ಭದಲ್ಲಿ ಪ್ರೇಮ್ ಮೊನ್ನೆ ಪತ್ರಕರ್ತರ ಜೊತೆ ಮಾತಾಡಿದರು. ಅದರ ವರದಿ ಇಲ್ಲಿದೆ.
Entries from March 2007
March 29, 2007
ಅವಳು
ಇದನ್ನು ಪುಟ್ಟ ಕತೆಯೆನ್ನಬಹುದು. ಆತ್ಮಕತೆಯೆನ್ನಬಹುದು. ಡೈರಿ ಬರವಣಿಗೆ ಎನ್ನಬಹುದು. ಗೊತ್ತಿಲ್ಲ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ಇದು ನನ್ನ ಪ್ರೀತಿಯ ಹುಟ್ಟಿನ ಕತೆ. ಅಥವಾ ಅವಳು ಹುಟ್ಟಿದ ಕತೆ. ಅವಳು ಬೆಳೆದ ಕತೆ. ಬೆಳೆಯುತ್ತ ಬೆಳೆಯುತ್ತ ಅವಳು ಬದಲಾದ ಕತೆ. ಬದಲಾಗುತ್ತ ಬದಲಾಗುತ್ತ ಬದಲಾಗುತ್ತಲೇ ಹೋದ ಕತೆ. ಅಥವಾ ಬದಲಾಗಿದ್ದು ನಾನಾ? ಓದಿದ ನೀವೇ ಹೇಳಬೇಕು.
March 28, 2007
ಕತೆ: ಕಾವ್ ಕಾವ್!
ಯೋ…ಸುಟ್ ಕೂಸೇ’ ಎಂದು ಬಯ್ದುಕೊಳ್ಳುತ್ತಾಳೆ ಹಿರ್ಬೆ, ತನ್ನಷ್ಟಕ್ಕೆ.ಹಿರ್ಬೆ ಅಂದರೆ ಗೊತ್ತಲ್ಲ?ಹಿರಿಯಬ್ಬೆ.
ಹಿರಿ ಅಬ್ಬೆ.
ಅಂದರೆ ದೊಡ್ಡಮ್ಮ.
ಅವಳ ಕೆಲಸ ಬೆಳಕು ಹರಿಯುವ ಮೊದಲೇ ಶುರುವಾಗುತ್ತದೆ. ಬಚ್ಚಲ ಒಲೆಗೆ ಬೆಂಕಿ ಹಾಕುವುದರೊಂದಿಗೆ. ಅಷ್ಟಾದ ಮೇಲೆ ಕೊಟ್ಟಿಗೆಗೆ ಹೋಗಿ ದನಗಳನ್ನು ದಣಪೆಯಿಂದ ಆಚೆ ದಾಟಿಸಿ ಬಂದು ಹಿರ್ಬೆ ಮುಖ ತೊಳೆದುಕೊಳ್ಳುತ್ತಾಳೆ. ದೇವರಿಗೊಂದು ನಮಸ್ಕಾರ ಮಾಡಿ ಪುನಃ ಕೊಟ್ಟಿಗೆಗೆ. ಈ ಸಲ ಆಕಳಿಗೆ ಗೋಗ್ರಾಸ. ಮತ್ತೆ ಮನೆಗೆ ಬಂದು ಕಾಲು ತೊಳದುಕೊಂಡವಳು ಹೆಬ್ಬಾಗಿಲು ದಾಟಿ ಅಂಗಳಕ್ಕೆ ಬರುತ್ತಾಳೆ. ಅದರ ತುದಿಯಲ್ಲಿ ತುಳಸಿ ಕಟ್ಟೆಯಿದೆ. ಅದನ್ನು ಮೂರು [...]
March 27, 2007
ಸೋಲಿನ ಟಾನಿಕ್!
ಕ್ರಿಕೆಟ್‌ನಲ್ಲಿ ಸೋತರೆ ಭಾರತಕ್ಕೆ ಒಳ್ಳೆಯದಾಗುತ್ತದೆ. ವಿಶ್ವಕಪ್ ಕ್ರಿಕೆಟ್‌ನಲ್ಲಿ ಸೋತರೆ ಇನ್ನೂ ಒಳ್ಳೆಯದಾಗುತ್ತದೆ. ಜನ ಕ್ರಿಕೆಟ್ ಬಿಟ್ಟು ಬೇರೆ ಜಗತ್ತನ್ನು ನೋಡತೊಡಗುತ್ತಾರೆ. ಬೇರೆ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಬರದ ನೀರು, ಮುರಿದ ಬಸ್‌ಸ್ಟ್ಯಾಂಡು, ಸರಿಯಿಲ್ಲದ ಫುಟ್‌ಪಾತ್‌ಗಳು ಜನರ ಗಮನಕ್ಕೆ ಬರುತ್ತವೆ. ಬ್ರೆಜಿಲ್ ತಂಡ ಫುಟ್ಬಾಲ್ ವಿಶ್ವಕಪ್ ಸೋತಾಗ ಅಲ್ಲಿನ ಎಕಾನಮಿ ಸುಧಾರಿಸುತ್ತದೆ!
March 27, 2007
ಮಾತು ಬಂಗಾರ
ಮಾಜಿ ಕ್ರಿಕೆಟ್ ಆಟಗಾರರು ವಿರೋಧ ಪಕ್ಷದಲ್ಲಿದ್ದಾರೆ. ಕ್ರಿಕೆಟ್ ಅಭಿಮಾನಿಗಳು ಅವರಿಗೆ ಹೊರಗಿನಿಂದ ಬೆಂಬಲ ಕೊಡುತ್ತಿದ್ದಾರೆ. ಪತ್ರಿಕೆಗಳು, ಚಾನೆಲ್‌ಗಳದ್ದು ಸಹ ಅದೇ ಪಕ್ಷ. ಒಟ್ಟಾರೆ ರಾಹುಲ್ ದ್ರಾವಿಡ್ ಈಗ ಗಳಿಸಿದ ರನ್‌ಗಳಿಗಿಂತ ಹೆಚ್ಚು ಪ್ರಶ್ನೆಗಳನ್ನು ಎದುರಿಸುತ್ತಿದ್ದಾರೆ. ತಲೆಗೊಂದು ಸಲಹೆಗಳು ಬರುತ್ತಿವೆ.
March 27, 2007
ವಿಶ್ಲೇಷಣೆ:ಪಾಪರ್ ಏಟ್!
ಪಾಕಿಸ್ತಾನ ಒಂದು ದಿನ ಕೆಟ್ಟದಾಗಿ ಆಡಿತು. ವಿಶ್ವಕಪ್‌ನಿಂದ ಹೊರ ಬಿತ್ತು. ಭಾರತ ಒಂದು ದಿನ ಕೆಟ್ಟದಾಗಿ ಆಡಿತು. ವಿಶ್ವಕಪ್‌ನಿಂದ ಹೊರಬಿತ್ತು. ಈಗ ಐರ್ಲೆಂಡ್ ಮತ್ತು ಬಾಂಗ್ಲಾದೇಶಗಳು ಸೂಪರ್ ಏ್ಟ್‌ನಲ್ಲಿ ಆಡುತ್ತವೆ. ಎಲ್ಲರಿಗೂ ಗೊತ್ತಿದೆ. ಬಾಂಗ್ಲಾಕ್ಕಿಂತ ಭಾರತ ಸಮರ್ಥ ತಂಡ. ಐರ್ಲೆಂಡಿಗಿಂತ ಪಾಕಿಸ್ತಾನ ಸಮರ್ಥ ತಂಡ. ಇನ್ನೊಂದು ಅವಕಾಶವಿದ್ದರೆ ಬಾಂಗ್ಲಾವನ್ನು ಭಾರತ ಸೋಲಿಸುತ್ತದೆ. ಐರ್ಲೆಂಡನ್ನು ಪಾಕಿಸ್ತಾನವೂ ಸೋಲಿಸುತ್ತದೆ. ಆದರೆ ಈ ವಿಶ್ವಕಪ್‌ನ ಸ್ವರೂಪ ಅದಕ್ಕೆ ಅವಕಾಶ ಮಾಡಿಕೊಡುವುದಿಲ್ಲ. ಇದನ್ನು ಅರ್ಥಮಾಡಿಕೊಳ್ಳದ ಕ್ರಿಕೆಟ್ ಪ್ರಿಯರು ಮಾಡುತ್ತಿರುವುದೇನು?
March 23, 2007
ಕವಿತೆ:ನನ್ನಲ್ಲಿಗೆ ಸಂಜೆ ಬಂದಿತ್ತು
ವಿಕಾಸ ನೇಗಿಲೋಣಿ ಬರಹ:
ನಿನ್ನೆ ರಾತ್ರಿ ನಿಮ್ಮ ಸಂಜೆಗಳುನನ್ನ ಮನೆಗೆ ಬಂದಿದ್ದವು
ಆಗ ನಿಮ್ಮ ಸಂಜೆಗಳು ಸಂಜೆಯಾಗಿಯೇ ಬಂದಿರಲಿಲ್ಲ.
ಅವು ನಾಚಿ ಕೆಂಪಾಗಿರಲಿಲ್ಲ
ಬಿಸಿ ಕಳಚಿ ತಂಪಾಗಿರಲಿಲ್ಲ
ಸಮಾಗಮಕ್ಕೆ ಕಾದ ಹೆಂಚಾಗಿರಲಿಲ್ಲ
ಅಷ್ಟಕ್ಕೂ ಅವು ಸಂಜೆಗಳೇ ಆಗಿರಲಿಲ್ಲ!
March 23, 2007
ಸಿನಿಮಾ: ಅರಿತೆವೇನು ನಾವು ನಮ್ಮ ಅಂತರಾಳವಾ
ವಿಕಾಸ ನೇಗಿಲೋಣಿ ಬರಹ:
ಎಲ್‌ಕೆಜಿ ಓದುತ್ತಿರುವ ಪುಟಾಣಿ ಮಗಳ ಎದುರು ಅವಳಪ್ಪ ಅಮ್ಮ ವಿಚ್ಛೇದನದ ತೀರ್ಮಾನ ತೆಗೆದುಕೊಳ್ಳುತ್ತಾರೆ. ಕಸಿವಿಸಿ ಮನಸ್ಸು, ತಡವರಿಸುವ ಹೆಜ್ಜೆ, ಹೊಡೆದುಕೊಳ್ಳುವ ಹೃದಯ ಮತ್ತು ಶಾಶ್ವತ ವೇದನೆಯೊಂದಿಗೆ ಅಪ್ಪ ಹೆಂಡತಿ ಮಗಳನ್ನು ಬಿಟ್ಟು ಹೊರಡುತ್ತಾನೆ. ಕೆನ್ನೆಯ ಮೇಲೆ ಸುರಿಯುವ ಕಣ್ಣೀರನ್ನು ಒರೆಸಿಕೊಳ್ಳಬೇಕೆಂಬುದೂ ಗೊತ್ತಾಗದ ಮಗಳು ದೂರದಲ್ಲಿ ನಿಂತುಕೊಂಡು ಪಿಟೀಲಿನ ತಂತಿಗಳ ಮೇಲೆ ಕಮಾನನ್ನು ಆಡಿಸುತ್ತಾಳೆ. ಅದು ಪುಟಾಣಿ ಕೈಗಳಿಗೆ ಸಿಕ್ಕಿ ಅಪಸ್ವರ ಹೊರಡಿಸುತ್ತದೆ. ಆ ಹೊತ್ತಿನಲ್ಲಿ ಮತ್ತೇನು ಸುಸ್ವರ ಹೊರಟೀತೇ?
March 22, 2007
ಸಿನಿಮಾ: ದಿ ಓಲ್ಡ್ ಬಾರ್ಬರ್
ಆ ದಿನ ಸಂಜೆ ನಾನೊಂದು ವಿಚಿತ್ರ ಸ್ಥಿತಿಯಲ್ಲಿದ್ದೆ. ಚಿತ್ರೋತ್ಸವ ವರದಿ ಮಾಡಲು ಬೆಂಗಳೂರಿನಿಂದ ಗೋವಾಕ್ಕೆ ಬಂದ ಗೆಳೆಯರೆಲ್ಲ ಹೊರಟು ಹೋಗಿದ್ದರು. ಕಲಾ ಅಕಾಡೆಮಿಯ ಎದುರಿನ ರಸ್ತೆಯಲ್ಲಿ, ಮಾಂಡೋವಿ ನದಿಯ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದರೆ ಈಗಲೇ ಬೆಂಗಳೂರಿಗೆ ವಾಪಸ್ ಹೊರಟುಬಿಡೋಣ ಅನಿಸುತ್ತಿತ್ತು. ಇಂಥ ಸ್ಥಿತಿಯಲ್ಲಿ ಐನಾಕ್ಸ್‌ಗೆ ಹೋಗಿ `ದಿ ಓಲ್ಡ್ ಬಾರ್ಬರ್’ ಚಿತ್ರ ನೋಡಿದೆ. ಚಿತ್ರ ಮುಗಿದಾಗ ರಾತ್ರಿ ಹನ್ನೊಂದೂವರೆ ಗಂಟೆ. ಐನಾಕ್ಸ್‌ನಿಂದ ಕಂಪಾಲ್ ತನಕ ರಾತ್ರಿಯ ಚಳಿಯಲ್ಲಿ ಒಬ್ಬನೇ ನಡೆದುಕೊಂಡು ಹೋಗುತ್ತಿದ್ದರೆ ತಲೆಯಲ್ಲಿ ಓಲ್ಡ್ ಬಾರ್ಬರ್ ಚಿತ್ರದ [...]
March 22, 2007
ಕತೆ:ಮೌಢ್ಯ
ಇದು ನನ್ನ ಮೊದಲ ಕತೆ. ಹದಿನಾರು ವರ್ಷಗಳ ಹಿಂದೆ ಬರೆದಿದ್ದು. ಹದಿನಾಲ್ಕನೇ ವಯಸ್ಸಿನಲ್ಲಿ ಬರೆದಿದ್ದು. ಅದನ್ನು ಪತ್ರಿಕೆಯೊಂದಕ್ಕೆ ಕಳುಹಿಸಿದ್ದೆ ಕೂಡ. ಯಥಾಪ್ರಕಾರ ಪ್ರಕಟವಾಗಲಿಲ್ಲ. ಕತೆಯ ಇನ್ನೊಂದು ಪ್ರತಿ ನನ್ನ ಬಳಿ ಈಗಲೂ ಇಲ್ಲ. ಆದರೆ ಕತೆ ನನಗೆ ನಿನ್ನೆ, ಮೊನ್ನೆ ಬರೆದಷ್ಟೇ ಚೆನ್ನಾಗಿ ನೆನಪಿದೆ. ಅದನ್ನು ಎರಡು ವರ್ಷಗಳ ಹಿಂದೆ ಇನ್ನೊಂದು ಸಲ ಬರೆದೆ. ಕಥಾ ವಸ್ತು, ನಿರೂಪಣೆಯನ್ನು ಬದಲಾಯಿಸಲಿಲ್ಲ. ಬರಹದ ಶೈಲಿ ಮಾತ್ರ ಬದಲಾಗಿದೆ. ಕತೆಗೆ `ಮೌಢ್ಯ’ ಎಂದು ಹೆಸರು ಏಕೆ ಕೊಟ್ಟಿದ್ದೆ ಎನ್ನುವುದು ಮಾತ್ರ [...]